Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 4 October 2024

ವಿವಿಧ ಸಂಘಟನೆಗಳು ದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆ ಯಶಸ್ವಿ

IMG-20241004-181756 ಯಲ್ಲಾಪುರ : ಭಗತ್ ಸಿಂಗ್ ಅಟೋ ಚಾಲಕ ಮತ್ತು ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ, ಲಾರಿ ಚಾಲಕರ ಸಂಘ, ಬಸವೇಶ್ವರ ಗೂಡ್ಸ್ ಲಕ್ಷಾ ಚಾಲಕ ಮತ್ತು ಮಾಲಕರ ಸಂಘ ಹಾಗೂ ಕನ್ನಡ ಪರ ಸಂಘಟನೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನವರಾತ್ರಿಯ ನಿಮಿತ್ತವಾಗಿ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಾಲ್ಕು ಸಾವಿರಾರಕ್ಕೂ ಹೆಚ್ಚು ಜನ ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು. 
    ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಭವದ ನವರಾತ್ರಿ ಉತ್ಸವದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು, ವಿವಿಧ ಸಂಘಟನೆಗಳ ಮುಖಂಡರಾಗಿರುವ ಸಂತೋಷ ನಾರಾಯಣ ನಾಯ್ಕ ನೇತೃತ್ವದಲ್ಲಿ ಅನ್ನಪ್ರಸಾದ ವಿತರಣಾ ಕಾರ್ಯಕ್ರಮ ಜರಗಿತ್ತು. IMG-20241004-181807 ಈ ನನ್ನ ಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ಬಡವರು ಶ್ರೀಮಂತರು, ಜಾತಿ ಭೇದ ಭಾವ ಇಲ್ಲದೆ ಸರತಿಯಲ್ಲಿ ನಿಂತು ಅನ್ನ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು. 
    ಅಕ್ಟೋಬರ್ 4ರಂದು ಶುಕ್ರವಾರ ಮಧ್ಯಾಹ್ನ 12:30ರಿಂದ 3:30ರ ವರೆಗೆ ಮೊದಲ ಹಂತದ ಅನ್ನಸಂತರ್ಪಣೆ ನಡೆಯಿತು. ಮತ್ತು ಅಕ್ಟೋಬರ್ 8ರ ಮಂಗಳವಾರ ಮಧ್ಯಾಹ್ನ 12:30ರಿಂದ 3:30ರ ವರೆಗೆ ರಾಜಸ್ಥಾನಿ ವಿಷ್ಣು ಸಮಾಜ ಯಲ್ಲಾಪುರದ ಸಹಯೋಗದೊಂದಿಗೆ ಕನ್ನಡ ಪರ ಸಂಘಟನೆ ಯಲ್ಲಾಪುರದ ನೇತೃತ್ವದಲ್ಲಿ ಎರಡನೇ ಹಂತದ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿವೆ. IMG-20241004-181856 ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ, ವಿವಿಧ ಸಂಘಟನೆಯ ಪ್ರಮುಖರಾದ ಸಂಜೀವ ಜಾದವ್, ತೋಲಾರಾಮ ಅತ್ತರವಾಲ, ಪ್ರಶಾಂತ ಅಂಕೋಲೆಕರ, ಪ್ರಕಾಶ ನಾಯ್ಕ, ರತ್ನಾ ನಾಯ್ಕ,ಶೋಭಾ ಹುಲಿಮನಿ, ಮಂಜುಳಾ ನಾಯ್ಕ ಇನ್ನೂ ಅನೇಕ ಜನ ನನ್ನ ಪ್ರಸಾದ ವಿತರಣೆಯಲ್ಲಿ ಸಹಕರಿಸಿದರು. 
     ಆರಕ್ಷಕ ಇಲಾಖೆ ಪಟ್ಟಣ ಪಂಚಾಯಿತಿ ಬ್ಯಾಂಕ್ ಸಿಬ್ಬಂದಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ, ದೇವಸ್ಥಾನ ಸಮಿತಿಯ ಪ್ರಮುಖರು, ದೇವಸ್ಥಾನದ ಅರ್ಚಕರು ಹಾಗೂ ಅನ್ನ ಪ್ರಸಾದ ವಿತರಣಾ ಕಾರ್ಯಕ್ರಮದ ಎಲ್ಲ ಆಯೋಜಕ ಸದಸ್ಯರುಗಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ನ.1ರಿಂದ ಸಂಕಲ್ಪ ಉತ್ಸವ: ಕಲಾ ಸಂಭ್ರಮಕ್ಕೆ 38ನೇ ವರ್ಷ

