Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Saturday, 12 October 2024

ಶಿಕ್ಷಕರಿಗೆ ತಾವೇ ದೊಡ್ಡವರೆಂಬ ಅಹಂ ಇರಬಾರದು : ಶಿಕ್ಷಕ ಸಂತೋಷ ಕೊಳಗೇರಿ

IMG-20241012-143249 ಯಲ್ಲಾಪುರ: ಸಮಾಜದ ಶಿಲ್ಪಿಗಳಾದ ಶಿಕ್ಷಕರು ತಾವೇ ದೊಡ್ಡವರೆಂಬ ಅಹಂಕಾರ ಬಿಟ್ಟು, ಸಮಾಜಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಂತೋಷ ಕೊಳಗೇರಿ ಹೇಳಿದರು. 
   ತೆಲಂಗಾರದಲ್ಲಿ ಮೈತ್ರಿ ಕಲಾ ಬಳಗ, ಮಾತೃ ಮಂಡಳಿ ಚಿನ್ನಾಪುರ, ಸೀಮಾ ಮೇಲ್ತರ್ಪು, ಚಿಮನಳ್ಳಿಯ ವನಸಿರಿ ಕಲಾ ಕೂಟ ಆಯೋಜಿಸಿದ್ದ ಶಾರದೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ನಡೆ-ನುಡಿ ಶುದ್ಧವಾಗಿರುವವರನ್ನು ಮಾತ್ರ ಸಮಾಜ ಗೌರವಿಸುತ್ತದೆ ಎಂದರು. ಗಳಿಸಿದ ವಿದ್ಯೆಯನ್ನು ಮಕ್ಕಳಿಗೆ ಸರಿಯಾಗಿ ಹಂಚಿ, ಅವರು ಸತ್ಪ್ರಜೆಯಾದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. IMG-20241012-143235 ಜಿಲ್ಲಾ ಪ್ರಶಸ್ತಿ ಪಡೆದ ಸುಚೇತಾ ಮಿರಾಶಿ, ತೇಲಂಗಾರ ಸಾಂಸ್ಕೃತಿಕ ತಾಣವಾಗಿದೆ ಮತ್ತು ಮಕ್ಕಳ ಶಿಕ್ಷಣ ಅಭಿವೃದ್ಧಿಯೇ ನಮ್ಮ ಗುರಿ ಎಂದರು. ಎಲ್ಲರನ್ನೂ ಗುರುತಿಸಿ ನಡೆವ ಮೈತ್ರಿ ಬಳಗ ಸಮಾಜ ಮುಖಿಯಾಗಿದೆ ಎಂದು ಅವರು ಹೇಳಿದರು. 
   ಕೈಗಾದ ಅಧಿಕಾರಿ ವಿಶ್ವೇಶ್ವರ ಗಾಂವ್ಕರ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಆತ್ಮ ತೃಪ್ತಿ ಸಿಗುತ್ತದೆ. ಇಂಜಿನಿಯರ್ ಅಥವಾ ಇತರೆ ವೃತ್ತಿಗಳಲ್ಲಿ ಹಣ ಗಳಿಸಬಹುದು, ಆದರೆ ಸಾಮಾಜಿಕ ಮನ್ನಣೆ ಸಿಗುವುದು ಶಿಕ್ಷಕರಿಗೆ ಮಾತ್ರ ಎಂದರು. IMG-20241012-143221 ಶಾರದೋತ್ಸವದಲ್ಲಿ ಸನ್ಮಾನ ಸಮಾರಂಭ ಹಾಗೂ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ರಂಗೋಲಿ, ಗುರಿಹೊಡೆಯುವುದು, ಸಂಗೀತ ಖುರ್ಚಿ, ಚೆಸ್, ಭಕ್ತಿ ಗೀತೆ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು. ಸಂತೋಷ ಕೊಳಗೇರಿ ಹಾಗೂ ಸುಚೇತಾ ಮಿರಾಶಿ ದಂಪತಿಗಳಿಗೆ ಮೈತ್ರಿ ಶಿಕ್ಷಕ ರತ್ನ ಬಿರುದು ನೀಡಿ ಸನ್ಮಾನಿಸಲಾಯಿತು. 
