Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Tuesday, 10 September 2024

ವಜ್ರಳ್ಳಿಯಲ್ಲಿ ವಿಜೃಂಭಣೆಯಿಂದ ನಡೆದ ಗಣೇಶೋತ್ಸವ ವಿಸರ್ಜನೆ

IMG-20240910-220116 ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ವಜ್ರೇಶ್ವರಿ ಯುವಕ ಸಂಘದಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಗಣೇಶೋತ್ಸವವು ಕಳೆದ ನಾಲ್ಕು ದಿನಗಳಿಂದ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ಸಂಜೆ ನಡೆದ ವೈಭವದ ವಿಸರ್ಜನಾ ಮೆರವಣಿಗೆಯಲ್ಲಿ ಇನ್ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡು ಸಂಭ್ರಮಿಸಿದರು.IMG-20240910-215917 ಈ ವರ್ಷ ವಜ್ರೇಶ್ವರಿ ಯುವಕ ಸಂಘದ ಸದಸ್ಯರು ಭಾವೈಕ್ಯತೆಯನ್ನು ಬಿಂಬಿಸುವುದರ ಮೂಲಕ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು. ಸುತ್ತಮುತ್ತಲಿನ ಗ್ರಾಮಗಳ ಯುವಕರು, ಮಹಿಳೆಯರು, ಮಕ್ಕಳು ಸೇರಿಕೊಂಡು ಮೆರವಣಿಗೆಯಲ್ಲಿ ಹಾಡುಗಳೆಡೆಗೆ ಹೆಜ್ಜೆ ಹಾಕಿ ಬಣ್ಣದ ಬೆಳಕುಗಳಲ್ಲಿ ನೃತ್ಯ ಮಾಡಿದರು.IMG-20240910-220034 ಗಣೇಶ ಮೂರ್ತಿಯ ವಿಸರ್ಜನೆಯ ವೇಳೆ ಮೂರು ತಾಸುಗಳ ಕಾಲ ನಡೆದ ಮೆರವಣಿಗೆಯಲ್ಲಿ ವಜ್ರೇಶ್ವರಿ ಯುವಕ ಸಂಘದ ಸದಸ್ಯರು ವಿಶೇಷವಾಗಿ ತಯಾರಿಸಿದ ಗಣೇಶನ ಚಿತ್ರದ ಬಿಳಿ ಅಂಗಿ ಧರಿಸಿ ಗಮನಸೆಳೆದರು. ಇವರೆಲ್ಲರ ಜೊತೆಗೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಮತ್ತು ಸಮಾಜಸೇವಕರು ಕೂಡ ಮೆರವಣಿಗೆಯಲ್ಲಿ ಭಾಗಿಯಾಗಿ ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಿದರು. Pyara ಸಮಾರಂಭದಲ್ಲಿ ವಜ್ರೇಶ್ವರಿ ಯುವಕ ಸಂಘದ ಅಧ್ಯಕ್ಷ ಸತೀಶ ಗಾಂವ್ಕರ್, ಕಾರ್ಯದರ್ಶಿ ಗಿರೀಶ ವಡ್ಡರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ ತಾರಗಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಯಲ್ಲಾಪುರ ಪೋಲೀಸ್ ಇಲಾಖೆ ಭದ್ರತೆ ನೀಡಲು ಬಿಗಿ ಬಂದೋಬಸ್ತ್ ಮಾಡಿತ್ತು. . .

ಯಲ್ಲಾಪುರದಲ್ಲಿ ಸೆ.12ರಂದು "ಸಂದೇಶ ರಾಮಾಯಣ" ಮತ್ತು "ಬ್ಯಾಸರಕಿ ಬ್ಯಾಡೊ ನಗುವಾಗ" ಕೃತಿ ಲೋಕಾರ್ಪಣೆ

IMG-20240910-214553ಯಲ್ಲಾಪುರ: ಮಾತೃಭೂಮಿ ಸೇವಾ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಯಲ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ, ದಿ. ವೆಂಕಣ್ಣಾಚಾರ್ಯರ "ಸಂದೇಶ ರಾಮಾಯಣ" ಮತ್ತು ಶ್ರೀರಂಗ ಕಟ್ಟಿ ವಿರಚಿತ "ಬ್ಯಾಸರಕಿ ಬ್ಯಾಡೊ ನಗುವಾಗ" ಎಂಬ ಕೃತಿಗಳ ಲೋಕಾರ್ಪಣೆ ಸೆಪ್ಟೆಂಬರ್ 12 ರಂದು ಬೆಳಿಗ್ಗೆ 10.00 ಗಂಟೆಗೆ ಯಲ್ಲಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜರುಗಲಿದೆ. IMG-20240910-214459 ಈ ಸಂದರ್ಭದ ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ಧನ ಭಾಗವಹಿಸಲಿದ್ದಾರೆ. ಲೋಕಾರ್ಪಣಾ ಸಮಾರಂಭವನ್ನು ಹಿರಿಯ ಸಾಹಿತಿ ಮತ್ತು ಪತ್ರಕರ್ತ ಅರುಣಕುಮಾರ ಹಬ್ಬು ಅವರು ನೆರವೇರಿಸಲಿದ್ದಾರೆ. 
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ವನರಾಗ ಶರ್ಮಾ ವಹಿಸಲಿದ್ದಾರೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಕಾರ್ಯಕ್ರಮದ ಮಾಹಿತಿ ನೀಡಿದ್ದಾರೆ. 

 ವೆಂಕಣ್ಣಾಚಾರ್ಯರ ಕುರಿತು : 
 ವೆಂಕಣ್ಣಾಚಾರ್ಯರು ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿಯವರು. 15 ವರ್ಷದ ಬಾಲಕನಾಗಿದ್ದಾಗಲೇ ಮಹಾತ್ಮಾ ಗಾಂಧಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಬ್ರಿಟೀಷರ ಲಾಠಿ ಏಟಿಗೆ ತಮ್ಮ ಒಂದು ಕಣ್ಣು ಮತ್ತು ಕಿವಿಯನ್ನು ಕಳೆದುಕೊಂಡರೂ, ಅವರು ಧೈರ್ಯವನ್ನು ಕಳೆದುಕೊಂಡಿಲ್ಲ. 
    ಅವರು ಖ್ಯಾತ ರಂಗಕರ್ಮಿ ಏಣಗಿ ಬಾಳಪ್ಪನವರ ನಾಟಕ ಕಂಪನಿಯಲ್ಲಿ ಪ್ರಧಾನ ನಟರಾಗಿ ಕಾರ್ಯನಿರ್ವಹಿಸಿದರು. ಭಾರತೀಯ ಸ್ವಾತಂತ್ರ್ಯ ನಂತರ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ರಂಗಭೂಮಿಯ ಪ್ರೀತಿ ಮತ್ತು ಸೇವೆಯನ್ನು ಮುಂದುವರಿಸಿದರು. 'ಕಾಲಚಕ್ರ', 'ಸತ್ಯ ಪರಂಜ್ಯೋತಿ', 'ಪ್ರಮದೆಯರ ಪಾರ್ಲಿಮೆಂಟ್', 'ಕಿತ್ತೂರ ಚೆನ್ನಮ್ಮ' ಮುಂತಾದ ನಾಟಕಗಳನ್ನು ರಚಿಸಿದ ಅವರು, ಅನೇಕ ಪ್ರದರ್ಶನಗಳಲ್ಲಿ ಜನಮೆಚ್ಚುಗೆ ಗಳಿಸಿದರು. ಏಕಪಾತ್ರಾಭಿನಯದಲ್ಲಿ “ಎತ್ತಿದ ಕೈ" ಎಂಬ ಖ್ಯಾತಿ ಪಡೆದ ಅವರು, 'ದಾನಶೂರ ಕರ್ಣ', 'ಶಕುನಿ', 'ಅಶ್ವತ್ಥಾಮ' ಮುಂತಾದ ಪಾತ್ರಗಳಲ್ಲಿ ಕಲಾ ರಸಿಕರ ಮೆಚ್ಚುಗೆ ಗಳಿಸಿದರು. ಅವರ 'ಶಾಕುಂತಲಾ' ರೂಪಕವನ್ನು ಖ್ಯಾತ ರಂಗಕರ್ಮಿ ಶ್ರೀ ಜಿ.ಸಿ. ಶೇಖರ್ 1995ರಲ್ಲಿ ನಾಟಕವನ್ನಾಗಿ ರೂಪಾಂತರಿಸಿ, ಭರ್ಜರಿ ಪ್ರದರ್ಶನ ನೀಡಿದರು. 
    ಸಾಹಿತ್ಯ, ರಂಗಭೂಮಿ, ರಾಜಕಾರಣ, ಮತ್ತು ಶಿಕ್ಷಣದಲ್ಲಿ ಬಹುಮುಖ ಪ್ರತಿಭೆಯೊಂದಿಗೆ, ವೆಂಕಣ್ಣಾಚಾರ್ಯರು ಕನ್ನಡ ಸಾರಸ್ವತ ಲೋಕಕ್ಕೆ ಮೌಲ್ಯಯುತ  ಕೊಡುಗೆಯನ್ನು ನೀಡಿದ್ದಾರೆ..

