Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Monday, 7 October 2024

ಜಿಲ್ಲೆಯಲ್ಲಿ 32 ಸಾವಿರ ಅರಣ್ಯವಾಸಿಗಳ ಉಚಿತ ಜಿಪಿಎಸ್ ಮೇಲ್ಮನವಿ : ರವಿಂದ್ರ ನಾಯ್ಕ

IMG-20241007-181631 ಯಲ್ಲಾಪುರ/ ಶಿರಸಿ : ಅರಣ್ಯ ಹಕ್ಕು ಕಾಯಿದೆಯಲ್ಲಿ ಅಸಮರ್ಪಕ ಜಿಪಿಎಸ್ ಸಂಬಂಧಿಸಿ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಸುಮಾರು 32 ಸಾವಿರಕ್ಕಿಂತ ಮಿಕ್ಕಿ ಅರಣ್ಯವಾಸಿಗಳ ಕುಟುಂಬಗಳಿಂದ ಜಿಪಿಎಸ್ ಮೇಲ್ಮನವಿ ಮಾಡುವ ಮೂಲಕ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಬೆಂಬಲವನ್ನ ಹೋರಾಟಗಾರರ ವೇದಿಕೆಯು ಬೆಂಬಲ ನೀಡಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು. IMG-20241007-181415 ಅವರು ಇಂದು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಜಿಪಿಎಸ್ ಮೇಲ್ಮನವಿ ಪ್ರತಿಯನ್ನು ವಿತರಿಸಿ ಮಾತನಾಡುತ್ತ ಹೇಳಿದರು. ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 87,757 ಅರ್ಜಿಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ಪ್ರಥಮ ಹಂತದಲ್ಲಿ 67,333 ಕುಟುಂಬದ ಅರ್ಜಿಗಳು ತಿರಸ್ಕಾರವಾಗಿದೆ. ಜಿಪಿಎಸ್ ಆಗಿರುವಂತಹ ಪ್ರಕರಣಗಳಲ್ಲಿ ಕೊಟ್ಟಿಗೆ, ಸಾಗುವಳಿ ಕ್ಷೇತ್ರ, ಗೊಣವೆ, ಅಂಗಲ, ಮುಂತಾದ ಜೀವನ ಅವಶ್ಯ ಸಾಗುವಳಿ ಕ್ಷೇತ್ರ ಬಿಟ್ಟಿರುವದರಿಂದ ಮೇಲ್ಮನವಿ ಅಭಿಯಾನ ಜರುಗಿಸುವುದು ವೇದಿಕೆಯ ಕಾನೂನು ಹೋರಾಟವು ಮಾದರಿ ಹೋರಾಟವಾಗಿದೆ ಎಂದು ಅವರು ಹೇಳಿದರು. IMG-20241007-181440 ಸಭೆಯಲ್ಲಿ ರಾಜು ನರೇಬೈಲ್, ಇಬ್ರಾಹಿಂ ಗೌಡಳ್ಳಿ, ನಾಗರಾಜ ಸದಾಶಿವ ದೇವಸ್ಥಳಿ, ಎಮ್. ಆರ್. ನಾಯ್ಕ ಮಾತನಾಡಿದ್ದರು. ನೆಹರು ನಾಯ್ಕ, ಗಂಗೂಬಾಯಿ.ಆರ್.ರಜಪೂತ, ಮಲ್ಲೇಶ ಬಸವಂತಪ್ಪ ಬಾಳೇಹಳ್ಳಿ, ಚಂದ್ರಶೇಖರ ಶ್ರೀಕಾಂತ ಶಾನಭಾಗ, ಕಲ್ಪನಾ ಪಾವಸ್ಕರ್ ದೊಡ್ನಳ್ಳಿ, ರಮೇಶ ಮರಾಠಿ ಉಪಸ್ಥಿತರಿದ್ದರು. 

