Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Saturday, 5 October 2024

ಯಲ್ಲಾಪುರ ಭೂ ನ್ಯಾಯ ಮಂಡಳಿಗೆ ಪೂಜಾ, ವಿಕಾಸ, ಅಣ್ಣಪ್ಪ, ಜಗ್ಗು ಹುಂಬೆ ಸದಸ್ಯರಾಗಿ ಆಯ್ಕೆ

IMG-20241005-172126 ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕು ಭೂ ನ್ಯಾಯಮಂಡಳಿಗೆ ನಾಲ್ವರು ಅಧಿಕಾರೇತರ ಸದಸ್ಯರನ್ನು ರಾಜ್ಯಪಾಲರ ಆಜ್ಞಾನುಸಾರ ನಾಮನಿರ್ದೇಶನ ಮಾಡಲಾಗಿದೆ. ಕಂದಾಯ ಇಲಾಖೆ (ಭೂ ಸುಧಾರಣೆ) ಸರ್ಕಾರದ ಅಧೀನ ಕಾರ್ಯದರ್ಶಿ ಆರ್. ಗೌರಮ್ಮ ಅವರು ಈ ಆದೇಶ ಹೊರಡಿಸಿದ್ದಾರೆ. IMG-20241005-172114 ಶಿರಸಿ ಉಪ ವಿಭಾಗ ಸಹಾಯಕ ಆಯುಕ್ತರು ಭೂ ನ್ಯಾಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಪೂಜಾ ನಾಗರಾಜ ನೇತ್ರೇಕರ ಯಲ್ಲಾಪುರ ಪರಿಶಿಷ್ಟ ಜಾತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಇನ್ನು ವಿಕಾಸ ನಾಯ್ಕ ಮಂಚಿಕೇರಿ, ಅಣ್ಣಪ್ಪ ಡಿ. ನಾಯ್ಕ ಕಣ್ಣಿಗೇರಿ, ಜಗ್ಗು ರಾಮು ಹುಂಬೆ ಹೊಸಳ್ಳಿ ಸಾಮಾನ್ಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಯಲ್ಲಾಪುರ ತಹಶೀಲ್ದಾರರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. 
     ಈ ನಾಮನಿರ್ದೇಶನದಿಂದ ಯಲ್ಲಾಪುರ ತಾಲ್ಲೂಕಿನ ಭೂ ವಿವಾದಗಳನ್ನು ಪರಿಹರಿಸುವಲ್ಲಿ ಹೆಚ್ಚಿನ ಸುಗಮತೆ ಲಭಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಭೂ ನ್ಯಾಯಮಂಡಳಿಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹಾಗೂ ಜನಸ್ನೇಹಿ ವಾತಾವರಣ ನಿರ್ಮಾಣಕ್ಕೆ ಈ ನಾಲ್ವರು ಸದಸ್ಯರು ಸಹಕಾರಿಯಾಗಲಿದ್ದಾರೆ ಎಂಬ ನಂಬಿಕೆ ಜನರಲ್ಲಿದೆ.

ಬೇಡಿಕೆ ಈಡೇರಿಕೆಗೆ ಪಟ್ಟು ಗ್ರಾ.ಪಂ. ಸಿಬ್ಬಂದಿ, ಸದಸ್ಯರ ಮುಷ್ಕರ, ಸಾವಿರಾರು ಮಂದಿ ಹೋರಾಟದಲ್ಲಿ ಭಾಗಿ

IMG-20241005-120005 ಯಲ್ಲಾಪುರ / ಬೆಂಗಳೂರು : ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅ.4ರಂದು ಪಂಚಾಯತ್ ರಾಜ್ ಕುಟುಂಬ ರವರಿಂದ ಬೃಹತ್ ಪ್ರತಿಭಟನೆ ನಡೆಯಿತು. ಯಲ್ಲಾಪುರ ತಾಲೂಕಿನಿಂದ ಪಂಚಾಯತ ರಾಜ್ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ ಯಡಳ್ಳಿ ನೇತೃತ್ವದಲ್ಲಿ ತಂಡ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಿತು. 