ಯಲ್ಲಾಪುರದ ಮಕ್ಕಳ ಗಣಪತಿ: 18ನೇ ವರ್ಷದ ವಿಜೃಂಭಣೆಯ ಗಣೇಶೋತ್ಸವ

IMG-20240910-173726ಯಲ್ಲಾಪುರ : ಯಲ್ಲಾಪುರದ ಶಿರಸಿ ರಸ್ತೆಯ ಪಿಎಲ್‌ಡಿ ಬ್ಯಾಂಕ್ ಎದುರಿನ ಹೆಸ್ಕಾಂ ಗ್ರಿಡ್ ಪಕ್ಕದಲ್ಲಿ ನಡೆಯುತ್ತಿರುವ ಗಣೇಶೋತ್ಸವವು ಈ ಬಾರಿ 18ನೇ ವರ್ಷದ ವಿಜೃಂಭಣೆಯಲ್ಕಿದೆ. 18 ವರ್ಷಗಳ ಹಿಂದೆ ಮಕ್ಕಳ ಆಟದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿ, ಇಂದಿಗೂ ತಮ್ಮ ವಿಶೇಷತೆ ಮತ್ತು ಯಶಸ್ಸನ್ನು ಕಾಪಾಡಿಕೊಂಡಿದೆ. 
   ಪ್ರಾರಂಭದಲ್ಲಿ ಕೇವಲ ಮಕ್ಕಳ ತಯಾರಿ ಮತ್ತು ಪೂಜೆಯಿಂದ ಆರಂಭವಾದ ಈ ಕಾರ್ಯಕ್ರಮವು, ಈಗ ಆ ಮಕ್ಕಳೇ ಯುವಕರಾಗಿ, ಉದ್ಯೋಗಸ್ಥರಾಗಿ ಸಂಪೂರ್ಣ ಪ್ರೋತ್ಸಾಹ ನೀಡಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಿದ್ದಾರೆ. ಈ ವಿಶೇಷ ಗಣಪತಿಯನ್ನು ಸ್ಥಳೀಯ ಜನರು "ಮಕ್ಕಳ ಗಣಪತಿ" ಎಂದೇ ಆಪ್ಯಾಯಿತವಾಗಿ ಕರೆದುಕೊಳ್ಳುತ್ತಾರೆ. 
 ಮಕ್ಕಳ ಆಟದಿಂದ ಆರಂಭವಾದ ಉತ್ಸವ 
 18 ವರ್ಷಗಳ ಹಿಂದೆ, ಪ್ರಶಾಂತ ಗಾಳಪ್ಪನವರ, ರಾಘವೇಂದ್ರ ಗಾಳಪ್ಪನವರ, ಗಣೇಶ ಗಾಳಪ್ಪನವರ, ಸಂಜಯ ಗಾಳಪ್ಪನವರ, ಪರಶುರಾಮ ಭೋವಿವಡ್ಡರ್, ವಿಠ್ಠಲ ಭೋವಿವಡ್ಡರ್, ಸಂತೋಷ್ ಹರ್ನಳಗಿ, ಮಂಜುನಾಥ ಭೋವಿವಡ್ಡರ್, ನಾಗರಾಜ ಭೋವಿವಡ್ಡರ್ ಮತ್ತು ಮನೋಜ ಹರ್ನಳಗಿ ಮೊದಲಾದ ಮಕ್ಕಳು ಒಟ್ಟಾಗಿ ಈ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಅವರ ಪುಟ್ಟ ಮನಸ್ಸಿನ ಅಭಿಲಾಷೆಯೇ ಈ ಉತ್ಸವದ ವಾಸ್ತವಿಕ ರೂಪವಾಗಿದೆ. IMG-20240910-173716 ಈಗಿನ ದಿನಗಳಲ್ಲಿ, ಅಂದಿನ ಮಕ್ಕಳು ತಮ್ಮ ಉದ್ಯೋಗ ಮತ್ತು ಇತರ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾ, ಈ ಉತ್ಸವವನ್ನು ಪೂರಕವಾಗಿ ಬೆಂಬಲಿಸುತ್ತಿದ್ದಾರೆ. ಅಂದಿನ ಮಕ್ಕಳು ಇಂದಿನ ಯುವಕರಾಗಿ, ಗಣೇಶೋತ್ಸವದ ಪ್ರತಿಯೊಂದು ಹಂತದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. 
 ಹಬ್ಬದ ವಿಜೃಂಭಣೆಯ ಸ್ಥಿತಿ: 
ಈ 18 ವರ್ಷಗಳಲ್ಲಿ, ಹಬ್ಬದ ಆಚರಣೆ ಸತತವಾಗಿ ದೊಡ್ಡದಾಗಿ, ಹೆಚ್ಚಿನ ಜನಪ್ರಿಯತೆ ಸಂಪಾದಿಸಿದೆ. ಐದು, ಹತ್ತು, ಹಾಗೂ ಹದಿನೈದು ವರ್ಷಗಳ ಗಜಾನನೋತ್ಸವದಲ್ಲಿ ಮಕ್ಕಳು ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಬಾರಿ ಉತ್ಸವವು ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡಿದ್ದು, ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. 
ವಿಶೇಷ ಆಚರಣೆ ಮತ್ತು ವಿಸರ್ಜನೆ :
 ಈ ಬಾರಿ ಕೂಡ ಗಣಪತಿಯ ವಿಸರ್ಜನೆ ಸೆಪ್ಟೆಂಬರ್ 11ರಂದು ಅದ್ಧೂರಿಯಾಗಿ ನಡೆಯಲಿದೆ. ಈ ಮೂರ್ತಿ, ಹಿಂದಿನ ವರ್ಷಗಳಿಂದಲೂ ಹಾಗೆಯೇ, ಭಕ್ತರ ಅಪಾರ ಪ್ರೀತಿ ಹಾಗೂ ಶ್ರದ್ಧೆಯಿಂದ ಪೂಜಿಸಲ್ಪಡುತ್ತಿದ್ದು, ಇದರಿಂದ ಈ ಭಾಗದಲ್ಲಿ ಐದು ದಿನಗಳ ಕಾಲ ಹಬ್ಬದ ವಾತಾವರಣ ಮುಂದುವರೆಯುತ್ತಿದೆ. 
ಯುವಕರ ಪ್ರೋತ್ಸಾಹ :
 ಪ್ರಶಾಂತ ಗಾಳಪ್ಪನವರ, ರಾಘವೇಂದ್ರ ಗಾಳಪ್ಪನವರ, ಗಣೇಶ ಗಾಳಪ್ಪನವರ ಮತ್ತು ಅವರ ಸಹೋದ್ಯೋಗಿಗಳು 18 ವರ್ಷಗಳ ಕಾಲ ಭಕ್ತರೊಂದಿಗೆ ತೀವ್ರವಾಗಿ ಜತೆಯಾಗಿ ಈ ಉತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿರುವುದು ವಿಶೇಷವಾಗಿದ್ದು, ಇದರಿಂದ ಯಲ್ಲಾಪುರದ ಜನರಿಗೆ ಹೊಸ ಬೆಳಕು ನೀಡಿದೆ.
.
.
.

ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘ: 25 ವರ್ಷಗಳಿಂದ ರೈತರಿಗೆ ಅಗತ್ಯ ಕೃಷಿ ಸೇವೆ : ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ

IMG-20240910-171556ಯಲ್ಲಾಪುರ: ಸಾವಿರ ಸದಸ್ಯರೊಂದಿಗೆ ಆರಂಭಗೊಂಡ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ 25 ವರ್ಷಗಳನ್ನು ಪೂರ್ಣಗೊಳಿಸಿ 26ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸುದೀರ್ಘ ಸೇವಾ ಅವಧಿಯಲ್ಲಿ ಸಂಘವು ಸದಸ್ಯರ ಸಂಖ್ಯೆಯನ್ನು ಉಳಿಸಿಕೊಂಡು, ರೈತರಿಗೆ ಅಗತ್ಯ ಕೃಷಿ ಸೇವೆಗಳನ್ನು ಒದಗಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ ಸಹಕಾರಿ ಸಂಘದ ಅಧ್ಯಕ್ಷ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ ಹೇಳಿದರು. 
    ಅವರು, ಮಂಗಳವಾರ ಎಪಿಎಂಸಿ ಅಡಿಕೆ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಲೆನಾಡು ಸಹಕಾರಿ ಸಂಘದ ಬಗ್ಗೆ ಮಾಹಿತಿ‌ ನೀಡಿದರು. ಸಂಘದ ಸೇವಾ ವ್ಯಾಪ್ತಿ ಯಲ್ಲಾಪುರ, ಅಂಕೋಲಾ, ಮುಂಡಗೋಡ ಮತ್ತು ಜೊಯಿಡಾ ತಾಲೂಕುಗಳನ್ನು ಒಳಗೊಂಡಿದೆ. ನೀರಾವರಿ ಪಂಪ್‌ಸೆಟ್, ಕೃಷಿ ಉಪಕರಣ, ಡ್ರಿಪ್ ಇತರ ಸೇವೆಗಳನ್ನು ಸ್ಪರ್ಧಾತ್ಮಕ ದರದಲ್ಲಿ ನೀಡುವ ಮೂಲಕ ಗ್ರಾಮೀಣ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಹಣ ಇಲ್ಲದ ರೈತರಿಗೂ ಅಗತ್ಯ ಕೃಷಿ ಉಪಕರಣಗಳನ್ನು ಒದಗಿಸಿ, ಅವರ ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಕಾರ್ಯವನ್ನು ಸಂಘ ನಿರ್ವಹಿಸುತ್ತಿದೆ ಎಂದು ಹೇಳಿದರು. IMG-20240910-171548 ಕೃಷಿ ಉಪಕರಣಗಳಿಗಾಗಿ ಜನರು ಹುಬ್ಬಳ್ಳಿ, ಶಿರಸಿಗೆ ಹೋಗಬೇಕಿತ್ತು. ರೈತರಿಗೆ ಸಮೀಪದಲ್ಲಿಯೇ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ 25 ವರ್ಷಗಳ ಹಿಂದೆ ಮನೆ ಮನೆಗೆ ಭೇಟಿ ನೀಡಿ ಸಂಘವನ್ನು ಸ್ಥಾಪಿಸಲಾಯಿತು. ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಶ್ರಮದಿಂದ ಸಂಘವು ಕಳೆದ ವರ್ಷ 47.85 ಲಕ್ಷ ರೂಪಾಯಿ ಲಾಭ ಗಳಿಸಿದೆ" ಎಂದು ಹೇಳಿದರು. 
     ಸಂಘದ ಪ್ರಮುಖ ಎಂ. ಜಿ. ಭಟ್ಟ ಶೀಗೆಪಾಲ್ ಮಾತನಾಡಿ, ಸೆಪ್ಟೆಂಬರ್ 13ರಂದು ಅಡಿಕೆ ಭವನದಲ್ಲಿ ಸಂಘದ ವಾರ್ಷಿಕ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ 14 ಸಾಧಕ ಕೃಷಿಕರನ್ನು ಸನ್ಮಾನಿಸಲಾಗುತ್ತದೆ. ಅವರ ಕೃಷಿ ಸಾಧನೆಗಳು ಮತ್ತು ಮಾರ್ಗದರ್ಶನಗಳು ಇತರರಿಗೂ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 
     ಈ ಕಾರ್ಯಕ್ರಮದಲ್ಲಿ ವಿನಾಯಕ ಹೆಗಡೆ, ಮಧುಕೇಶ್ವರ ಭಟ್ಟ, ಎಂ. ಆರ್. ಹೆಗಡೆ ತರೆಹಳ್ಳಿ, ದತ್ತಾತ್ರೇಯ ಬೋಳಗುಡ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
.
.
.

ಗಣೇಶೋತ್ಸವ ಶ್ರದ್ಧಾ, ಭಕ್ತಿಯನ್ನು ಮೂಡಿಸುವುದರೊಂದಿಗೆ ಪ್ರೀತಿ, ವಿಶ್ವಾಸವನ್ನು ಹುಟ್ಟಿಸುವ ಕೆಲಸವೂ ಆಗಬೇಕು