 ಬೆಂಗಳೂರ ಚಲೋ:  

ನ. 7 ರಂದು ಬೆಂಗಳೂರಿನ ಪ್ರೀಡಮಂ ಪಾರ್ಕನಲ್ಲಿ ಜರುಗಲಿರುವ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಬೇಕೇಂದು ಅಧ್ಯಕ್ಷ ರವೀಂದ್ರ ನಾಯ್ಕ ಕರೆ ನೀಡಿದರು.

ಯೋಗೇಶ ಶಾನಭಾಗ ಕ್ರಿಕೆಟ್ ಅಕಾಡೆಮಿಯ 6 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ.

IMG-20241007-163424 ಯಲ್ಲಾಪುರ : ಅಕ್ಟೋಬರ್ 3 ರಂದು ಮುಂಡುಗೋಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಶಾಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಆಯ್ಕೆಯಲ್ಲಿ ಯಲ್ಲಾಪುರದ ಯೋಗೇಶ್ ಶಾನಭಾಗ್ ಅವರ ಯೋಗಿ ಕ್ರಿಕೆಟ್ ಅಕಾಡೆಮಿಯ (YOGI CRICKET ACADEMY) ಯ 6 ಆಟಗಾರರು ಅಂಡರ್14 ಮತ್ತು ಅಂಡರ್17 ವಯೋಮಿತಿಯಲ್ಲಿ ಶಿರಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. 
    ಅಂಡರ್ 14ರಲ್ಲಿ ರೂಹಾನ್ ಅಹ್ಮದ್ ಮತ್ತು ಶಾನೀದ್ ಟಿಪಿ ಆಯ್ಕೆಯಾದರೆ, ಅಂಡರ್ 17 ವಯೋಮಿತಿಯಲ್ಲಿ ವಿಸ್ಮಿತ್ ವಿಶ್ವನಾಥ್ ಹೆಗಡೆ, , ನಾಗರಾಜ ಸದಾನಂದ ಶಾನಭಾಗ, ಗಣೇಶ ಭಟ್ ಮತ್ತು ಹುಸೇಫ್ ಶೇಖ್ ಆಯ್ಕೆ ಆಗಿದ್ದಾರೆ. IMG-20241007-163308 ಈ ಮಹತ್ತರ ಸಮಯದಲ್ಲಿ ಮಕ್ಕಳಿಗೆ ವಿಶೇಷ ಪ್ರೋತ್ಸಾಹ ನೀಡಿದ ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್,ನ ಅಧ್ಯಕ್ಷರಾದ ಸತೀಶ ಬಾಳಾ ನಾಯ್ಕ ಚಿನ್ನಾಪುರ, ಅಕ್ಬರ್ ಅಲಿ, ಅಸಗರ್ ಅಲಿ, ಅಭಿಷೇಕ ಬೋರ್ಕರ್, ಶಿಕ್ಷಕ ಮಾರುತಿ ನಾಯ್ಕ ಮತ್ತು ಹನ್ಸ್ ನ್ಯಾಚುರಲ್ಸ್ ನ ಮಾಲೀಕರಾದ ವಿಶಾಲ ಶಾನಭಾಗ ಮತ್ತು ಫಿಟ್ನೆಸ್ ಕೋಚ್ ಜಿ ಎಂ ತಾಂಡುರಾಯನ್ ಅವರನ್ನು ಯೋಗೇಶ್ ಶಾನಭಾಗ್ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. IMG-20241007-161747 ಇದರ ಜೊತೆಗೆ ಹಳೆಯ ಆಟಗಾರರಾದ ಕ್ರೀಡಾ ಸಂಗಮದ ಪದ್ಮನಾಭ ಶಾನಭಾಗ, ದ್ವಾರಕಾನಾಥ ಶಾನಭಾಗ, ಆನಂದು ಶಾನಭಾಗ ಮತ್ತು ವಿವೇಕಾನಂದ ಶಾನಭಾಗ ಅವರು ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಮುಂದಿನ‌ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹಾರೈಸಿದ್ದಾರೆ. IMG-20241007-163530 ಕಳೆದ ಮೇ ತಿಂಗಳಲ್ಲಿ ಯೋಗೇಶ್ ಶಾನಭಾಗ ನೇತೃತ್ವದಲ್ಲಿ ಮತ್ತು ಕೋಚ್ ದರ್ಶನ್ ಪಟಗಾರ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಅಂಡರ್16 ಕ್ರಿಕೆಟ್ ಕ್ಲಬ್‌ನ ಆಟಗಾರರನ್ನು ಯಲ್ಲಾಪುರದ ವಿದ್ಯಾರ್ಥಿಗಳು ಸೋಲಿಸಿರುವುದು ಇಲ್ಲಿ ನೆನಪಿಸಿಕೊಳ್ಳಬಹುದು.

