Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Sunday, 6 October 2024

ಭೂ ನ್ಯಾಯ ಮಂಡಳಿ ಸದಸ್ಯತ್ವಕ್ಕಾಗಿ ಪೂಜಾ ನೆತ್ರೇಕರ ಅವರಿಗೆ ಸನ್ಮಾನ

IMG-20241006-161103 ಯಲ್ಲಾಪುರ: ಯಲ್ಲಾಪುರ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಪೂಜಾ ನೆತ್ರೇಕರ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ಮುಖಂಡರು ಸನ್ಮಾನಿಸಿ ಗೌರವಿಸಿದರು. ಯಲ್ಲಾಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಪೂಜಾ ಅವರ ಮನೆಗೆ ತೆರಳಿ ಅವರಿಗೆ ಶುಭ ಹಾರೈಸಿ, ಅವರ ಸೇವೆಗೆ ಮನ್ನಣೆ ನೀಡಲಾಯಿತು. 
    ಪೂಜಾ ನೆತ್ರೇಕರ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿರುವುದು ಮತ್ತು ಅವರಿಗೆ ಪ್ರಮುಖ ಸ್ಥಾನಗಳನ್ನು ನೀಡುತ್ತಿರುವುದು ಶ್ಲಾಘನೀಯ. ತಾವು ಈ ಸ್ಥಾನಕ್ಕೆ ಬರಲು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು, ಎಲ್ಲರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು. IMG-20241006-161051 ಮಹಿಳಾ ಕಾಂಗ್ರೆಸ್‌ನ ಪ್ರಮುಖೆ ಆಯೇಶಾ ಗೊಜನೂರು ಮಾತನಾಡಿ, ಪೂಜಾ ಅವರು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಗೌರವಿಸುತ್ತಾ, ಸಂಘಟಿತರಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು. ಭೂ ನ್ಯಾಯ ಮಂಡಳಿ ಸದಸ್ಯರಾಗಿ ಆಯ್ಕೆಯಾದ ನಂತರ ಪೂಜಾ ಅವರ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದೆ. ಪಾರದರ್ಶಕ ಮತ್ತು ನ್ಯಾಯಪರವಾದ ಕೆಲಸವನ್ನು ಪೂಜಾ ಅವರು ಮುಂದೆಯೂ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಚಲವಾದ ನಂಬಿಕೆ ವ್ಯಕ್ತಪಡಿಸಿದ ಅವರು, ಈ ಸ್ಥಾನವನ್ನು ಉತ್ತಮವಾಗಿ ಬಳಸಿಕೊಂಡು, ಜನರಿಗೆ ಸೇವೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯನ್ನು ತರುವ ನಿರೀಕ್ಷೆ ಇದೆ ಎಂದರು. 
     ಈ ಸನ್ಮಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಂ ಡಿ ಗೌಸ್, ರೂಪಾ ಪಾಟಣಕರ, ಶಕೀಲ್ ಅಹ್ಮದ್, ಅಖ್ತರ್ ಕೆಸರ್ ಶೇಖ, ರಾಜಾರಾಮ ಗಾಂವ್ಕರ, ರಹಮಾನ್ ಶೇಖ ಮತ್ತು ಪೂಜಾ ಪತಿ ನಾಗರಾಜ ನೆತ್ರೇಕರ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಯಲ್ಲಾಪುರದ ಪೂಜಾ ನೆತ್ರೇಕರ ಅವರಿಗೆ ಭೂ ನ್ಯಾಯ ಮಂಡಳಿ ಸದಸ್ಯತ್ವ

IMG-20241006-135852 ಯಲ್ಲಾಪುರ : ತಾಲೂಕಿನ ರಾಜಕೀಯದಲ್ಲಿ ಸೌಮ್ಯ ಸ್ವಭಾವದ ಹಾಗೂ ಕಡಿಮೆ ಮಾತನಾಡುವ ಪೂಜಾ ನೇತ್ರಕರ್ ಅವರು ಒಂದು ಪರಚಯಾತ್ಮಕ ಹೆಸರಾಗಿದೆ. ಕಾಂಗ್ರೆಸ್ ಪಕ್ಷದ ಮಾಜಿ ಬ್ಲಾಕ್ ಉಪಾಧ್ಯಕ್ಷೆ ಮತ್ತು ಪ್ರಸ್ತುತ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಪೂಜಾ, ತಮ್ಮ ಸಂಘಟನಾ ಕೌಶಲ್ಯ ಮತ್ತು ಪಾರದರ್ಶಕ ಮುಖಂಡತ್ವದಿಂದ ಎಲ್ಲರ ಮನ್ನಣೆಯನ್ನು ಪಡೆದುಕೊಂಡಿದ್ದಾರೆ. 