IMG-20240910-161225ಯಲ್ಲಾಪುರ: ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮಹತ್ವವನ್ನು ವಿವರಿಸಿದರು. "ಹಿರಿಯರನ್ನು ಗೌರವಿಸುವಂತೆಯೇ, ಊರಿನ ಮಕ್ಕಳನ್ನೂ ಪ್ರೋತ್ಸಾಹಿಸುವುದು ನಮ್ಮ ಹೊಣೆಗಾರಿಕೆ. ಇದು ಬೇರೆಯವರು ಅನುಸರಿಸಬೇಕಾದ ಮಾದರಿ," ಎಂದು ಹೇಳಿದರು. ಈ ಸಂದರ್ಭದಲ್ಲಿ ಹಳ್ಳಿಯ ಮಕ್ಕಳು ಮತ್ತು ಹಿರಿಯರನ್ನು ಸನ್ಮಾನಿಸುವ ಮೂಲಕ ಸಮಾಜದ ಹಿತಚಿಂತನೆಯನ್ನು ತೋರಿಸಿದ್ದಾರೆ ಎಂದು ಕುಂದರಗಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ಹೆಗಡೆ ಹೇಳಿದರು.   
   ಅವರು ಭರತನಹಳ್ಳಿ ಗಜಾನನೋತ್ಸವ ಸಮಿತಿ , ಭ್ರಮರಾಂಬಾ ಯುವಕ ಸಂಘ, ಮಲ್ಲಿಕಾರ್ಜುನ ದೇವಾಲಯ ವಿಸ್ವಸ್ಥ ಸಮಿತಿ, ಶ್ರೀಮಾತಾ ಜ್ಞಾನವಿಕಾಸ ಸಂಘ ಮೊದಲಾದ ಸಂಘಟನೆಗಳು ಆಯೋಜಿಸಿದ್ದ ಮೂವತ್ತನೇ ವರ್ಷದ ಗಜಾನನೋತ್ಸವ ಸಭಾ ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರಾಗಿ ಮಾತನಾಡುತ್ತಿದ್ದರು. IMG-20240910-161217 ಅವರು, ಭರತನಹಳ್ಳಿ ಗ್ರಾಮದಲ್ಲಿ 30 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಗಜಾನನೋತ್ಸವ ಸಮಾರಂಭವು ಅತ್ಯಂತ ವೈಭವದಿಂದ ನಡೆದಿದೆ. ಗಜಾನನೋತ್ಸವ ಸಮಿತಿಯು ಈ ವರ್ಷವೂ ಸಹ ಯುವಕರ ಮತ್ತು ಹಿರಿಯರ ಸಮಾನ ಭಾಗವಹಿಸುವಿಕೆಯಿಂದ ಮಹತ್ವವನ್ನು ನೀಡಿದೆ ಎಂದರು. IMG-20240910-161207 ಉಮ್ಮಚಗಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಬಾಳೆಗದ್ದೆ ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ, "ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತಮ್ಮ ಹಿರಿಯರ ಆದರ್ಶಗಳನ್ನು ಅರಿಯಬೇಕು. ಈ ಸ್ಥಳವು ಕಾಲಾನೂಕುಲವಾಗಿ ಬಡತನದ ಸಮಸ್ಯೆಯಿಂದ ಸಾಟಿಯಿಲ್ಲದ ಗಣೇಶೋತ್ಸವದ ಕೇಂದ್ರವಾಗಿ ಬೆಳೆದಿದೆ. ಈ ಧಾರ್ಮಿಕ ಉತ್ಸವವು ಶ್ರದ್ಧೆ, ಭಕ್ತಿ, ಪ್ರೀತಿ ಮತ್ತು ವಿಶ್ವಾಸವನ್ನು ಬಲಪಡಿಸಲು ಮಹತ್ವಪೂರ್ಣವಾಗಿದೆ," ಎಂದು ಹೇಳಿದರು. 
    ನಾಗೇಶ ಕೃಷ್ಣ ಗೌಡ ಅವರು ಅಧ್ಯಕ್ಷತೆಯನ್ನು ವಹಿಸಿ, ಈ ವರ್ಷದ ಗಜಾನನೋತ್ಸವವು ಯಶಸ್ವಿಯಾಗಿ ನಿರ್ವಹಿಸಲಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದ ವೇದಿಕೆಯನ್ನು ಪ್ರಗತಿ ವಿದ್ಯಾಲಯದ ಶಿಕ್ಷಕ ಪ್ರಕಾಶ ಎನ್. ಭಟ್ಟ, ಗಜಾನನೋತ್ಸವ ಸಮಿತಿಯ ಗೌರವಾಧ್ಯಕ್ಷ ಕಿರಣ್ ಕುಮಾರ್ ಸೋಮನಾಥ ಗೌಡ, ಕೃಷ್ಣ ಹುದಾರ್, ಹೊನ್ನಪ್ಪ ಪಟಗಾರ, ಇತರ ಗಣ್ಯರು ಹಂಚಿಕೊಂಡರು. 
    ಈ ಸಂದರ್ಭದಲ್ಲಿ, ನಿವೃತ್ತ ಕಾರ್ಯ ನಿರ್ವಾಹಕ ಸಂತೋಷ ನರಸಿಂಹ ಶೇಟ್, ಉತ್ತಮ ಕೃಷಿಕ ವಿಠ್ಠಲದಾಸ ಮಾಣೇಶ್ವರ ಶಿರಸಾಟ, ಹಾಗೂ ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಹಳ್ಳಿಯ ಮಕ್ಕಳು ಸನ್ಮಾನಿತರಾದರು.
   ಕಾರ್ಯಕ್ರಮದ ಉದಯ ಜಿ.ನಾಯ್ಕ ಅವರು ಸ್ವಾಗತಿಸಿ, ವಂದಿಸಿದರು.
.
.
.

ಯಲ್ಲಾಪುರ ಪಟ್ಟಣದಲ್ಲಿ ಅನಧಿಕೃತ ಜಾಹೀರಾತುಗಳು : ನಗರ ಅಂದವನ್ನು ಹಾಳು ಮಾಡುತ್ತಿವೆ!