ನಾಳೆ ಮಂಗಳವಾರ ದೇವಿ ದೇವಸ್ಥಾನದಲ್ಲಿ ಯಲ್ಲಾಪುರದ ರಾಜಸ್ಥಾನಿ ವಿಷ್ಣು ಸಮಾಜದವರಿಂದ ಅನ್ನ ಸಂತರ್ಪಣೆ

IMG-20241007-154623 ಯಲ್ಲಾಪುರ : ಭಗತ್ ಸಿಂಗ್ ಅಟೋ ಚಾಲಕ ಮತ್ತು ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ, ಲಾರಿ ಚಾಲಕರ ಸಂಘ, ಬಸವೇಶ್ವರ ಗೂಡ್ಸ್ ಲಕ್ಷಾ ಚಾಲಕ ಮತ್ತು ಮಾಲಕರ ಸಂಘ ಹಾಗೂ ಕನ್ನಡ ಪರ ಸಂಘಟನೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನವರಾತ್ರಿಯ ನಿಮಿತ್ತವಾಗಿ ಶುಕ್ರವಾರ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ನಾಳೆ ಮಂಗಳವಾರ ಯಲ್ಲಾಪುರದ ರಾಜಸ್ಥಾನಿ ವಿಷ್ಣು ಸಮಾಜದವರಿಂದ ಅನ್ನ ಸಂತರ್ಪಣೆ ನಡೆಯಲಿದೆ. IMG-20241007-153946 IMG-20241007-153909 ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಭವದ ನವರಾತ್ರಿ ಉತ್ಸವದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗುತ್ತದೆ, ವಿವಿಧ ಸಂಘಟನೆಗಳ ಮುಖಂಡರಾಗಿರುವ ಸಂತೋಷ ನಾರಾಯಣ ನಾಯ್ಕ ನೇತೃತ್ವದಲ್ಲಿ ಅನ್ನಪ್ರಸಾದ ವಿತರಣಾ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತಿದೆ.santu-anna-till- oct-9 ಅಕ್ಟೋಬರ್ 8ರ ಮಂಗಳವಾರ ಮಧ್ಯಾಹ್ನ 12:30ರಿಂದ 3:30ರ ವರೆಗೆ ರಾಜಸ್ಥಾನಿ ವಿಷ್ಣು ಸಮಾಜ ಯಲ್ಲಾಪುರದ ಸಹಯೋಗದೊಂದಿಗೆ ಕನ್ನಡ ಪರ ಸಂಘಟನೆ ಯಲ್ಲಾಪುರದ ನೇತೃತ್ವದಲ್ಲಿ ಎರಡನೇ ಹಂತದ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಸಂತೋಷ ನಾಯ್ಕ ತಿಳಿಸಿದ್ದಾರೆ.

