ಯಲ್ಲಾಪುರ: ಬೆಡಸಗದ್ದೆಯಲ್ಲಿ ಜನವರಿ 18 ಶನಿವಾರ ಮಧ್ಯಾಹ್ನ 3:00 ವನಶ್ರೀ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ ಹೀಗಾಗಿ ಜನವರಿ 17ಕ್ಕೆ ಹೆಸರು ನೊಂದಾಯಿಸಲು ಕೊನೆದಿನವಾಗಿದೆ.
ಈ ಆಟದಲ್ಲಿ ಗೆದ್ದ ತಂಡಕ್ಕೆ ಮೊದಲ ಬಹುಮಾನ 10 ಸಾವಿರ ರೂ ಸಿಗಲಿದೆ. ಎರಡನೇ ಬಹುಮಾನ 5 ಸಾವಿರ ರೂ, ಮೂರನೇ ಬಹುಮಾನ 2 ಸಾವಿರ ರೂ ಘೋಷಣೆಯಾಗಿದೆ. ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಪಿ ನೀಡಲಾಗುತ್ತದೆ. ಇದರೊಂದಿಗೆ ಉತ್ತಮ ಲಿಪ್ಟರ್, ಉತ್ತಮ ಹೊಡೆತಗಾರರನ್ನು ಗುರುತಿಸಿ ಟ್ರೋಪಿ ನೀಡಿ ಗೌರವಿಸಲಾಗುತ್ತದೆ.
ಇನ್ನೂ ಆಟದಲ್ಲಿ ಕೆಲವು ನಿಯಮಗಳಿವೆ ಒಂದು ತಂಡದಲ್ಲಿ ಆಡಿದ ಆಟಗಾರರನು ಇನ್ನೊಂದು ತಂಡದಲ್ಲಿ ಭಾಗವಹಿಸುವ ಹಾಗಿಲ್ಲ. ಒಂದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಟಗಾರರು ತಂಡದಲ್ಲಿದ್ದು, ಪ್ರತಿಯೊಬ್ಬರು ಆಧಾರ್ ಕಾರ್ಡ ಹೊಂದಿರಬೇಕು. ಆಟಗಾರರು ಊಟದ ವ್ಯವಸ್ಥೆ ಸಮವಸ್ತ್ರ ತರುವಿಕೆ ಜೊತೆ ಸಮಯಕ್ಕೆ ಸಹ ಆದ್ಯತೆ ಕೊಡಬೇಕು ಎಂಬ ನಿಯಮಗಳಿವೆ. ಇದರೊಂದಿಗೆ ಪ್ರವೇಶ ತಂಡಕ್ಕೆ 500ರೂ ಶುಲ್ಕವನ್ನು ನೀಡಬೇಕಾಗುತ್ತದೆ.
ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಈ ನಂಬರಿಗೆ ಫೋನ್ ಮಾಡಿ 8904118163, 8050518163, 9071179393