    ಜೆಓಸಿ ವರೆಗೆ ವ್ಯಾಸಂಗ ಮಾಡಿರುವ ಪೂಜಾ, ಮಹಿಳಾ ಸ್ತ್ರೀಶಕ್ತಿ ಸಂಘದ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ. ಶಾಲಾ-ಕಾಲೇಜು ದಿನಗಳಲ್ಲಿ ವಾಲಿಬಾಲ್ ಕ್ರೀಡಾಪಟುವಾಗಿ ಗುರುತಿಸಲ್ಪಟ್ಟು, ತಂಡದ ನಾಯಕಿಯಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ರಾಜಕೀಯದಲ್ಲಿ ಯಾವುದೇ ಹಿನ್ನೆಲೆ ಹೊಂದಿರದೇ ಯಾವುದೇ ಉದ್ದೇಶವಿಲ್ಲದಿದ್ದರೂ, ಶಿವರಾಮ್ ಹೆಬ್ಬಾರ್ ಅವರ ಅಭಿಮಾನಿಯಾಗಿರುವ ಶಕೀಲ್ ಅಹ್ಮದ್ ಅವರ ಒತ್ತಾಯಕ್ಕೆ ಮಣಿದು, ಶಿವರಾಮ್ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. IMG-20241006-135845 ಇವರ ಸಂಘಟನಾ ಚಾತುರ್ಯ ಮತ್ತು ಪಾರದರ್ಶಕ ಮುಖಂಡತ್ವವನ್ನು ಗಮನಿಸಿದ ರಾಜ್ಯ ಸರ್ಕಾರ, ಪೂಜಾ ಅವರನ್ನು ಯಲ್ಲಾಪುರ ತಾಲೂಕ ಭೂ ನ್ಯಾಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಿ ಗೌರವಿಸಿದೆ. ಈ ಹುದ್ದೆಗೆ ನೇಮಕವಾಗಲು ಶಾಸಕ ಶಿವರಾಮ್ ಹೆಬ್ಬಾರ್, ಮಾಜಿ ಶಾಸಕ ವಿ ಎಸ್ ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಕಾಂಗ್ರೆಸ್ ಪ್ರಮುಖ ರವಿ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್‌ಕೆ ಭಟ್ಟ ಮೆಣಸುಪಾಲ, IMG-20241006-132109 ಬಿಸಿಸಿ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್, ಪಂಚಾಯತ್ ರಾಜ್ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ, ಪಟ್ಟಣ ಪಂಚಾಯತ್ ಅಧ್ಯಕ್ಷೆ ನರ್ಮದಾ ನಾಯ್ಕ, ಸದಸ್ಯ ಸಯ್ಯದ್ ಕೈಸರಲಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಮುಖೆ ಸರಸ್ವತಿ ಗುನಗಾ, ಸಾಮಾಜಿಕ ಕಾರ್ಯಕರ್ತ ಶಕೀಲ್ ಅಹ್ಮದ್ ಮುಂತಾದ ಮುಖಂಡರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳುತ್ತಾರೆ. 