ಹೋಲಿ ರೋಜರಿ ಚರ್ಚ್‌ನ ವಾರ್ಷಿಕೋತ್ಸವ ಧಾರ್ಮಿಕ ಸಂಭ್ರಮ

IMG-20241007-135616 ಯಲ್ಲಾಪುರ: ಪಟ್ಟಣದ ಹೋಲಿ ರೋಜರಿ ಚರ್ಚ್‌ ವಾರ್ಷಿಕೋತ್ಸವವನ್ನು ಸೋಮವಾರ ಅತ್ಯಂತ ಭಕ್ತಿ ಮತ್ತು ಧಾರ್ಮಿಕ ಭಾವನೆಯಿಂದ ಆಚರಿಸಲಾಯಿತು. ಉತ್ತರ ಕನ್ನಡ ಜಿಲ್ಲೆ ಹಾಗೂ ಗೋವಾ ರಾಜ್ಯದಿಂದ 800ಕ್ಕೂ ಹೆಚ್ಚು ಕ್ರೈಸ್ತ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚರ್ಚ್‌ನ ವಾರ್ಷಿಕೋತ್ಸವವನ್ನು ಸಂಭ್ರಮಿಸಿದರು. 
    ವಾರ್ಷಿಕೋತ್ಸವದ ಪ್ರಮುಖ ಕಾರ್ಯಕ್ರಮವಾಗಿ ಹೋಲಿ ರೋಜರಿ ಚರ್ಚ್‌ನ ಪ್ರಧಾನ ಗುರುಗಳಾದ ಫಾ. ಬಾವ್ತೀಸ್ ಅವರು ಸಹಗುರುಗಳ ಮೂಲಕ ಬಲಿಪೂಜೆ ಸಲ್ಲಿಸಿದರು. ಚರ್ಚ್‌ನ ಪ್ರಧಾನ ಗುರು ಫಾ. ಪೀಟರ್ ಕಾರ್ನೇಲೊ, ಎಲ್ಲಾ ಗುರುಗಳು ಹಾಗೂ ದೂರದಿಂದ ಆಗಮಿಸಿದ ಭಕ್ತರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. IMG-20241007-135303 ಹಳಿಯಾಳ ಡಿನರಿಯ ಡಿನ್ ಆದ ಫಾದರ್ ರೇಮಂಡ್ ಡಿಸೋಜಾ ಹಾಗೂ ಸಹಾಯಕ ಗುರುಗಳಾದ ಫಾದರ್ ಸೈಮನ್... ಕಾರ್ಯಕ್ರಮದಲ್ಲಿ ಸಹಕರಿಸಿ, ಭಕ್ತರಿಗೆ ಧಾರ್ಮಿಕ ಸೇವೆಗಳನ್ನು ಒದಗಿಸಿದರು. ಸಂಜೆಯ ವೇಳೆಗೆ ಫಾ.ರೇಮಂಡ್ ಹಾಗೂ ಸಹಾಯಕ ಗುರುಗಳ ನಿರ್ದೇಶನದಲ್ಲಿ, ನಿಕ್ಸನ್ ಅಲ್ಫಾನ್ಸೊ ಮತ್ತು ಚರ್ಚ್‌ನ ಸದಸ್ಯರು ಸಂಘಟಿಸಿದ್ದ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ. 
     ವಾರ್ಷಿಕೋತ್ಸವದಲ್ಲಿ ಭಕ್ತರು ತಮ್ಮ ಧಾರ್ಮಿಕ ಭಾವನೆಗಳನ್ನು ವ್ಯಕ್ತಪಡಿಸಿ, ಪರಸ್ಪರ ಸಂವಾದ ನಡೆಸಿ, ಚರ್ಚ್‌ನ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಚರ್ಚ್‌ನ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಈ ಕಾರ್ಯಕ್ರಮವನ್ನು ಅತ್ಯಂತ ಸುಸಜ್ಜಿತವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಶ್ರಮಿಸಿದ್ದು, ಭಕ್ತರಿಂದ ಮೆಚ್ಚುಗೆಗೆ ಪಾತ್ರವಾಯಿತು. 
     ಈ ವಾರ್ಷಿಕೋತ್ಸವವು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲದೆ, ಕ್ರೈಸ್ತ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸುವ ಒಂದು ಪ್ರಯತ್ನವಾಗಿದ್ದು, ಈ ರೀತಿಯ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಸೌಹಾರ್ದತೆಯನ್ನು ಬೆಳೆಸಲು ನೆರವಾಗುತ್ತವೆ ಎಂದು ಭಕ್ತರು ಅಭಿಪ್ರಾಯಪಟ್ಟರು.