IMG-20240910-151432ಯಲ್ಲಾಪುರ: ಪಟ್ಟಣದ ಸರ್ಕಾರಿ ಕಂಪೌಂಡುಗಳು, ವಿದ್ಯುತ್ ಕಂಬಗಳು ಮತ್ತು ಹಲವಾರು ಸುಂದರ ಶಿಲಾಯುಗರ ಮೇಲೆ ಖಾಸಗಿ ಉತ್ಪನ್ನಗಳ ಜಾಹೀರಾತುಗಳು ಅಕ್ರಮವಾಗಿ ಅಂಟಿಸಿ ಪ್ರಚಾರ ಮಾಡುತ್ತಿರುವುದು ಜನರ ಕಣ್ಣುಕಟ್ಟುವಂತಿದೆ. Pyara ಎಪಿಎಂಸಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ಕಾಂಪೌಂಡುಗಳಿಗೆ ವಾರ್ಷಿಕ ಲಕ್ಷಾಂತರ ರೂ ವೆಚ್ಚದಲ್ಲಿ ಬಣ್ಣ, ಸುಣ್ಣಗಳನ್ನು ಬಳಸಿ ಬಲಪಡಿಸಿದರೂ, ಖಾಸಗಿ ಕಂಪನಿಗಳು ಈ ಗೋಡೆಗಳನ್ನು ತಮ್ಮ ಜಾಹೀರಾತುಗಳಿಗಾಗಿ ಬಳಸಿಕೊಳ್ಳುತ್ತಿವೆ.IMG-20240910-151347 ಇವುಗಳಲ್ಲಿ ಮುಖ್ಯವಾಗಿ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸುತ್ತೇವೆ ಎಂಬ ನಕಲಿ ವೈದ್ಯರು, ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಇನ್ನೊಬ್ಬರ ಸುಳ್ಳು ಭವಿಷ್ಯ ಹೇಳುವ ಜ್ಯೋತಿಷಿಗಳು, ಹಾಗು ಅನಾಮಿಕ ಔಷಧ ಮಾರಾಟಗಾರರು ಅದರೊಂದಿಗೆ ಶಾಲಾ-ಕಾಲೇಜು ಟ್ಯೂಟೋರಿಯಲ್ಸ್, ಕಂಪ್ಯೂಟರ್ ತರಗತಿಗಳು ಸೇರಿದಂತೆ ಅನೇಕ ಶಿಕ್ಷಣಾತ್ಮಕ ಸಂಸ್ಥೆಗಳ ಜಾಹೀರಾತುಗಳು ಕಂಬ ಮತ್ತು ಗೋಡೆಗಳ ಮೇಲೆ ಅಂಟಿಸಿರುವುದು ಸಾಮಾನ್ಯವಾಗಿದೆ. ಯಲ್ಲಾಪುರದ ಜಾತ್ರೆ ಸಂದರ್ಭದಲ್ಲಿ ಬಿಳಿ ಬಣ್ಣದ ಬೀದಿ ದೀಪದ ಅಲಂಕಾರಿಕ ಹಾಗೂ ಕಮಾನು ಕಂಬಗಳನ್ನು ಅಳವಡಿಸಿ ಪಟ್ಟಣದ ಸೌಂದರ್ಯವನ್ನು ವೃದ್ಧಿಸಲಾಗಿತ್ತು. ಈಗ ಆ ಕಂಬಗಳ ಮೇಲೂ ಅನಧಿಕೃತ ಜಾಹೀರಾತುಗಳನ್ನು ಅಂಟಿಸುವ ಮೂಲಕ ಅಲಂಕಾರಿಕ ದೀಪದ ಕಂಬಗಳ ಅಂದವನ್ನು ಹಾಳು ಮಾಡಲಾಗಿದೆ. ಪಟ್ಟಣದ ಹಲವೆಡೆ ಅನಧಿಕೃತ ಬಂಟಿಂಗ್‌ಗಳು ಮತ್ತು ಜಾಹೀರಾತುಗಳನ್ನು ಅಳವಡಿಸಿರುವುದು ಕಾಣಸಿಗುತ್ತಿದೆ. Pyara ಪಟ್ಟಣ ಪಂಚಾಯತ ಆಡಳಿತ ಈ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದರೆ, ಸರಿಯಾದ ನಿರ್ವಹಣೆಯಿಂದ ಪ.ಪಂ.ಗೆ ಆದಾಯ ಲಭಿಸಬಹುದಾಗಿತ್ತು. ಸ್ಥಳೀಯ ವ್ಯಕ್ತಿಯೊಬ್ಬರು ಈ ಅನಧಿಕೃತ ಜಾಹೀರಾತುಗಳ ಫೋಟೋವನ್ನು ತೆಗೆದು ಜಿಲ್ಲಾಧಿಕಾರಿಗಳಿಗೆ, ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ, ಸಂಬಂಧಿಸಿದ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಕಳಿಸಿ, ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. Pyara ಇದಕ್ಕೆ ಸಂಬಂಧಿಸಿದಂತೆ, ಮಂಗಳವಾರ ಅಕ್ಕಿ ಪೂರೈಕೆ ಮಾಡುವ ಖಾಸಗಿ ಕಂಪನಿಯೊಂದು ಎಪಿಎಂಸಿ ಗೋಡೆಯ ಮೇಲೆ ಜಾಹೀರಾತು ಅಂಟಿಸಿರುವುದು ಕಂಡುಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತಿಳಿದುಬಂದಿಲ್ಲ. Pyara ಅಥವಾ, ಅಕ್ಕಿ ಪೂರೈಕೆ ಮಾಡುವ ಕಂಪನಿಯ ವಿರುದ್ಧ ಎಪಿಎಂಸಿ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಹಾಗೂ ಪಟ್ಟಣ ಪಂಚಾಯಿತಿ ಮಾಲೀಕತ್ವದ ಕಮಾನು ದೀಪದ ಕಂಬ ಅಲಂಕಾರಿಕ ಕಂಬದ ಮೇಲೆ ಅಂಟಿಸಲಾದ ಜಾಹೀರಾತುಗಳ ವಿರುದ್ಧ ಎಷ್ಟು ದಂಡ ಹಾಕುತ್ತಾರೆ. ಎಲ್ಲವನ್ನು ಗಮನಿಸಿ ಈಗಲೇ ಕ್ರಮ ಕೈಗೊಳ್ಳುತ್ತಾರೋ ಅಥವಾ ಶಂಖದಿಂದ ಬಂದ ನೀರೇ ಪವಿತ್ರ ಸ್ಥಳೀಯವಾಗಿ ಪ್ರಕಟವಾಗುವ ವರದಿ ಅಪವಿತ್ರ ಎಂದು ವಿಧಾನಸೌಧ ಹಾಗೂ ಮುಖ್ಯ ಕಾರ್ಯದರ್ಶಿಗಳಿಂದ ಬರುವ ನೋಟಿಸ್‌ಗೆ ಕಾದು ಉತ್ತರಿಸುತ್ತಾರೆಯೋ ಕಾದು ನೋಡಬೇಕಾಗಿದೆ.
.
.
.

ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಾಗತೀಕ ಕೈ ತೊಳೆಯುವ ದಿನಾಚರಣೆ; ಮಕ್ಕಳಲ್ಲಿ ಜಾಗೃತಿ

IMG-20240910-124531ಯಲ್ಲಾಪುರ : ಪಟ್ಟಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ಲೋಬಲ್ ಹ್ಯಾಂಡ್ ವಾಷಿಂಗ್ ಡೇ (ಜಾಗತಿಕ ಕೈ ತೊಳೆಯುವ ದಿನ) ಯನ್ನು ಮಕ್ಕಳ ನೃತ್ಯ ಹಾಗೂ ಪ್ರಾತ್ಯಕ್ಷಿಕೆಯ ಮೂಲಕ ಆಚರಿಸಲಾಯಿತು. IMG-20240910-124512 ಮುಖ್ಯಾಧ್ಯಾಪಕರಾದ ಫಾ. ರೊಯ್ಯಸ್ಟನ ಗೊನ್ಸಾಲ್ವಿಸ್ ಜಾಗತೀಕ ಕೈ ತೊಳೆಯುವ ದಿನದ ಕುರಿತು‌ ಮಾತನಾಡಿ, ಗ್ಲೋಬಲ್ ಹ್ಯಾಂಡ್ ವಾಶಿಂಗ್ ಡೇ, ಜನರಿಗೆ ಕೈ ತೊಳೆಯುವ ಪ್ರಾಮುಖ್ಯತೆಯನ್ನು ಅರಿವು ಮಾಡಿಸುವುದಕ್ಕಾಗಿ ಆಚರಿಸಲಾಗುತ್ತದೆ. ಸ್ವಚ್ಛತೆಯ ಅಧಾರಭೂತವಾದ ಚಟುವಟಿಕೆಗಳಲ್ಲೊಂದಾದ ಕೈ ತೊಳೆಯುವಿಕೆ, ಸೋಂಕುಗಳು ಮತ್ತು ರೋಗಗಳ ಹರಡುವಿಕೆಯನ್ನು ತಡೆಯುವ ಮುಖ್ಯ ವಿಧಾನವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಯುನಿಸೆಫ್ (UNICEF) ಮೊದಲಾದ ಸಂಸ್ಥೆಗಳ ಪ್ರಕಾರ, ಸರಿಯಾಗಿ ಕೈ ತೊಳೆಯುವುದರಿಂದ ಹಲವಾರು ತೀವ್ರ ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು ಎಂದು ತಿಳಿಸಿಕೊಟ್ಟಿವೆ. IMG-20240910-124502 ಕೈ ತೊಳೆಯುವಾಗ, ನೀರು ಮತ್ತು ಸಾಬೂನು ಬಳಸಿ ಕನಿಷ್ಠ 20 ಸೆಕೆಂಡುಗಳ ಕಾಲ ಕೈಯ ಎಲ್ಲಾ ಭಾಗಗಳನ್ನು ತೊಳೆದರೆ, ನಮ್ಮ ಕೈಯಲ್ಲಿ ಇರಬಹುದಾದ ವೈರಸ್, ಬ್ಯಾಕ್ಟೀರಿಯಾ ಮುಂತಾದ ಪತಜನ್ಯಗಳನ್ನು ತೆಗೆದುಹಾಕಬಹುದು. 
    ಈ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವು, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಆರೋಗ್ಯಕರ ಕೈ ತೊಳೆಯುವ ಅಭ್ಯಾಸವನ್ನು ಉತ್ತೇಜಿಸುವುದು. ಇದು ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡಬಲ್ಲ ಸಾಮಾನ್ಯ ಮತ್ತು ಪರಿಣಾಮಕಾರಿ ಚಟುವಟಿಕೆ. ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಹ್ಯಾಂಡ್ ವಾಶಿಂಗ್ ಡೇ ಉದ್ದೇಶ ಸಹಕಾರಿಯಾಗಿದೆ. ಹೀಗಾಗಿ, ಎಲ್ಲರೂ ಕೈ ತೊಳೆಯುವ ಸಾಮಾನ್ಯ ಚಟುವಟಿಕೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕು ಎಂದು ಹೇಳಿದರು. IMG-20240910-124524 ಶಾಲೆಯ ಶಿಕ್ಷಕಿಯಾದ ರವಿನ ಗಾಂವ್ಕರ ಅವರ ನೇತತ್ವದಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ಅಭಿನಯ ಗೀತೆ ಪ್ರದರ್ಶನ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸಿದರು. 
     ಶಾಲೆಯ ಶಿಕ್ಷಕರಾದ ಸಿಸ್ಟರ ಸೋನಿಯಾ, ರೇಖಾ ಫರ್ನಾಂಡಿಸ್, ಸಂಗೀತ, ಕುಸುಮಾ, ದಿವ್ಯ, ಲೀಲೆಶ, ಮಫೀನಾ , ಅನಿತಾ, ಇತರ ಶಿಕ್ಷಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.
.
.
.