     ಕರ್ನಾಟಕ ಭೂ ನ್ಯಾಯ ಮಂಡಳಿಯ ಸದಸ್ಯೆಯಾಗಿ, ಭೂ ವಿವಾದಗಳನ್ನು ತೀರ್ಮಾನಿಸುವುದು, ಭೂ ಹಕ್ಕುಗಳ ಪರಿಶೀಲನೆ ಮತ್ತು ನೀಡಿಕೆ, ಭೂ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ಅರ್ಜಿಗಳನ್ನು ಸ್ವೀಕರಿಸಿ ತೀರ್ಮಾನಗಳನ್ನು ಕೈಗೊಳ್ಳುವುದು, ಇತ್ಯಾದಿ ಜವಾಬ್ದಾರಿಗಳನ್ನು ಪೂಜಾ ಸಮರ್ಥವಾಗಿ ಪ್ರತಿನಿಧಿಸುವುದಾಗಿ ಭರವಸೆ ಹೊಂದಿದ್ದಾರೆ. ಎಲ್ಲಾ ತೀರ್ಮಾನಗಳು ಕಾನೂನುಬದ್ಧ ದಾರಿಯಲ್ಲಿ ಮತ್ತು ಸಮಾನತೆಯ ಆಧಾರದ ಮೇಲೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ತಾಲೂಕಿನ ಎಲ್ಲ ಘಟನಾವಳಿಗಳ ಪಾರದರ್ಶಕತೆಯನ್ನು ಕಾಪಾಡಿಕೊಂಡು ನ್ಯಾಯದ ಪರವಾಗಿ ನಿಲ್ಲುವುದಾಗಿ ಪೂಜಾ ನೇತ್ರಕರ್ ಭರವಸೆ ನೀಡಿದ್ದಾರೆ. 
    ಪೂಜಾ ಅವರ ಈ ಹೊಸ ಜವಾಬ್ದಾರಿಯು ತಾಲೂಕಿನ ಜನರಿಗೆ ನ್ಯಾಯ ಮತ್ತು ನ್ಯಾಯೋಚಿತ ಭೂ ಹಕ್ಕುಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬುದು ಸ್ಪಷ್ಟ. ಅವರ ಸಮರ್ಥ ನಾಯಕತ್ವ ಮತ್ತು ಪಾರದರ್ಶಕತೆಯು ಭೂ ವಿವಾದಗಳನ್ನು ಪರಿಹರಿಸುವಲ್ಲಿ ಹಾಗೂ ಜನರಿಗೆ ನ್ಯಾಯ ಒದಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಯಲ್ಲಾಪುರದ ವಿಕಾಸ್ ನಾಯ್ಕರಿಗೆ ಭೂ ನ್ಯಾಯ ಮಂಡಳಿ ಸದಸ್ಯತ್ವ

IMG-20241006-135243 ಯಲ್ಲಾಪುರ: ಕ್ರಿಕೆಟ್ ಮತ್ತು ರಂಗಭೂಮಿಯಲ್ಲಿ ತಮ್ಮದೇ ಆದ ಅನನ್ಯ ಗುರುತು ಮೂಡಿಸಿಕೊಂಡಿರುವ ಮಂಚಿಕೇರಿಯ ವಿಕಾಸ್ ನಾಯ್ಕ, ಈಗ ಭೂ ನ್ಯಾಯ ಮಂಡಳಿಯ ಸದಸ್ಯತ್ವವನ್ನು ಪಡೆದುಕೊಂಡು ಹೊಸ ಜವಾಬ್ದಾರಿಯನ್ನು ನಿಭಾಯಿಸಲು ಸಜ್ಜಾಗಿದ್ದಾರೆ. 