ಯಲ್ಲಾಪುರ ಭೂ ನ್ಯಾಯ ಮಂಡಳಿಯ ನೂತನ ಸದಸ್ಯರಾಗಿ ಜಗ್ಗು ರಾಮು ಹುಂಬೆ

IMG-20241007-115730 ಯಲ್ಲಾಪುರ : ಯಲ್ಲಾಪುರದ ಭೂ ನ್ಯಾಯ ಮಂಡಳಿಗೆ ನೂತನ ಸದಸ್ಯರಾಗಿರುವ ಜಗ್ಗು ರಾಮು ಹುಂಬೆ ಅವರನ್ನು ಅವರನ್ನು ರಾಜ್ಯ ಸರ್ಕಾರ ನೇಮಕ‌ಮಾಡಿದೆ. ಕಿರವತ್ತಿ, ಹೊಸಳ್ಳಿಯವರಾಗಿದ್ದಾರೆ. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಪಿಯುಸಿ/ಜೆಓಸಿ 2 ಮಟ್ಟದ ವ್ಯಾಸಂಗ ಮಾಡಿರುವ ಹುಂಬೆಯವರು, ಕಿರವತ್ತಿ ಗ್ರಾಮ ಪಂಚಾಯತ್‌ನ ಸದಸ್ಯರಾಗಿದ್ದು, ತಮ್ಮ ಸಮುದಾಯಕ್ಕಾಗಿ ಅನೇಕ ಶ್ರೇಯಸ್ಸಿನ ಕೆಲಸಗಳನ್ನು ನಿರ್ವಹಿಸಿದ್ದಾರೆ. IMG-20241007-112855 ಹುಂಬೆಯವರು ಕಿರವತ್ತಿ ಗ್ರಾಮದ ಪ್ರಗತಿ ದನಗರ ಗೌಳಿ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದು, ತಮ್ಮ ಗ್ರಾಮಸ್ಥರಿಗೆ ಅನೇಕ ರೀತಿಯ ಸಹಾಯವನ್ನು ಒದಗಿಸುತ್ತಿದ್ದಾರೆ. ಹೀಗೆ ಅವರು ತಮ್ಮ ಸಂಘಟನಾತ್ಮಕ ಕೌಶಲ್ಯವನ್ನು ಸಂಘದ ಅಭಿವೃದ್ದಿಗೆ ಬಳಸುತ್ತಿದ್ದಾರೆ. ಅಲ್ಲದೇ, ಟಿಎಲ್‌ಎಮ್ ಸರ್ಕಾರೇತರ ಮಹಿಳಾ ಸಂಘವನ್ನು ರಚಿಸುವ ಮೂಲಕ ಮಹಿಳೆಯರ ಸಬಲಿಕರಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. IMG-20241007-112843 ಹುಂಬೆಯವರು ಜಿ.ಪಂ ಮಾಜಿ ಸದಸ್ಯ ಹಾಗೂ ಕಿರವತ್ತಿ ಭಾಗದ ಪ್ರಮುಖ ಸಾಮಾಜಿಕ ಮುಖಂಡ ವಿಜಯ ಮಿರಾಶಿ, ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್, ಹಾಗೂ ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ್ ಅವರ ಪ್ರೇರಣೆಯಿಂದ ಭೂ ನ್ಯಾಯ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸ್ಥಾನದಲ್ಲಿ ಅವರು ತಮ್ಮ ಬುದ್ದಿಮತ್ತೆ, ಶ್ರದ್ಧೆ, ಹಾಗೂ ನಿರಂತರ ಶ್ರಮದಿಂದ ಸಮಾಜದ ಹಿತದ್ರಷ್ಟಿಯಾಗಿದ್ದಾರೆ. 
    ಜಗ್ಗು ರಾಮು ಹುಂಬೆಯವರು ತಮ್ಮ ಹುದ್ದೆಯ ಮೂಲಕ ಭೂ ನ್ಯಾಯ ಮಂಡಳಿಯ ಕಾರ್ಯಗಳನ್ನು ಶ್ರೇಯಸ್ಸಿನಿಂದ ನಿಭಾಯಿಸಲು ಬದ್ಧರಾಗಿದ್ದಾರೆ. ಅವರ ಮುಂದಿನ ಗುರಿ, ಜನಸಾಮಾನ್ಯರ ಭೂ-ಸಂಬಂಧಿ ಸಮಸ್ಯೆಗಳ ಪರಿಹಾರ ಹಾಗೂ ನ್ಯಾಯಯುತ ನಿರ್ಣಯಗಳ ಮೂಲಕ ಜನರ ಶ್ರೇಯಸ್ಸು ಸಾಧಿಸುವದು.       ಭೂ ನ್ಯಾಯ ಮಂಡಳಿಯ ನೂತನ ಸದಸ್ಯರಾಗಿ , ಜಗ್ಗು ರಾಮು ಹುಂಬೆಯವರು ತಮ್ಮ ಹುದ್ದೆಯ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲು ತಯಾರಾಗಿದ್ದಾರೆ. ಅವರ ಭವಿಷ್ಯ ಯೋಜನೆಗಳಲ್ಲಿ ಕೊಟ್ಟ ಕೆಲಸವನ್ನೂ ಸಮರ್ಪಕವಾಗಿ ನಿಭಾಯಿಸುವ ಗುರಿಯನ್ನು ಹೊಂದಿದ್ದಾರೆ.