     ಪಂಚಾಯತ ರಾಜ್ ಇಲಾಖೆಯ ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆ, ಸದಸ್ಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ರಾಜ್ಯಮಟ್ಟದ ಗ್ರಾಮ ಪ್ರತಿನಿಧಿಗಳು, ಮತ್ತು ಇಲಾಖಾ ನೌಕರರ ವರ್ಗ, ಸೇರಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯಿಂದ ಸುಮಾರು 1000ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. 
 ಮನವೊಲಿಕೆ ಯತ್ನ ವಿಫಲ : 
 ಧರಣಿ ಕೈ ಬಿಡುವಂತೆ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ನೌಕರರು ಸದಸ್ಯರನ್ನು ಮನವೊಲಿಸಲು ಮುಂದಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮದೇವನ್ ಅವರು, ಹೋರಾಟದ ನೇತೃತ್ವ ವಹಿಸಿದ್ದವರ ಜೊತೆ ಶುಕ್ರವಾರ ಚರ್ಚಿಸಿದರು. ಆದರೆ ಬೇಡಿಕೆ ಈಡೇರಿಸುವ ಸ್ಪಷ್ಟ ಬರವಸೆ ನೀಡದ ಕಾರಣದಿಂದ ಮನವೊಲಿಕೆ ಯತ್ನ ವಿಫಲವಾಯಿತು.IMG-20241005-120013 ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸುವ ಭರವಸೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಂದ ಬಂದಿಲ್ಲ ಆದ್ದರಿಂದ ಧರಣಿ ಮುಂದುವರಿಸುತ್ತೇವೆ. ಶನಿವಾರವು ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಸೇವೆ ದೊರಕುವುದಿಲ್ಲ ಎಂದು ಒಕ್ಕೂಟದ ಪ್ರಮುಖರು ತಿಳಿಸಿದರು. 
     ಈ ಸಂದರ್ಭದಲ್ಲಿ ಉತ್ತರಕನ್ನಡ ತಂಡವನ್ನು ಉದ್ದೇಶಿ‌ಮಾತನಾಡಿದ ಎಂ ಕೆ ಭಟ್ಟ ಯಡಳ್ಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟ, ಅ.4ರಂದು ಕರೆ ನೀಡಿರುವ ಪಂಚಾಯತ್ ರಾಜ್ ಕುಟುಂಬದ ಹೋರಾಟಕ್ಕೆ ಸಾರ್ವಜನಿಕರು ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ಶನಿವಾರ ಕೂಡ ನಮ್ಮ ಹೋರಾಟ ಮುಂದುವರೆಯಲಿದೆ. ಸರ್ಕಾರ ನೌಕರರ ಸಮಸ್ಯೆಯೊಂದಿಗೆ ಚುನಾಯಿತ ಪ್ರತಿನಿಧಿಗಳು ಅಧಿಕಾರವನ್ನು ಮೊಟಕುಗೊಳಿಸಲು ಹೋಗಬಾರದು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು. IMG-20241005-120040 ಇಂದು ಅಕ್ಟೋಬರ್ 5 ರಂದು ಮುಂದುವರೆದ ಭಾಗವಾಗಿ ಮಂತ್ರಿಗಳು ಬಂದು ಮನವಿ ಸ್ವೀಕಾರ ಮಾಡಿ ಆಶ್ವಾಸನೆ ಸಿಗುವವರೆಗೂ ಪ್ರತಿಭಟನೆಯನ್ನ ಮುಂದುವರೆದು ಹೋಗಬೇಕೆಂದು ತೀರ್ಮಾನಿಸಲಾಯಿತು. ನಮ್ಮ ಪ್ರತಿಭಟನೆಯಲ್ಲಿ ಚಲುವಾದಿ ನಾರಾಯಣಸ್ವಾಮಿ ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ ಸದಸ್ಯ ಯಲ್ಲಾಪುರದ ಶಾಂತರಾಮ ಸಿದ್ದಿ ಮುಂತಾದವರು ಬಂದು ನಮ್ಮ ನಮ್ಮ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲವನ್ನು ಸೂಚಿಸಿದರು. 
 ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ಸೇವೆ ಸ್ಥಗಿತ : 
 ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯದ 5950 ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿಯ ಎಲ್ಲ ವೃಂದಗಳ ಅಧಿಕಾರಿಗಳು ನೌಕರರು ಕೆಲಸದಿಂದ ಹೊರಗೆ ಬಿಡುತ್ತಿದ್ದಾರೆ ಇದರಿಂದಾಗಿ ಪಂಚಾಯಿತಿಗಳಲ್ಲಿ ಎಲ್ಲ ಬಗೆಯ ಸೇವೆಗಳು ಸ್ಥಗಿತಗೊಂಡಿವೆ ವಿವಿಧ ಕೆಲಸಗಳಿಗಾಗಿ ಪಂಚಾಯಿತಿಗಳಿಗೆ ಬಂದಿದ್ದ ಜನರಿಗೆ ಇದರಿಂದಾಗಿ ತೀವ್ರ ಸಮಸ್ಯೆಯಾಯಿತು.

ಎರುತ್ತಿರುವ ಬಂಗಾರದ ಬೆಲೆ : ಯಲ್ಲಾಪುರದಲ್ಲಿ ನಿಮ್ಮ ಹಳೆಯ ಬಂಗಾರವನ್ನು ಯೋಗ್ಯ ಬೆಲೆಗೆ ಖರೀದಿಸುವ ಧನೀಷ್ ಎಂಟರಪ್ರೈಸಸ್

IMG-20241005-104837 ಯಲ್ಲಾಪುರ: ಪಟ್ಟಣದ ಡಿಟಿ ರಸ್ತೆಯ ಬಾಳಗಿ ಕಾಂಪ್ಲೆಕ್ಸ್‌ ನಲ್ಲಿ ಜುಲೈ 1ರಿಂದ ಪ್ರಾರಂಭವಾಗಿರುವ ಧನೀಷ್ ಎಂಟರಪ್ರೈಸಸ್ (ಬಂಗಾರದ ಖರೀದಿದಾರರು) ಗ್ರಾಹಕರು ಮಾರಲು ಇಚ್ಚಿಸುವ ಬಂಗಾರದ ಆಭರಣಗಳಿಗೆ ಉತ್ತಮವಾದ ಬೆಲೆಯನ್ನು ನೀಡಿ ಕೊಂಡು ಕೊಳ್ಳುತ್ತಾರೆ. 
   ನಾಲ್ಕು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಧನೀಷ್ ಎಂಟರಪ್ರೈಸಸ್ ಸಂಸ್ಥೆ ಯಲ್ಲಾಪುರದಲ್ಲಿ ಡಿಟಿ ರಸ್ತೆಯ ಪೊಲೀಸ್‌ ಸ್ಟೇಷನ್ ಹಿಂಬದಿಯಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಿದ್ದಾರೆ. ಕಡಿಮೆ ಕಾಗದ ಪತ್ರಗಳ ವ್ಯವಹಾರ ಮತ್ತು ಸಂಪೂರ್ಣ ನಿಯಮಬದ್ದವಾಗಿ(ಕಳ್ಳತನ ಕಾನೂನು ಬಾಹೀರವಲ್ಲದ) ಬಂಗಾರವನ್ನು ಖರೀದಿಸುವ ಮೂಲಕ, ಗ್ರಾಹಕರ ವಿಶ್ವಾಸಾರ್ಹತೆ ಪಡೆದುಕೊಂಡು ಉಳಿಸಿಕೊಂಡಿದ್ದಾರೆ.  ಆನ್ಲೈನ್ ದರದಲ್ಲಿ ನಿಮ್ಮ ಚಿನ್ನವನ್ನು ಖರೀದಿಸುತ್ತಾರೆ: oct5to15-pyd ಧನೀಷ್ ಎಂಟರಪ್ರೈಸಸ್, ಆನ್ಲೈನ್ ದರವನ್ನು ಅನುಸರಿಸಿ ನಿಮ್ಮ ಚಿನ್ನಕ್ಕೆ ಯೋಗ್ಯ ಬೆಲೆಯನ್ನು ನೀಡುತ್ತದೆ. ಇದು ಗ್ರಾಹಕರಿಗೆ ಬಹಳ ಪ್ರಯೋಜನಕಾರಿಯಾಗುತ್ತದೆ. ನಿಮ್ಮ ಚಿನ್ನಕ್ಕೆ ಉತ್ತಮ ಬೆಲೆಯನ್ನು ನೀಡುತ್ತಾರೆ: ಗ್ರಾಹಕರು ತಮ್ಮ ಹಳೆಯ ಬಂಗಾರದ ಆಭರಣಗಳನ್ನು ಮಾರಲು ಬಂದಾಗ, ಧನೀಷ್ ಎಂಟರಪ್ರೈಸಸ್ ಅತ್ಯುತ್ತಮ ಬೆಲೆಯನ್ನು ನೀಡುತ್ತದೆ, ಇದು ಬಂಗಾರದ ಮೌಲ್ಯವನ್ನು ಸಮರ್ಪಕವಾಗಿ ಗುರುತಿಸುವುದಕ್ಕೆ ಸಹಾಯ ಮಾಡುತ್ತದೆ. 