    ಪಿಯುಸಿ ವರೆಗೆ ವಿದ್ಯಾಭ್ಯಾಸ ಪಡೆದ ವಿಕಾಸ್ ನಾಯ್ಕ, ಮಂಚಿಕೇರಿ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾರವಾರದ ಬಾಪೂಜಿ ಗ್ರಾಮೀಣ ವಿಕಾಸ ಸಂಸ್ಥೆ, ಮಂಚಿಕೇರಿಯ ವಿಕಾಸ್ ಸೇವಾ ಸಂಸ್ಥೆ ಹಾಗೂ ಶಿರಸಿಯ ಮನು ವಿಕಾಸ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿರುವ ಅವರು, ಸಂಘಟನಾ ಚಾತುರ್ಯ ಮತ್ತು ನಾಯಕತ್ವದ ಗುಣಗಳಿಂದಾಗಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. IMG-20241006-135237 ಕೆಲವು ದಶಕಗಳಿಂದ ಮುಂಡಗೋಡ, ಯಲ್ಲಾಪುರ, ಕಾರವಾರ ಮತ್ತು ಮಂಚಿಕೇರಿಯ ಕ್ರಿಕೆಟ್ ಮೈದಾನಗಳಲ್ಲಿ ವಿಕಾಸ್ ನಾಯ್ಕ ಹೆಸರು ಪ್ರಸಿದ್ಧವಾಗಿದೆ. ಯಲ್ಲಾಪುರ ಪ್ರೀಮಿಯರ್ ಲೀಗ್ ನ ಸದಸ್ಯರಾಗಿರುವ ಅವರು, ರಂಗಭೂಮಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಂ ಕೆ ಭಟ್ ಯಡಳ್ಳಿ ಅವರ ತಂಡದಲ್ಲಿ ರಂಗ ಕಲಾವಿದರಾಗಿ ಗುರುತಿಸಿಕೊಂಡಿರುವ ವಿಕಾಸ್, ಕೆಲವು ಕಲಾತ್ಮಕ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. 
    ವಿಕಾಸ್ ನಾಯ್ಕರ ಸಂಘಟನಾ ಚಾತುರ್ಯ ಮತ್ತು ನಾಯಕತ್ವದ ಗುಣಗಳನ್ನು ಗುರುತಿಸಿ ಸರ್ಕಾರವು ಅವರಿಗೆ ಯಲ್ಲಾಪುರ ಭೂ ನ್ಯಾಯ ಮಂಡಳಿಯ ಸದಸ್ಯತ್ವವನ್ನು ನೀಡಿ ಗೌರವಿಸಿದೆ. ಈ ಸದಸ್ಯತ್ವ ಪಡೆಯಲು ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ವಕ್ತಾರ ರವೀಂದ್ರ ನಾಯ್ಕ ಕಾಳಮ್ಮನಗರ, ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ ಎಸ್ ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಪಂಚ ಯೋಜನೆ ಅನುಷ್ಠಾಅನ ಸಮಿತಿ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ, ಬಿಸಿಸಿ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ, ಬಿಸಿಸಿ ಮಾಜಿ ಅಧ್ಯಕ್ಷ ಡಿ ಎನ್ ಗಾಂವ್ಕರ್ ಮುಂತಾದವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳುತ್ತಾರೆ.IMG-20241006-132109  
    ಭೂ ನ್ಯಾಯ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ನ್ಯಾಯದ ಪರವಾಗಿ ತಮ್ಮ ನಿರ್ಣಯಗಳನ್ನು ಮಂಡಿಸುವುದಾಗಿ ವಿಕಾಸ್ ಭರವಸೆ ನೀಡಿದ್ದಾರೆ. ಭೂ ನ್ಯಾಯ ಮಂಡಳಿ ಸದಸ್ಯತ್ವದ ಮೂಲಕ ಹೊಸ ಜವಾಬ್ದಾರಿಯನ್ನು ನಿಭಾಯಿಸಲು ಸಜ್ಜಾಗಿರುವ ವಿಕಾಸ್ ನಾಯ್ಕ, ತಮ್ಮ ಅನುಭವ ಮತ್ತು ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ. ಅವರ ಈ ಪ್ರಯತ್ನವು ಸಮಾಜಕ್ಕೆ ಒಳ್ಳೆಯದನ್ನು ಮಾಡಲಿ ಎಂಬುದು ಎಲ್ಲರ ಆಶಯ.