ರವಿವಾರ ಅಂಗನವಾಡಿ ಮೇಲೆ ಬಿದ್ದ ಮರ ತಪ್ಪಿದ ಅಪಾಯ

IMG-20241007-062405 ಯಲ್ಲಾಪುರ : ಕಿರವತ್ತಿ ಸಮೀಪದ ಹೊಸಳ್ಳಿ ಗಾಂವಠಾಣ ಅಂಗನವಾಡಿ ಶಾಲೆ ಮೇಲೆ ಬೃಹತ್ ಮರ ಬಿದ್ದಿದೆ, ರವಿವಾರ ವಾಗಿರುವದರಿಂದ ಅಂಗನವಾಡಿಯಲ್ಲಿ ಯಾವುದೇ ಮಕ್ಕಳು ಇಲ್ಲದೇ ಇರುವುದು ದೊಡ್ಡ ಅನಾಹುತ ತಪ್ಪಿದೆ. IMG-20241007-061223 ಶಾಲೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಮರಗಳು ಅಂಗನವಾಡಿಗೆ ಅಪಾಯದ ಹಂತದಲ್ಲಿ ಇರುವುದನ್ನು ಗಮನಿಸಿದ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರು ಪಂಚಾಯತ್ ನೋಡಲ್ ಅಧಿಕಾರಿ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. IMG-20241007-061640 ನೋಡಲ್ ಅಧಿಕಾರ ಮತ್ತು ವಿಲೇಜ್‌ ಅಕೌಂಟೆಂಟ್ ಜುಲೈ 23 ರಂದು ಸ್ಥಳಕ್ಕೆ ಭೇಟಿ ನೀಡುವ ಮೂಲಕ ಅರಣ್ಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದ್ದರು ಆದರೆ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದೇ ಮಕ್ಕಳ ಜೀವನದ ಜೊತೆಗೆ ಚಲ್ಲಾಟವಾಡಿ ಕರ್ತವ್ಯ ಲೋಪ ಎಸಗಿರುವುದು ಸೃಷ್ಟವಾಗಿದೆ, IMG-20241007-061241 ಆಗಬಹುದಾದ ಅನಾಹುತ ತಪ್ಪಿದೆ ಎಂದು ಸ್ಥಳೀಯ ನಿವಾಸಿ ಬೈರು ಜೊರೆ ತಿಳಿಸಿದ್ದಾರೆ. ಅಪಾಯವನ್ನು ಗಮನಿಸಿಯೂ ಕೂಡ ನಿರ್ಲಕ್ಷವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳದೆ ಇದ್ದರೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