    ಅಶ್ವಿನಿ ಮತ್ತು ವೈಭವಿ ಸ್ವಾಗತಗೀತೆ ಹಾಡಿದರು. ಬಳಗದ ಗೌರವ ನಿರ್ದೇಶಕ ಜಿ,ಎನ್‌,ಅರುಣಕುಮಾರ ಸ್ವಾಗತಿಸಿದರು. ಸತ್ಯನಾರಾಯಣ ಚಿಮನಳ್ಳಿ ವಂದಿಸಿದರು. ಬಳಗದ ಕಾರ್ಯದರ್ಶಿ ಮಂಜುನಾಥ ಮೂಲೆಮನೆ, ಶಿಕ್ಷಕಿ ವಿದ್ಯಾ ನಾಯ್ಕ ನಿರೂಪಿಸಿದರು.

'ಬನ್ನಿ ತಗೊಂಡು ಬಂಗಾರದಂಗೆ ಇರೋಣ' : ಗ್ರಾಮೀಣ, ಸಣ್ಣ ಪಟ್ಟಣದ ಸೌಹಾರ್ದದ 'ಜನಪದ ದಸರಾ' ಹಬ್ಬ

IMG-20241012-075715 ಯಲ್ಲಾಪುರ: 'ಬನ್ನಿ ತಗೊಂಡು ಬಂಗಾರದಂಗೆ ಇರೋಣ' ಶಪಥ ಮಾಡುವ ದಸರಾ ಹಬ್ಬವು, ಗ್ರಾಮೀಣ ಭಾಗದಲ್ಲಿ ಬನ್ನಿ ವೃಕ್ಷವನ್ನು ಪೂಜಿಸುವ, ಬನ್ನಿ ಎಲೆಯನ್ನು ಬಂಗಾರವೆಂದು ಹೊಗಳಿ ಹಂಚುವ ವಿಶೇಷ ಆಚರಣೆಯಾಗಿದೆ. ನಮ್ಮ ಗ್ರಾಮೀಣ ಹಬ್ಬಗಳಲ್ಲಿ ಅನೇಕ ಕೃಷಿ ಪ್ರಧಾನ ಆಚರಣೆಗಳಿದ್ದು, ಧರ್ಮ ಮತ್ತು ಪಿತೃ-ಮಾತೃಪ್ರಧಾನ ವ್ಯವಸ್ಥೆಯೊಂದಿಗಿನ ಸಹಬಾಳ್ವೆಯನ್ನು ತೋರುತ್ತವೆ. 
   ಗ್ರಾಮೀಣ ಜನಪದ ದಸರಾ ಹಬ್ಬವು, ಶಿವ ಮತ್ತು ಶಕ್ತಿಯ ಪೂಜೆಯನ್ನು ಪ್ರತಿಬಿಂಬಿಸುತ್ತದೆ. ಮೈಸೂರು ದಸರಾ ಹಬ್ಬದಂತೆ, ಜನಪ್ರಿಯತೆಯನ್ನು ಪಡೆದ ಈ ಹಬ್ಬವು, ಹಳ್ಳಿ ಬಾಳಿಗೆ ಅನ್ವಯವಾಗುವಂತೆ ವೈವಿಧ್ಯಮಯ ಸಂಸ್ಕೃತಿಯ ನೆಲೆಯಲ್ಲಿ ನಡೆದುಕೊಳ್ಳುತ್ತದೆ. IMG-20241012-075701 'ಬನ್ನಿ ಹಬ್ಬ' ಎಂಬ ಹೆಸರಿನಿಂದಲೂ ಪ್ರಖ್ಯಾತವಾಗಿರುವ ಈ ಹಬ್ಬದಲ್ಲಿ, ಬನ್ನಿ ವೃಕ್ಷವನ್ನು ಪೂಜಿಸಿ ಅದರ ಎಲೆಗಳನ್ನು ಬಂಗಾರವೆಂದು ಗೌರವಿಸುವ ಆಚರಣೆ ಮಾಡಲಾಗುತ್ತದೆ. ಪಾಂಡವರ ಕಥೆಯನ್ನು ಸ್ಮರಿಸುವ ಈ ಹಬ್ಬವು, ಪ್ರೀತಿ, ಬಡತನ ಮತ್ತು ಜೀವನದ ಕಷ್ಟ-ಸಂಕಟಗಳ ಮೂಲಕ ಬೆಸೆಯುವ ಜೀವಸಂದೇಶವನ್ನು ನೀಡುತ್ತದೆ. 