 ನಿಮ್ಮ ಚಿನ್ನಕ್ಕೆ ಉತ್ತಮ ಬೆಲೆಯನ್ನು ನೀಡುತ್ತಾರೆ: IMG-20241005-105058  ಗ್ರಾಹಕರು ತಮ್ಮ ಹಳೆಯ ಬಂಗಾರದ ಆಭರಣಗಳನ್ನು ಮಾರಲು ಬಂದಾಗ, ಧನೀಷ್ ಎಂಟರಪ್ರೈಸಸ್ ಅತ್ಯುತ್ತಮ ಬೆಲೆಯನ್ನು ನೀಡುತ್ತದೆ, ಇದು ಬಂಗಾರದ ಮೌಲ್ಯವನ್ನು ಸಮರ್ಪಕವಾಗಿ ಗುರುತಿಸುವುದಕ್ಕೆ ಸಹಾಯ ಮಾಡುತ್ತದೆ. 
 ಅಡವಿಟ್ಟ ಚಿನ್ನವನ್ನು ಬಿಡಿಸಿ ಉಳಿದ ಹಣವನ್ನು ನೀಡುತ್ತಾರೆ:  
ನೀವು ಅಡವಿಟ್ಟಿರುವ ಚಿನ್ನವನ್ನು ಬಿಡುಗಡೆ ಮಾಡಿಸುವ ಸೇವೆಯನ್ನು ಕೂಡ ಧನೀಷ್ ಎಂಟರಪ್ರೈಸಸ್ ಒದಗಿಸುತ್ತದೆ. ಈ ಮೂಲಕ, ನಿಮಗೆ ಉಳಿದ ಹಣವನ್ನು ಕೂಡ ಪಡೆಯಬಹುದು. 

 ಯಾವುದೇ ಸರ್ವಿಸ್ ಚಾರ್ಜ್ ತೆಗೆದುಕೊಳ್ಳುವುದಿಲ್ಲ: IMG-20241005-105028 ಧನೀಷ್ ಎಂಟರಪ್ರೈಸಸ್ ಯಾವುದೇ ಸರ್ವಿಸ್ ಚಾರ್ಜ್ ಅನ್ನು ಗ್ರಾಹಕರಿಂದ ವಸೂಲು ಮಾಡುವುದಿಲ್ಲ ಎಂದು ಮಾಲಿಕರಾದ ಕಿರಣ ಭೋವಿ ತಿಳಿಸಿದ್ದಾರೆ.  ಧನೀಷ್ ಎಂಟರ್ಪ್ರೈಸಸ್ ‌ನಲ್ಲಿ, ಬ್ಯಾಂಕ್ ಅಥವಾ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಅಡವಿಟ್ಟ ಬಂಗಾರಗಳ ಹರಾಜು ಪ್ರಕ್ರಿಯೆಯ ಪೂರ್ವದಲ್ಲಿ ಆಭರಣ ಬಿಡಿಸಿಕೊಂಡು,  ಬಂಗಾರಕ್ಕೆ ಅಸಲು, ಬಡ್ಡಿ, ಇತರೆ‌ ಖರ್ಚುಗಳನ್ನು ತೆಗೆದು ನ್ಯಾಯಯುತ ಬೆಲೆಗೆ ಬಂಗಾರದ ಆಭರಣ ಖರೀದಿ ಮಾಡುತ್ತೆವೆ. ಧನೀಷ್ ಎಂಟರಪ್ರೈಸಸ್ ನಲ್ಲಿ ವಿಶ್ವಾಸಾರ್ಹ ಮತ್ತು ಸಮರ್ಪಿತ ಸೇವೆಯನ್ನು ನೀವು ನಿರೀಕ್ಷಿಸಬಹುದು. 