ಕಾವ್ಯದಿಂದ ಮಾತ್ರ ಸಹಜತೆ ತುಂಬುವ ಚಿಕಿತ್ಸೆ : ಶ್ರೀಧರ ಬಳಗಾರ

IMG-20241007-054308 ಯಲ್ಲಾಪುರ : ಸುತ್ತ ಯಂತ್ರಗಳಿಂದಲೇ ತುಂಬಿರುವ ಧಾವಂತದ ಬದುಕಿಗೆ ಸಹಜತೆ ತುಂಬುವ ಚಿಕಿತ್ಸೆ ಸಿಗುವುದು ಕಾವ್ಯದಿಂದ ಮಾತ್ರ. ಗ್ರಾಮ್ಯ ಜಗತ್ತಿನ, ಸಹಜ ಬದುಕಿನ ಒಡಲಾಳದ ಈ ಕವಿತೆಗಳಲ್ಲಿ ಕವಿ ಅವರ ಸುತ್ತಮುತ್ತಲಿನ ಜಗತ್ತನ್ನು ನಿಷ್ಕಲ್ಮಷವಾಗಿ ತೆರೆದಿಟ್ಟಿದ್ದಾರೆ. ಯಾವ ಘೋಷಣೆ, ಪ್ರಣಾಳಿಕೆ ಅಥವಾ ಆಶ್ವಾಸನೆಗಳ ಹಂಗಿಲ್ಲದೇ ಪ್ರಾಮಾಣಿಕವಾಗಿ ಭಿತ್ತರಿಸಿದ್ದಾರೆ. ಸ್ವಯಃ ವೇದ್ಯವಾದ ಅನುಭವ ಅರಿವಾಗಿ ಪರಿವರ್ತನೆ ಆದ ಇಂತಹ ಕವಿತೆಗಳು ಜನಮಾನಸದಲ್ಲಿ ನೆಲೆ ನಿಲ್ಲು ಸಾಧ್ಯ ಎಂದು ಖ್ಯಾತ ಕತೆಗಾರ ಶ್ರೀಧರ ಬಳಗಾರ ಬಣ್ಣಿಸಿದರು. IMG-20241007-054220 ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಮೈತ್ರಿ ಕಲಾ ಬಳಗ ಆಯೋಜಿಸಿದ್ದ ಗುರುಗಣೇಶ ಡಬ್ಗುಳಿ ಅವರ 'ಇದುವರೆಗಿನ ಪ್ರಾಯ' ಕವಿತಾ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು. 
    ನಮ್ಮ ಕುರಿತು ಸ್ವತಃ ನಾವೇ ಅನುಮಾನ, ಅತೃಪ್ತಿ ಹೊಂದಿರಬೇಕು. ಆಗ ಮಾತ್ರ ಇನ್ನಷ್ಟು ಉತ್ಕೃಷ್ಟ ಕಾವ್ಯ-ಸಾಹಿತ್ಯ ರಚನೆ ಸಾಧ್ಯ. ಗುರುಗಣೇಶ ಡಬ್ಗುಳಿ ಅವರ ಕವಿತೆಗಳಲ್ಲಿ ಬಳಸಿದ ಪದ, ಪ್ರತಿಮೆ ಶೈಲಿಗಳು ಅತ್ಯಂತ ಖಾಸಗಿಯಾದ ಚಿತ್ರದ ನೇಯ್ಗೆಯನ್ನು ನೀಡುತ್ತವೆ. ಚಿಕ್ಕ ಊರಿನ ಮುಗ್ದ ಹಳ್ಳಿಯಲ್ಲಿ ಪ್ರಾಯದಿಂದ ಪ್ರಬುದ್ಧಮಾನವಾಗುವ ಹಾದಿಯಲ್ಲಿ ಗುರುಗಣೇಶ ಗುರುತಿಸಿದ ಸಂಗತಿಗಳು ಗಮನಾರ್ಹ. ತನ್ನ ಪರಿಸರಕ್ಕೆ ಸಹಜ, ಆತ್ಮೀಯವಾದ ಪದಗಳನ್ನು ಸಂಕೋಚವಿಲ್ಲದೇ ಬಳಸಿಕೊಳ್ಳುವ ಪ್ರೀತಿ, ಮಮತೆ ಇವರಿಲ್ಲದೆ. ಇದು ಹೊರಜಗತ್ತಿಗೆ ನಿಜಕ್ಕೂ ಅಚ್ಚರಿಯಾಗಿ ಕಾಣುತ್ತವೆ ಎಂದರು. 