IMG-20241004-172037 ಯಲ್ಲಾಪುರ: ಜಿಲ್ಲೆಯಲ್ಲಿ 37 ವರ್ಷಗಳಿಂದ ಅನೇಕರ ಮನಗೆದ್ದಿರುವ ‘ಸಂಕಲ್ಪ ಉತ್ಸವ’ ಈ ಬಾರಿ ನವೆಂಬರ್ 1 ರಿಂದ 4 ರವರೆಗೆ ಪಟ್ಟಣದ ಗಾಂಧೀ ಕುಟೀರದಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿದ್ದು, ಯಕ್ಷಗಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು. 
    ಅವರು ಅ.4 ರಂದು ನಡೆದ ಸುದ್ದಿಗೋಷ್ಟಿಯಲ್ಲಿ ಈ ವಿಷಯವನ್ನು ತಿಳಿಸಿದರು. ಈ ವರ್ಷ ಯಕ್ಷಗಾನಕ್ಕೆ ಯುನೆಸ್ಕೋ ಮಾನ್ಯತೆ ದೊರೆತಿರುವುದು ಸಂಕಲ್ಪ ಉತ್ಸವದ ಆದ್ಯತಾ ಕಾರ್ಯಕ್ಕೆ ಹೆಚ್ಚಿನ ಸಾರ್ಥಕ್ಯವನ್ನು ನೀಡಿದೆ ಎಂದು ಅವರು ಹೇಳಿದರು. ಉತ್ಸವದಲ್ಲಿ ಯಕ್ಷಗಾನ, ತಾಳಮದ್ದಲೆ, ಭಜನೆ, ಗಮಕವಾಚನ, ನೃತ್ಯ ರೂಪಕಗಳು, ಆಯುರ್ವೇದ ಚಿಕಿತ್ಸಾ ಶಿಬಿರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಹಾಗೆಯೇ, 15 ಮಂದಿಗೆ ಸಂಕಲ್ಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಹೆಗಡೆ ತಿಳಿಸಿದರು. IMG-20241004-172028 ಹಿರಿಯ ಸಂಘಟಕ ತಾಳಮದ್ದಲೆ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ, "ಸಂಕಲ್ಪ ಉತ್ಸವ ನಮ್ಮೆಲ್ಲರ ಉತ್ಸವವಾಗಿದೆ. ಪ್ರತಿವರ್ಷ ಜನರು ಉತ್ಸವ ಯಾವಾಗ ಆರಂಭ ಎಂದು ಕೇಳುವುದು ನಮ್ಮ ಯಶಸ್ಸಿನ ಸೂಚಕ" ಎಂದು ಹೇಳಿದರು. 
     ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ, "ಸಂಕಲ್ಪ ಉತ್ಸವ ತಾಲೂಕಿಗೆ ಮಾತ್ರ ಸೀಮಿತವಾಗಿಲ್ಲ, ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದೆ. ಈ ಬಾರಿಯೂ ಎಲ್ಲರ ಸಹಕಾರದೊಂದಿಗೆ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ಬಯಸುತ್ತೇವೆ" ಎಂದರು. ಡಿಸೆಂಬರ್‌ನಲ್ಲಿ ನಾಟಕೋತ್ಸವ ಹಮ್ಮಿಕೊಳ್ಳುವ ಯೋಜನೆಯೂ ಇದೆ ಎಂದು ಅವರು ತಿಳಿಸಿದರು. 
    ಸುದ್ದಿಗೋಷ್ಟಿಯಲ್ಲಿ ಗೋಪಣ್ಣ ತಾರೀಮಕ್ಕಿ, ನಾರಾಯಣ ಭಟ್ಟ, ಲೋಕನಾಥ ಗಾಂವ್ಕರ, ರವಿ ಬಿಡಾರ, ಪ್ರದೀಪ ಯಲ್ಲಾಪುರಕರ್ ಮುಂತಾದವರು ಉಪಸ್ಥಿತರಿದ್ದರು.

ಹೋರಾಟಗಾರ ರವೀಂದ್ರ ನಾಯ್ಕ ಮುಖ್ಯಮಂತ್ರಿ ಭೇಟಿ: ಕೇಂದ್ರ ಸರ್ಕಾರಕ್ಕೆ ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒತ್ತಡಕ್ಕೆ ಆಗ್ರಹ.