ಯಲ್ಲಾಪುರ ಅರಣ್ಯ ಇಲಾಖೆಯ ಗಣೇಶೋತ್ಸವ: ಧಾರ್ಮಿಕ ಭಾವೈಕ್ಯತೆ ಹಾಗೂ ಪರಿಸರ ಕಾಳಜಿಯ ಜೀವಂತ ಉದಾಹರಣೆ

IMG-20240910-103743ಯಲ್ಲಾಪುರ : ಇತ್ತೀಚಿನ ದಿನಗಳಲ್ಲಿ ಯಲ್ಲಾಪುರ ಅರಣ್ಯ ಇಲಾಖೆಯ ಡಿಆರ್‌ಎಫ್ಓ ಗಸ್ತು ವನಪಾಲಕರಾದ ಅಲ್ತಾಫ್ ಚೌಕಡಾಕ್, ಶಾನವಾಜ್ ಮುಲ್ತಾನಿ, ಅಲ್ಮಾಸ್ ಬಿಜಾಪುರ, ಮೆಹಬೂಬ್ ಹಾಗೂ ಇತರ ಸಿಬ್ಬಂದಿಗಳು ಆಚರಿಸಿರುವ ಗಣೇಶೋತ್ಸವವು ಭಾವೈಕ್ಯತೆ ಮತ್ತು ಧಾರ್ಮಿಕ ಸಹಜೀವನದ ಒಂದು ನಿದರ್ಶನವಾಗಿ ಪ್ರಸಿದ್ಧಿಯಲ್ಲಿದೆ. ಈ ಅರಣ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಂಪ್ರದಾಯಿಕ ಆಚರಣೆ ಇದೆ. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮಾಜದ ಜನರು, ಈ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ. IMG-20240910-103734 ಈ ವರ್ಷದ ಗಣೇಶೋತ್ಸವದಲ್ಲಿ ಅಲ್ತಾಫ್ ಚೌಕಡಾಕ್, ಶಾನವಾಜ್ ಮುಲ್ತಾನಿ, ಅಲ್ಮಾಸ್ ಬಿಜಾಪುರ, ಮೆಹಬೂಬ್ ಮತ್ತು ಅವರ ಕುಟುಂಬದವರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ, ಸಕ್ರಿಯವಾಗಿ ಪಾಲ್ಗೊಂಡು ಮೂರ್ತಿಯ ಮಂಟಪ ಸಿದ್ಧತೆ, ಗಣಪತಿ ಮೂರ್ತಿಯನ್ನು ಕಲಾವಿದರ ಮನೆಯಿಂದ ತೆಗೆದುಕೊಂಡು ಬರುವ ಕೆಲಸ, ಮತ್ತು ಅನ್ನ ಸಂತರ್ಪಣೆಯಂತಹ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ. ಇಂಥ ಘಟನೆಗಳು, ನಮ್ಮ ಸಮಾಜದಲ್ಲಿ ವಿವಿಧ ಧರ್ಮಗಳು ಪರಸ್ಪರ ಗೌರವದಿಂದ ಮತ್ತು ಪ್ರೀತಿಯಿಂದ ನಡೆಯಬೇಕೆಂಬ ಮಹತ್ವದ ಸಂದೇಶವನ್ನು ಸಾರುತ್ತವೆ. IMG-20240910-103721 ಈ ಕಾರ್ಯಕ್ರಮವು ಅಧಿಕಾರಿಗಳ ಅಡಿಯಲ್ಲಿ ನಡೆಯುತ್ತಿದ್ದು, ಎಲ್ಲ ಸಿಬ್ಬಂದಿಗಳು ಭಾಗವಹಿಸುತ್ತಿರುವುದು ಗಮನಾರ್ಹವಾಗಿದೆ. ಮಹಾಪೂಜೆ, ವಿಧಿ ವಿಧಾನ, ಕ್ರೀಡೆಗಳು, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಧರ್ಮದವರು ಈ ಉತ್ಸವದಲ್ಲಿ ಶ್ರದ್ಧೆಯಿಂದ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಎಲ್ಲಾ ಮುಸ್ಲಿಂ ಮತ್ತು ಹಿಂದೂ ಧರ್ಮದ ಸದಸ್ಯರು ಭಕ್ತಿ ಭಾವದಿಂದ ಭಾಗವಹಿಸಿದ್ದಾರೆ. 
ಕಾರ್ಯಕ್ರಮದ ವಿವರಗಳು : 
 ಗಣೇಶೋತ್ಸವವು ಸೆಪ್ಟೆಂಬರ್ 7ರಿಂದ 11ರವರೆಗೆ ನಡೆಯುತ್ತಿದ್ದು, ಯಲ್ಲಾಪುರ ಅರಣ್ಯ ಇಲಾಖೆಯ ಆವರಣದಲ್ಲಿ ಪ್ರತಿದಿನವೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿವೆ. 7ರಂದು ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಉತ್ಸವ ಪ್ರಾರಂಭಗೊಂಡು, 8ರಂದು ಮಹಿಳೆಯರಿಗೆ ರಂಗೋಲಿ, ಸಂಗೀತ ಖುರ್ಚಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 9ರಂದು ಪುರುಷರು ಮತ್ತು ಮಹಿಳೆಯರಿಗೆ ಕೇರಮ್ ಮತ್ತು ಚೆಸ್ ಸ್ಪರ್ಧೆಗಳು ನಡೆಯಿತು. 
    ಇಂದು (10 ಸೆಪ್ಟೆಂಬರ್) ಮುಖ್ಯ ದಿನವಾಗಿದ್ದು, ಗಣಹೋಮ, ಕಲಶ ಪೂಜಾ, ಮತ್ತು ಅನ್ನಸಂತರ್ಪಣೆ ನಡೆದಿವೆ. ಸಾಯಂಕಾಲದ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ. 11 ರಂದು ಮಹಾಪೂಜೆ, ಫಲಾವಳಿ ಸವಾಲು, ಮತ್ತು ಮಂಗಲಮೂರ್ತಿ ವಿಸರ್ಜನೆ ಜರುಗಲಿವೆ. IMG-20240910-103708 ಈ ಕಾರ್ಯಕ್ರಮಗಳು ಯಲ್ಲಾಪುರ ಅರಣ್ಯ ಇಲಾಖೆಯ ಉಸ್ತುವಾರಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು, ಮುಸ್ಲಿಂ ಮತ್ತು ಹಿಂದೂ ಸಮುದಾಯದ ಸಕ್ರಿಯ ಸಹಭಾಗಿತ್ವವು ಮಹತ್ವದ ಅಂಶವಾಗಿದೆ. ಅಲ್ತಾಫ್ ಚೌಕಡಾಕ್ ಹಾಗೂ ಶಾನವಾಜ್ ಮುಲ್ತಾನಿ, ಮುಂತಾದವರು, ಈ ಕಾರ್ಯಕ್ರಮದ ಆಯೋಜನೆ, ಮೂರ್ತಿ ಪ್ರತಿಷ್ಠಾಪನೆ, ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. 
ಭಾವೈಕ್ಯತೆ ಮತ್ತು ಧಾರ್ಮಿಕ ಸೌಹಾರ್ದತೆ : 
 ಅರಣ್ಯ ಇಲಾಖೆಯ ಈ ಆಚರಣೆಗಳು, ಕೇವಲ ಧಾರ್ಮಿಕ ಹಬ್ಬವಾಗಿಯೇ ಉಳಿಯದೆ, ವಿಭಿನ್ನ ಧರ್ಮದ ಜನರು ಒಂದೆಡೆ ಸೇರಿ, ಪರಸ್ಪರ ಸಹಾನುಭೂತಿಯಿಂದ ಮತ್ತು ಗೌರವದಿಂದ ನಡವಳಿಕೆಯಿಂದ ವರ್ತಿಸಬಹುದೆಂಬ ಉದಾಹರಣೆ ಕೊಟ್ಟಿವೆ. ಇಂತಹ ಕಾರ್ಯಕ್ರಮಗಳು, ಧರ್ಮಗಳ ಅಂತರವನ್ನು ಮೀರಿಸಿ, ಸಹಜೀವನದ, ಸಹಕಾರದ, ಮತ್ತು ಸೌಹಾರ್ದತೆಯ ಜಾಲವನ್ನು ಹೆಣೆಯುತ್ತವೆ. 
ಭಕ್ತಾದಿಗಳ ಅಭಿಪ್ರಾಯ:&nbಜsp;
   ಯಲ್ಲಾಪುರದ ಈ ಆಚರಣೆಗಳು ಕೇವಲ ಆಡಳಿತ ಕಚೇರಿ ಮಟ್ಟದಲ್ಲಿ ಮಾತ್ರವಲ್ಲ, ಸಾರ್ವಜನಿಕರು ಮತ್ತು ವಿವಿಧ ಧಾರ್ಮಿಕ ಸಮುದಾಯಗಳ ಗಮನ ಸೆಳೆಯುತ್ತಿವೆ. ಡಿಆರ್‌ಎಫ್ಓ ಗಸ್ತು ವನಪಾಲಕರಾದ ಅಲ್ತಾಫ್, ಶಾನವಾಜ್, ಮತ್ತು ಇತರರು ಮಾಡಿದ ಕಾರ್ಯಗಳು, ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ಭಾವೈಕ್ಯತೆಗೆ, ಸಹಜೀವನಕ್ಕೆ ಆದರ್ಶವಾಗಿವೆ. 
    IMG-20240910-120404 IMG-20240910-120315 ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಗಜಾನನೋತ್ಸವ ಪ್ರಸಿದ್ಧಿ ಹೊಂದಿದ್ದು, ದೇಶಾದ್ಯಂತ ಜನರಿಂದ ಪ್ರಶಂಸಿಸಲ್ಪಡುತ್ತಿದೆ. ಗಣೇಶೋತ್ಸವದ ಮಂಟಪದ ಸುತ್ತಲೂ ಅಳವಡಿಸಲಾದ ಪ್ಲಾಸ್ಟಿಕ್ ಬಳಸಬೇಡಿ, ಪ್ಲಾಸ್ಟಿಕ್ ಮುಕ್ತ ನಿಸರ್ಗವನ್ನು ಸೃಷ್ಟಿಸಿ ಎನ್ನುವ ಉದ್ಘಾಷ ಇರುವ ಬ್ಯಾನರ್‌ಗಳು ಗಣೇಶೋತ್ಸವದ ಮಂಟಪಕ್ಕೆ ಮತ್ತಷ್ಟು ಮೆರಗು ನೀಡಿವೆ.
.
.
.