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಅಧ್ಯಾಪಕಿ ಮುಕ್ತ ಶಂಕರ್ ಮಾತನಾಡಿ ಪ್ರಕೃತಿಯಲ್ಲಿರುವ ಅನೇಕ ವಸ್ತುಗಳನ್ನು ಬದುಕಿನ ಸಂಗತಿಗಳನ್ನು ಸಮಾಜದ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಭಿವ್ಯಕ್ತಿದಾಗ ಕಾವ್ಯ ಸೃಷ್ಟಿಯಾಗುತ್ತದೆ. ಆ ದೃಷ್ಟಿಯಿಂದ ಬೆಳೆದು ಬಂದ ಪರಿಸರ ಸಂವೇದನಾಶೀಲತೆ ಅವನನ್ನು ಕವಿಯಾಗಿಸಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೃತಿಗಳು ಬರುವಂತಾಗಲಿ ಎಂದರು. 
    ಕಸಾಪ ತಾಲೂಕು ಕಾರ್ಯದರ್ಶಿ ಜಿ ಎನ್ ಭಟ್ ಸಾಂದರ್ಭಿಕವಾಗಿ ಮಾತನಾಡಿದರು. 
     ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹ ಕಾರ್ಯದರ್ಶಿ ಹಾಗೂ ಹಿಂದಿ ರತ್ನ ಪ್ರಶಸ್ತಿ ಪುರಸ್ಕೃತ ಸಿ ಎಸ್ ಚಂದ್ರಶೇಖರ್ ಮತ್ತು ಕೃತಿಕಾರ ಗುರುಗಣೇಶ ದಂಪತಿಗಳನ್ನು ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಗಣಪತಿ ಕಂಚಿಪಾಲ ಸನ್ಮಾನಿಸಿಸಿದರು. 
    ಪತ್ರಕರ್ತ ದತ್ತಾತ್ರೇಯ ಕಣ್ಣಿಪಾಲ, 'ಇದುವರೆಗಿನ ಪ್ರಾಯ' ಕೃತಿ ಪರಿಚಯವನ್ನು ಮಾಡಿದರು. 
    ಸಿಎಸ್ ಚಂದ್ರಶೇಖರ್ ಸ್ವಾಗತಿಸಿದರು, ಸುಮಾ ಕಂಚಿಪಾಲ ನಿರ್ವಹಿಸಿದರು. ವೈಭವಿ ಮತ್ತು ಸ್ವಾತಿ ಪ್ರಾರ್ಥಿಸಿದರು. ವಾಣಿ ವಿನಯ ವಂದಿಸಿದರು.