 ಹಾಲಿ ಏರುತ್ತಿರುವ ಬಂಗಾರದ ಬೆಲೆಯಿಂದಾಗಿ ಬಂಗಾರ ಅಡವಿಟ್ಟು ಬಿಡಿಸಿಕೊಳ್ಳುವವರಿಗೆ ಆಗುವ ಲಾಭಗಳು :
 ಬಂಗಾರವು ಸದಾಕಾಲ ಒಂದು ಮೌಲ್ಯಯುತ ಸ್ವತ್ತು ಎಂದು ಪರಿಗಣಿಸಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ನಿರಂತರವಾಗಿ ಏರುತ್ತಿದ್ದು, ಇದು ಹಲವಾರು ಜನರಿಗೆ ಒಂದು ಲಾಭದಾಯಕ ಅವಕಾಶವನ್ನು ಒದಗಿಸಿದೆ. ಅಡವಿಟ್ಟ ಬಂಗಾರವನ್ನು ಬಿಡಿಸಿಕೊಳ್ಳುವುದರಿಂದ, ಅನೇಕರಿಗೆ ಹಣಕಾಸಿನ ಸಹಾಯ ಸಿಗುತ್ತದೆ. ಬಂಗಾರದ ಬೆಲೆ ಅಸ್ಥಿರವಾಗಿರುತ್ತದೆ, ಆದ್ದರಿಂದ ಭವಿಷ್ಯದಲ್ಲಿ ಬೆಲೆ ಕುಸಿದರೆ, ನಿಮ್ಮ ಸ್ವತ್ತು ಕಡಿಮೆ ಮೌಲ್ಯವನ್ನು ಹೊಂದಬಹುದು. ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಬಂಗಾರವನ್ನು ಕಳೆದುಕೊಳ್ಳಬೇಕಾಗಬಹುದು. ಅಗತ್ಯಕ್ಕೆ ತಕ್ಕಂತೆ ಹಣದ ಅಗತ್ಯ ಬಂದಾಗ, ಅಡವಿಟ್ಟ ಬಂಗಾರವನ್ನು ಬಿಡಿಸಿಕೊಂಡು ಧನೀಷದಲ್ಲಿ ಮಾರಾಟ ಮಾಡಿ ಹೆಚ್ಚಿನ ಹಣವನ್ನು ಪಡೆಯಬಹುದು. Pyara ಸಂಕ್ಷಿಪ್ತವಾಗಿ ಹೇಳುವುದಾದರೆ, ಬಂಗಾರವನ್ನು ಅಡವಿಟ್ಟು ಬಿಡಿಸಿಕೊಳ್ಳುವುದರಿಂದ ಕೆಲವು ಲಾಭಗಳಿವೆ. ಆದರೆ, ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ಅಂಶಗಳನ್ನು ಪರಿಗಣಿಸುವುದು ಅತ್ಯಗತ್ಯ. Ad oct5to15-pyd

ಹಸನ್ಮೂಖಿ ಸ್ನೇಹಿತ, ಶ್ರದ್ಧೆಯ ಶ್ರಮಯೋಗಿ ವೆಂಕಟೇಶ ನಾಯ್ಕ ಅಕಾಲಿಕ ನಿಧನ

IMG-20241005-104051 ಯಲ್ಲಾಪುರ : ದುಡಿಮೆಯನ್ನೇ ಸಂಕಲ್ಪವನ್ನಾಗಿಸಿ ಕೊಂಡು ಅಪಾರ ಜನಮನ್ನಣೆಗೆ ಜನರ ಪ್ರೀತಿಗೆ ಪಾತ್ರರಾಗಿದ್ದ ಯಲ್ಲಾಪುರ ಸಬಗೇರಿ ನಿವಾಸಿ ವೆಂಕಟೇಶ ಗಂಗಾಧರ ನಾಯ್ಕ ಶನಿವಾರ ನಸೂಕಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಕಾಲಿಕವಾಗಿ ನಿಧನರಾದರು ಅವರಿಗೆ 58 ವರ್ಷ ವಯಸ್ಸಾಗಿತ್ತು. 