ವೈಟಿಎಸ್‌ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ

IMG-20240910-061741ಯಲ್ಲಾಪುರ : ಇತ್ತೀಚಿಗೆ ನಡೆದ ಪ್ರೌಢಶಾಲಾ ಕಿರವತ್ತಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಕ್ಕಳು 228 ಅಂಕಳೊಂದಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ವಿಶ್ವ ಆಚಾರಿ 400 ಮೀಟರ್ ಓಟದಲ್ಲಿ, ಕಾರ್ತಿಕ ವರಕ 800 ಓಟದಲ್ಲಿ, ವಾಜಿ ಶಿಂದೆ 1500 ಮೀಟರ್ ಓಟದಲ್ಲಿ, ಮಂಜುನಾಥ್ ಸಿಂಧೆ ಈಟಿ ಏಸೆತದಲ್ಲಿ, ನಂದನ್ ಗೇರ್ ಗೆದ್ದೆ ಚೆಸ್‍ನಲ್ಲಿ ಪ್ರಥಮ ಹಾಗೂ ಬಾಲಕರ ವಿಭಾಗದ ಖೋಖೋದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟ ಹಾಗೂ 110 ಮೀ ಹರ್ಡಲ್ಸ್‍ನಲ್ಲಿ ಛಾಯಾಸಿದ್ಧಿ , IMG-20240910-061731 200 ಮೀಟರ್ ಓಟದಲ್ಲಿ ಗೀತಾ ಸಿದ್ದಿ ,400 ಮತ್ತು 800ಮೀ ಓಟದಲ್ಲಿ ಜಯಶ್ರೀ ಮೈಲಾರ್, 1500 ಮೀಟರ್ ಓಟದಲ್ಲಿ ರಕ್ಷಿತಾ ಎಂ ಮರಾಠಿ, 400ಮೀಟರ್ ಹರ್ಡಲ್ಸನಲ್ಲಿ ರಕ್ಷಿತಾ ಎಸ್ ಮರಾಠಿ, 3000 ಮೀಟರ್ ನಡಿಗೆ ಕೃಪಾ ಮರಾಠಿ, 3000ಮೀಟರ್ ಓಟದಲ್ಲಿ ಕವಿತಾ ಮರಾಠಿ, ಈಟಿ ಎಸೆತ ಸಂಧ್ಯಾ ಗೌಡ , ಚಕ್ರ ಎಸೆತ ಸಂಧ್ಯ ಗೌಡ , ಉದ್ದ ಜಿಗಿತ ರೇಷ್ಮಾ ಚೌಕೇಳೆಕರ್, ತ್ರಿವಿಧ ಜಿಗಿತ ಪ್ರಿಯಾಂಕ ಸಿದ್ದಿ ಪ್ರಥಮ ಸ್ಥಾನ ಗಳಿಸಿದ್ದು 100 X 400ರಿಲೇ ಗೀತಾ ಸಿದ್ದಿ ತಂಡ , 400 X 400ರಿಲೇ ರಕ್ಷಿತಾ ಎಸ್, ಬಾಲಕಿಯರ ಖೋಖೋ, ಕಬ್ಬಡ್ಡಿ , ಥ್ರೋಬಾಲ್‍ಗಳಲ್ಲಿ ಪ್ರಥಮಸ್ಥಾನ ಗಳಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ರವಿಕುಮಾರ ಲಕ್ಷ್ಮಣ ಶಾನಭಾಗ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಬಿ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಮುಖ್ಯೋಪಾಧ್ಯಾಪಕ ಎನ್.ಎಸ್ ಭಟ್ಟ, ಕಾಲೇಜಿನ ಪ್ರಾಂಶುಪಾಲ ಆನಂದ ಹೆಗಡೆ & ಶಾಲೆಯ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.
.
.
.