IMG-20241004-171301 ಯಲ್ಲಾಪುರ/ ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಕ್ಷೇತ್ರವನ್ನು ಗುರುತಿಸುವ ಕಸ್ತೂರಿರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿರುವುದು ಸ್ವಾಗತಾರ್ಹ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. IMG-20241004-171253 ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ, ಕೇಂದ್ರ ಸರ್ಕಾರ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಒತ್ತಡ ತರಬೇಕೆಂದು ಆಗ್ರಹಿಸಿದರು. ಪಶ್ಚಿಮ ಘಟ್ಟ ಪ್ರದೇಶದ ಜನರ ವಿರೋಧದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ ಎಂದು ನಾಯ್ಕ ತಿಳಿಸಿದರು. 
    ಕಸ್ತೂರಿರಂಗನ್ ವರದಿಯಿಂದ ಉಂಟಾಗುವ ಅನಾನೂಕೂಲತೆ ಕುರಿತು ಹೋರಾಟಗಾರರ ವೇದಿಕೆ ಪ್ರಕಟಿಸಿದ ಕರಪತ್ರ ಹಾಗೂ ಲಕ್ಷಾಂತರ ಕುಟುಂಬಗಳಿಂದ ಕೇಂದ್ರಕ್ಕೆ ಸಲ್ಲಿಸಲಾದ ಆಕ್ಷೇಪಣೆ ಪತ್ರಗಳನ್ನು ಪರಿಶೀಲಿಸಿ, ಮುಖ್ಯಮಂತ್ರಿಯವರು ಹೋರಾಟದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ರವೀಂದ್ರ ನಾಯ್ಕ ತಿಳಿಸಿದರು.

ದೈತ್ಯ ಕಾಳಿಂಗ ಸರ್ಪ ರಕ್ಷಣೆ: ಸ್ನೇಕ್ ಸೂರಜ್ 15ನೇ ಕಾರ್ಯಾಚರಣೆಯಲ್ಲಿ ಯಶಸ್ಸು

IMG-20241004-142720 ಯಲ್ಲಾಪುರ: ತಾಲೂಕಿನ ಅರಬೈಲ್ ಸಮೀಪದ ಮೂಲೆಪಾಲ್ ನಲ್ಲಿ ಗಿರೀಶ ಭಟ್ ಅವರ ತೋಟದಲ್ಲಿ 10 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಸರ್ಪವನ್ನು ಉರಗ ಸ್ನೇಹಿ ಸ್ನೇಕ್ ಸೂರಜ್ ಸೆರೆಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. IMG-20241004-142712 ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಈ ಕಾಳಿಂಗ ಸರ್ಪ ಕಾಣಿಸಿಕೊಂಡಾಗ, ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯು ಸ್ನೇಕ್ ಸೂರಜ್ ಅವರ ಸಹಾಯ ಪಡೆದು ಕಾಳಿಂಗ ಸರ್ಪವನ್ನು ರಕ್ಷಿಸಲು ಕ್ರಮ ಕೈಗೊಂಡಿತು. ವಿಶೇಷವೆಂದರೆ, ಇದು ಸ್ನೇಕ್ ಸೂರಜ್ ಅವರ 15ನೇ ಕಾಳಿಂಗ ಸರ್ಪ ರಕ್ಷಣಾ ಕಾರ್ಯಾಚರಣೆಯಾಗಿದೆ. IMG-20241004-142654 ಈ ಕಾರ್ಯಾಚರಣೆಯಲ್ಲಿ ಹರೀಶ ಮಡಿವಾಳ, ಚಂದ್ರಕಾಂತ ನಾಯ್ಕ, ಗೋಪಾಲ ಗೌಡ, ಮತ್ತು ಸೋಮಶೇಖರ್ ನಾಯ್ಕ ಸ್ನೇಕ್ ಸೂರಜ್ ಅವರಿಗೆ ಸಹಕರಿಸಿದರು. ಕಾಳಿಂಗ ಸರ್ಪದಂತಹ ವಿಷಪೂರಿತ ಸರ್ಪಗಳನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಮೂಲಕ ಸ್ನೇಕ್ ಸೂರಜ್ ಅವರು ಮಾನವ ಮತ್ತು ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ ಎಂಬುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.