ಯಲ್ಲಾಪುರ: ಶಿಲ್ಪಿ ಕಲ್ಲಿನಿಂದ ದೇವರ ಮೂರ್ತಿ ನಿರ್ಮಿಸಿದಂತೆ ಶಿಕ್ಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಉತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಾರೆ.
ಅವರು, ವಿಶ್ವದರ್ಶನ ಕನ್ನಡ ಮಾದ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ ಸಂಸ್ಕಾರ ದೀಕ್ಷಾ ಉಪನ್ಯಾಸ ಕಾರ್ಯಕ್ರಮದಲ್ಲಿ ವೇದಮೂರ್ತಿ ಅನಂತ್ ಭಟ್ಟ ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಮೂಲಕ ಅವರ ವ್ಯಕ್ತಿತ್ವ ಅನುರೂಪಿಸುತ್ತಾರೆ ಎಂದು ಹೇಳಿದರು
ವಿದ್ಯಾರ್ಥಿಗಳ ಜೀವನ ಕಠಿಣವಾದಷ್ಟು ಭವಿಷ್ಯ ಉತ್ತಮವಾಗಿರುತ್ತದೆ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಅಧ್ಯಯನಕ್ಕೆಹೆಚ್ಚು ಸಮಯ ನೀಡುವಂತೆ ಸಲಹೆ ನೀಡಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಶಾಸಕರಾದ ಶಾಂತರಾಮ್ ಸಿದ್ದಿ ಮಾತನಾಡಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಪ್ರಮುಖವಾದದ್ದು ಶಿಕ್ಷಕರು ವ್ಯಕ್ತಿತ್ವ ನಿರ್ಮಾಣಕರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ, ಆಡಳಿತಾಧಿಕಾರಿ ಅಜಯ್ ಭಾರತೀಯ, ಕನ್ನಡ ಮಾಧ್ಯಮ ಶಿಕ್ಷಕ ವೃಂದ, ಪತ್ರಿಕೋದ್ಯಮ ಉಪನ್ಯಾಸಕರು ,ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಪಾಲ್ಗೊಂಡ ಹಲವಾರು ಪಾಲಕರು ಸಂಸ್ಥೆ ಆಯೋಜಿಸಿದ ಈ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಾ ಗಾಂವ್ಕರ್ ನಿರ್ವಹಿಸಿದರು. ದೈಹಿಕ ಶಿಕ್ಷಕ ಮಹೇಶ್ ನಾಯ್ಕ ವಂದಿಸಿದರು.