ಯಲ್ಲಾಪುರದ ಕಾಳಮ್ಮನಗರದಲ್ಲಿ 31ನೇ ವರ್ಷದ ಗಣೇಶೋತ್ಸವ: ವಿಜ್ರಂಬಣೆಯ ಸಾಂಸ್ಕೃತಿಕ ಸಂಭ್ರಮ

IMG-20240910-055827ಯಲ್ಲಾಪುರ: ಕಾಳಮ್ಮನಗರದ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ, ಯಲ್ಲಾಪುರದ ಪ್ರಮುಖ ಗಜಾನನೋತ್ಸವ ಸಮಿತಿಗಳಲ್ಲೊಂದಾಗಿದ್ದು, ಈ ವರ್ಷ ತನ್ನ 31ನೇ ವರ್ಷದ ಗಣೇಶೋತ್ಸವವನ್ನು ವಿಜ್ರಂಬಣೆಯಿಂದ ಆಚರಿಸಲು ಸಜ್ಜಾಗಿದೆ. 
     1993ರಲ್ಲಿ ಹುಚ್ಚಪ್ಪ ಗೋಣಿಮಠ, ದೇವಿದಾಸ ನಾಯರ, ದಿ. ಶಿವಾನಂದ ನಾಯ್ಕ ಮತ್ತು ಇತರ ಪ್ರಮುಖರ ಪ್ರೇರಣೆಯಿಂದ ಈ ಸಮಿತಿಯು ಆರಂಭಗೊಂಡಿತು. ಈ 31 ವರ್ಷಗಳಲ್ಲಿ, ಸಮಿತಿಯು ಪ್ರತಿವರ್ಷವೂ ಧಾರ್ಮಿಕತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗಣೇಶ ಚತುರ್ಥಿಯನ್ನು ವಿಜ್ರಂಬಣೆಯಿಂದ ಆಚರಿಸುತ್ತಿದೆ. IMG-20240910-055817 ಈ ಬಾರಿ ಸಮಿತಿಯ ಅಧ್ಯಕ್ಷರಾಗಿ ಆಭರಣ ವ್ಯಾಪಾರಿ ನರೇಂದ್ರ ಪಾಟೀಲ ನೇತೃತ್ವ ವಹಿಸಿಕೊಂಡಿದ್ದು, ಉತ್ಸವದ ಸಿದ್ಧತೆಗಳು ಸಂಪೂರ್ಣಗೊಂಡಿವೆ. ಸೆಪ್ಟೆಂಬರ್ 7ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಉತ್ಸವಕ್ಕೆ ಭವ್ಯ ಚಾಲನೆ ದೊರೆತಿದೆ. ಇದೇ 11 ದಿನಗಳ ಗಣೇಶೋತ್ಸವ, ಸೆಪ್ಟೆಂಬರ್ 17, ಮಂಗಳವಾರದವರೆಗೆ ಸಾಗಲಿದೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಸ್ಸನ್ನು ಆಕರ್ಷಿಸುವಂತಿವೆ. 
ಉತ್ಸವದ ಪ್ರಮುಖ ಕಾರ್ಯಕ್ರಮಗಳು: 
 ಶ್ರೀ ಮೂರ್ತಿ ಪ್ರತಿಷ್ಠಾಪನೆ: ಪ್ರತಿ ವರ್ಷದಂತೆ ಗಣೇಶ ಮೂರ್ತಿಯನ್ನು ಭಕ್ತರಿಂದ ತುಂಬು ಮನಸ್ಸಿನಿಂದ ಪ್ರತಿಷ್ಠಾಪಿಸಲಾಯಿತು. ತ್ರಿಕಾಲ ಪೂಜೆ: ದಿನಕ್ಕೆ ಮೂರು ಬಾರಿ ನಡೆಯುವ ಪೂಜೆಗಳಲ್ಲಿ ಭಕ್ತಾದಿಗಳು ಸಕ್ರಿಯವಾಗಿ ಭಾಗವಹಿಸುತ್ತಾರೆ. ಭಜನೆ: ಸ್ಥಳೀಯ ಭಜನೆ ಮಂಡಳಿಗಳು ಭಕ್ತಿಗೀತೆಗಳನ್ನು ಹಾಡಿ, ಭಕ್ತರಲ್ಲಿ ಧಾರ್ಮಿಕ ಶ್ರದ್ಧೆ ಹುಟ್ಟಿಸುತ್ತವೆ. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು: ಸಮಿತಿಯು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅವರಿಗೆ ಕಲೆ, ಸಂಸ್ಕೃತಿಯ ಬೆನ್ನೆಲುಬನ್ನು ನಿಲುಕಿಸುವ ಉದ್ದೇಶ ಹೊಂದಿದೆ. ಯುವಕರ ಮನರಂಜನಾ ಕಾರ್ಯಕ್ರಮಗಳು: ಯುವಕರಿಗಾಗಿ ವಿವಿಧ ಮನರಂಜನಾ ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, IMG-20240910-055806 ಇದರಿಂದ ಯುವಕರಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗುತ್ತದೆ. ದಿನಗಳ ಗಣೇಶೋತ್ಸವದ ಸಾಂಸ್ಕೃತಿಕ ಸಂಭ್ರಮ ಈ ಬಾರಿಯ ಉತ್ಸವವು, ಪೂರ್ವದಂತೆ ಧಾರ್ಮಿಕ ಕಾರ್ಯಕ್ರಮಗಳು, ಗಣಹೋಮ, ಹೋಮಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೂಡಿದೆ. ಕಾಳಮ್ಮನಗರದಲ್ಲಿ ಪ್ರತಿಯೊಂದು ದಿನವೂ ನೂರಾರು ಭಕ್ತರು ಈ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಶೇಷವಾಗಿ ಮಕ್ಕಳು ಮತ್ತು ಯುವಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ.IMG-20240910-055751 ನರೇಂದ್ರ ಪಾಟೀಲ ನೇತೃತ್ವದಲ್ಲಿ ಉಪಾಧ್ಯಕ್ಷ ಮಹೇಶ ನಾಯ್ಕ, ಕಾರ್ಯದರ್ಶಿ ದಿಲೀಪ ಅಂಬೀಗ, ಖಜಾಂಚಿ ರಮೇಶ ಕಮ್ಮಾರ, ಸದಸಯರಾದ ಹನುಮಂತ ಮರಾಠೆ, ಭಾಸ್ಕರ ಶೆಟ್ಟಿ, ನಾಗರಾಜ ಇನ್ನಿತರರು ಕೈ ಜೋಡಿಸಿದ್ದಾರೆ. ಈ ಧಾರ್ಮಿಕ ಉತ್ಸವವು ಕಾಳಮ್ಮನಗರದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿದೆ. ಗಣೇಶೋತ್ಸವದಲ್ಲಿ ಭಕ್ತರು ತನು-ಮನ-ಧನಗಳಿಂದ ಕೈ ಜೋಡಿಸಿ, ಉತ್ಸವವನ್ನು ಯಶಸ್ವಿಗೊಳಿಸುವಂತೆ, ನರೇಂದ್ರ ಪಾಟೀಲ ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
.
.
.