     ಬಡತನದಲ್ಲಿ ಹುಟ್ಟಿ ಉನ್ನತ ಉತ್ತಮ ಶಿಕ್ಷಣ ಪಡೆಯಲಾಗದಿದ್ದರೂ, ಕುಟುಂಬ ನಿರ್ವಹಣೆಗಾಗಿ ಸಣ್ಣ ವಯಸ್ಸಿನಲ್ಲಿ ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಕೆಲಸ ಪ್ರಾರಂಭಿಸಿದ ವೆಂಕಟೇಶ್ ನಾಯ್ಕ, 34 ವರ್ಷಗಳ ಹಿಂದೆ ತಮ್ಮದೇ ಸ್ವಂತ ವೆಲ್ಡಿಂಗ್ ವರ್ಕ್ ಶಾಪ್ ಪ್ರಾರಂಭಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆಯ ಜೊತೆಗೆ, ನಗುಮೊಗದ ಪ್ರೀತಿಯ ಸೇವೆಯನ್ನು ನೀಡುತ್ತಿದ್ದರು. ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಕೂಡ ಇದೇ ರೀತಿಯ ಸೇವೆ ನೀಡುವಂತೆ ಅವರು ಸೂಚಿಸುತ್ತಿದ್ದರು. IMG-20241005-104043 ಆಡು ಮುಟ್ಟಿದ ಸೊಪ್ಪಿಲ್ಲ ವೆಂಕಟೇಶ್ ನಾಯ್ಕ ವೆಲ್ಡಿಂಗ್ ಮಾಡಿದ ಕಟ್ಟಡಗಳು ಇಲ್ಲ ಎನ್ನುವ ಮಟ್ಟಿಗೆ ಯಲ್ಲಾಪುರದ ಹೆಚ್ಚು ಕಡಿಮೆ ಪ್ರತಿ ಮನೆ, ಶಾಪಿಂಗ್ ಕಾಂಪ್ಲೆಕ್ಸ್, ಅಂಗಡಿಗಳು ಗೂಡ ಅಂಗಡಿಗಳು, ತಳ್ಳುಗಾಡಿಗಳು, ನವ ನವೀನ ವಿನ್ಯಾಸದ ಮನೆಯ ಗೇಟುಗಳು, ಅಲ್ಮೆರಾ, ಕಪಾಟುಗಳು, ಅಷ್ಟೇ ಏಕೆ ಯಲ್ಲಾಪುರ ತಾಲೂಕ ಆಸ್ಪತ್ರೆ ಎದುರು ಕೊವಿಡ್ 19ರ ಸಂದರ್ಭದಲ್ಲಿ ನಿರ್ಮಿಸಲಾದ ವ್ಯಾಕ್ಸಿನ್ ಸೆಂಟರ್ ಕೂಡ ವೆಂಕಟೇಶ ನಾಯ್ಕ ವಿನ್ಯಾಸದಲ್ಲಿ ವೆಲ್ಡಿಂಗ್ ನಲ್ಲಿ ಮೂಡಿ ಬಂದಿದ್ದಾಗಿದೆ. ಉದ್ಯಮಿ ವಿವೇಕ್ ಹೆಬ್ಬಾರ್ ಮನೆ ವಿನ್ಯಾಸ ಗೇಟ್, ಉದ್ಯಮಿ ಬಾಲಕೃಷ್ಣ ನಾಯಕ್ ಅವರ ಮನೆಯ ಹಲವಾರು ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. 