   ಯಲ್ಲಾಪುರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬನ್ನಿ ವೃಕ್ಷವನ್ನು ಪೂಜಿಸಿ ಬಂಗಾರದ‌ ಎಲೆಗಳನ್ನಾಗಿ ಪರಿವರ್ತಿಸಿ ಹಂಚಿ ಪ್ರೀತಿ, ವಿಶ್ವಾಸ, ಸಹಬಾಳ್ವೆ ಕೋರಿಕೊಳ್ಳಲಾಗುತ್ತದೆ. IMG-20241012-075648 ಬನ್ನಿ ವೃಕ್ಷವನ್ನು ಪೂಜಿಸುವ ಮೂಲಕ, ಪಾಂಡವರು ಬನ್ನಿ ವೃಕ್ಷದಲ್ಲಿ ವಾಸವಾಗಿದ್ದಾರೆ ಎಂಬ ಜನಪದ ನಂಬಿಕೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ, ಊರದ ನಾಯಕರು ಮತ್ತು ಸಾಮೂಹಿಕತೆ ಈ ಆಚರಣೆಗೆ ಹೆಚ್ಚಿನ ಸೌಹಾರ್ದವನ್ನು ತಂದೊಡ್ಡುತ್ತವೆ. 
    ಬಾಳಿನಲ್ಲಿ ಬನ್ನಿ ಎಲೆಗಳನ್ನು ಹಂಚಿಕೊಳ್ಳುವುದು, ಸೌಹಾರ್ದ ಬಂಗಾರವೆಂದೇ ಪರಿಗಣಿಸುವ ಹಬ್ಬದ ಮಹತ್ವವನ್ನು ತೋರಿಸುತ್ತದೆ. ಹಳ್ಳಿಯ ಹಿರಿಯರು, ಜೀವನದ ಸಾಧನೆಗೆ ಮತ್ತು ಸರಳತೆಯ ಪಾಠವನ್ನು ಒಟ್ಟು, ಮುಂದಿನ ಪೀಳಿಗೆಗೆ ಈ ಹಬ್ಬವನ್ನು ಆದರ್ಶವಾಗಿ ಬೋಧಿಸುತ್ತಾರೆ. 
   ಪ್ರತಿ ಹಬ್ಬವು ಹೊಸ ಹುರುಪನ್ನು ತರುತ್ತದೆ. ಬನ್ನಿ ಎಲೆಯ ಆಚರಣೆ, ನಿಸರ್ಗವನ್ನು ಪ್ರೀತಿಸುವ ಮನೋಭಾವವನ್ನು ಕಟ್ಟಿಕೊಡುತ್ತದೆ. ಹಳ್ಳಿ ಬಾಳಿನ ಶ್ರೇಷ್ಠತೆಯನ್ನು ಸಾರುವ ಜನಪದ ದಸರಾ ಹಬ್ಬವು, ಸಂಸ್ಕೃತಿಯ ಪರಂಪರೆಗಿಂತಲೂ ಮುಂದಿನ ಪೀಳಿಗೆಗೆ ಹೊಸ ದಾರಿ ತೋರಿಸುವ ದೀಪದಂತೆ ಬೆಳಗುತ್ತದೆ. 
   ನಮ್ಮೆಲ್ಲ ಜಾಹಿರಾತುದಾರರಿಗೆ, ಓದುಗರಿಗೆ, ಸುದ್ದಿಗಳನ್ನು ನೀಡುವ ಗ್ರಾಮೀಣ ಭಾಗದ ಪ್ರೋತ್ಸಾಹಕರಿಗೆ ದಸರಾ ಹಬ್ಬದ ಶುಭಾಶಯಗಳು. ಬನ್ನಿ ....'ಬನ್ನಿ ತಗೊಂಡು ಬಂಗಾರದಂಗೆ ಇರೋಣ'.
       ....... ಜಗದೀಶ ನಾಯಕ(ಯಲ್ಲಾಪುರ ನ್ಯೂಸ್)