ದಸರಾ ಹಬ್ಬಕ್ಕೆ ಮಹಿಳೆಯರಿಗೆ ಬಂಪ‌ರ್ ಗಿಫ್ಟ್ ಇನ್ನೆರಡು ದಿನದಲ್ಲಿ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ

IMG-20241006-064327 ಯಲ್ಲಾಪುರ/ ಬೆಂಗಳೂರು: ದಸರಾ ಹಬ್ಬದ ಹಿನ್ನಲೆಯಲ್ಲಿ ಮಹಿಳೆಯರಿಗೆ ಕರ್ನಾಟಕ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ವಿಶೇಷ ಬಂಪರ್ ಗಿಫ್ಟ್ ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರು, ಲಕ್ಷ್ಮೀ ಆರ್. ಹೆಬ್ಬಾಳಕರ್ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 
    ಜುಲೈ ಮತ್ತು ಆಗಸ್ಟ್ ತಿಂಗಳ ಸಬ್ಸಿಡಿ ಹಣವನ್ನು ಫಲಾನುಭವಿಗಳಿಗೆ ಒದಗಿಸಲು ಸರ್ಕಾರ ಎರಡು ಕಂತಿನಲ್ಲಿ ಹಣ ಬಿಡುಗಡೆ ಮಾಡಲಿದೆ. ಅಕ್ಟೋಬರ್‌ 7 ಮತ್ತು 9 ರಂದು ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿದೆ. IMG-20241006-064317 ಈಗಾಗಲೇ ಸರ್ಕಾರವು ರಾಜ್ಯದ ವಿವಿಧ ಭಾಗಗಳಲ್ಲಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದು, ಈ ಬಾರಿಗೆ ಹಣದ ವಿತರಣೆ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಲಾಗಿದೆ. ಈ ಯೋಜನೆಯಿಂದ ಅನೇಕರ ಜೀವನೋಪಾಧಿ ಸುಧಾರಿತವಾಗುತ್ತಿದ್ದು, ಮಹಿಳೆಯರ ಆರ್ಥಿಕ ಸ್ಥಿರತೆ ಮತ್ತು ಸಮಾಜದ ಬೆಳವಣಿಗೆಯತ್ತ‌ ಕಡೆಯೆಳೆಯುವ ಪ್ರಯತ್ನವಾಗಿ ಇದು ಬಿಂಬಿಸುತ್ತದೆ. 
     ಗ್ರಹಲಕ್ಷ್ಮಿ ಯೋಜನೆಯ ಕುರಿತು: ಗ್ರಹಲಕ್ಷ್ಮಿ ಯೋಜನೆ, ಕರ್ನಾಟಕ ಸರ್ಕಾರದ ಪಂಚ ಯೋಜನೆಗಳಲ್ಲಿ ಒಂದಾಗಿದ್ದು, ಇದರಲ್ಲಿ ಫಲಾನುಭವಿಗಳಿಗೆ ಮಾಸಿಕವಾಗಿ ಹಣ ಸಹಾಯವನ್ನು ಒದಗಿಸಲಾಗುತ್ತಿದೆ. ಇದರಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಮತ್ತಷ್ಟು ಅವಕಾಶಗಳು ಲಭ್ಯವಾಗುತ್ತವೆ. 
     ಈ ವರದಿಯಲ್ಲಿನ ಎಲ್ಲಾ ವಿವರಗಳು ಫಲಾನುಭವಿಗಳಿಗೆ ದಸರಾ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಪರಿಚಯಿಸಲಾಗುತ್ತಿದ್ದು, ಈ ಯೋಜನೆಯಿಂದ ಸುಮಾರು 2 ಕೋಟಿ ಮಹಿಳೆಯರಿಗೆ ಲಾಭವಾಗಲಿದೆ.