    ವಿಶಾಲವಾದ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಹೊಂದಿರುವ ಅನೇಕ ಸ್ನೇಹಿತರನ್ನು ಹೊಂದಿದ್ದ ವೆಂಕಟೇಶ ನಾಯ್ಕ ತಮ್ಮ ಹಳೆಯ ಸ್ನೇಹಿತರು ಭೇಟಿಯಾದರೆ ಅದೇ ಸ್ನೇಹ ಪರತೆ ಪ್ರೀತಿ ಪೂರ್ವಕವಾಗಿ ಮಾತನಾಡುವುದರ ಮೂಲಕ ಹಳೆಯ ನೆನಪುಗಳನ್ನು ಮೆಲಕು ಹಾಕುವಂತೆ ಮಾಡುತ್ತಿದ್ದರು. 58 ವರ್ಷಗಳಲ್ಲಿ ಎಂದಿಗೂ ಕೂಡ ಕಾಯಿಲೆ ಬೀಳದೆ ಸದೃಢ ಕಾರ್ಮಿಕರಾಗಿದ್ದ ವೆಂಕಟೇಶ್ ನಾಯ್ಕಗೆ ಕಳೆದ ಎರಡು ದಿನಗಳ ಹಿಂದೆ ಇಲ್ಲಿಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ನಂತರ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಲಾಗಿತ್ತು. ಮನೆಯಲ್ಲಿ ಆರೋಗ್ಯ ಸ್ಥಿತಿ ಏರುಪೇರು ಆಗಿದ್ದರಿಂದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅಲ್ಲಿಯವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರು ಎಳೆದಿದ್ದಾರೆ. ಮೃತರು ತಾಯಿ, ಸಾಮಾಜಿಕ‌ ಕಾರ್ಯಕರ್ತೆ ಹಾಗೂ ಬಿಜೆಪಿ ಮಹಿಳಾ ಪ್ರಮುಖೆ ಪತ್ನಿ ನಿರ್ಮಲಾ ನಾಯ್ಕ, ಓರ್ವ ಪುತ್ರ, ಮೊಮ್ಮಗ, ಓರ್ವ ಪುತ್ರಿ, ಸಹೋದರಿಯರು, ಅಪಾರ ಬಂದು ಬಳಗ ಮಿತ್ರರನ್ನು ಅಗಲಿದ್ದಾರೆ. 
     ವೆಂಕಟೇಶ್ ನಾಯ್ಕ ಅಕಾಲಿಕ ನಿಧನಕ್ಕೆ ಶಾಸಕ ಶಿವರಾಮ ಹೆಬ್ಬಾರ್, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಉದ್ಯಮಿಗಳಾದ ವಿವೇಕ ಹೆಬ್ಬಾರ್, ಬಾಲಕೃಷ್ಣ ನಾಯಕ, ವಿಜಯ ಮಿರಾಶಿ, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜು ನಾಯ್ಕ ಸಬಗೇರಿ, ಸತೀಶ ಶಿವಾನಂದ ನಾಯ್ಕ ಮಂಜುನಾಥ ನಗರ, ಕಲ್ಪನಾ ನಾಯ್ಕ ತಳ್ಳಿಕೇರಿ, ಸೋಮೇಶ್ವರ ನಾಯ್ಕ ರವೀಂದ್ರನಗರ, ಸ್ನೇಹಿತರಾದ ನಾಗರಾಜ ಮದ್ಗುಣಿ, ನಾಗರಾಜ ಮಲ್ಲಾಪುರ, ನಾಗರಾಜ ನಾಯಕ, ಜಗದೀಶ ನಾಯಕ, ಮಾದವ ನಾಯಕ, ಗಜಾನನ ನಾಯ್ಕ ತಳ್ಳಿಕೇರಿ, ನವೀನ ಗುಣವಂತ ನಾಯ್ಕ, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಯಲ್ಲಾಪುರ ಆಟೋ ಯೂನಿಯನ್ ಅಧ್ಯಕ್ಷ ಸಂತೋಷ ನಾಯ್ಕ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.