Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 14 August 2024

ಅರಿಷಿಣ ಕುಂಕುಮ: ಅಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಸಮನ್ವಯ/ ನಾಳೆ ರಾಷ್ಟ್ರಮೌಲ್ಯ ಮತ್ತು ಜಾಗೃತಿ - ಕೃತಿ ಬಿಡುಗಡೆ ಸಮಾರಂಭ

ಯಲ್ಲಾಪುರ: ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮತ್ತು ವಿಹಿಂಪ ಮಾತೃಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಅರಿಷಿಣ ಕುಂಕುಮ ಕಾರ್ಯಕ್ರಮವು ಬುಧವಾರ ಸಂಜೆ ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಭವ್ಯವಾಗಿ ನಡೆಯಿತು.
   ಈ ಸಂದರ್ಭದಲ್ಲಿ ಭಗವದ್ಗೀತಾ ಅಭಿಯಾನದ ರಾಜ್ಯ ಸಂಚಾಲಕಿ ಪೂರ್ಣಿಮಾ ಮಂಜುನಾಥ ಜನ್ನು ಅವರು ಮಾತನಾಡಿ, ಈ ಕಾರ್ಯಕ್ರಮವು ಅಧ್ಯಾತ್ಮಿಕತೆ ಮತ್ತು ನಮ್ಮ ಸಂಸ್ಕೃತಿಯ ಸಕಾರಾತ್ಮಕ ಮೌಲ್ಯಗಳನ್ನು ಪಸರಿಸುವ ಮೂಲಕ ಸಮಾಜವನ್ನು ಸುಧಾರಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
   "ಸ್ವಾತಂತ್ರ್ಯ ಪೂರ್ವದಲ್ಲಿಯೂ ಹೋರಾಟಗಾರರು ಸಾಮೂಹಿಕ ಗಣೇಶೊತ್ಸವ ಮೂಲಕ ಒಗ್ಗಟ್ಟನ್ನು ಬಲಪಡಿಸುವ ಜೊತೆಗೆ ಅಧ್ಯಾತ್ಮಿಕತೆಯನ್ನು ಸಂಘಟನೆಗೆ ಬಳಸಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ಪ್ರಸ್ತುತವೆನಿಸುತ್ತಿವೆ," ಎಂದು ಅವರು ತಿಳಿಸಿದರು.
    ವಿದ್ವಾನ ಅನಂತಭಟ್ಟ ಶಿಗೇಪಾಲ ಅವರ ನೇತ್ರತ್ವದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕಮಾರ್ಚನೆ ಮತ್ತು ಲಲಿತಾ ಅಷ್ಟೋತ್ತರ ಪಠಣ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತೃಮಂಡಳಿ ಅಧ್ಯಕ್ಷೆ ನಮಿತಾ ಬೀಡಿಕರ, ಉದ್ಯಮಿ ಮಂಜುನಾಥ ಜನ್ನು, ವಿಹಿಂಪ ತಾಲೂಕಾಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
   ಪಟ್ಟಣದ ವೈದ್ಯೆ ಡಾ. ಕವಿತಾ ಹೆಗಡೆ ಮತ್ತು ಕೊಡುಬಳೆ ಚಕ್ಕುಲಿ ಮಾಡುವ ಮೂಲಕ ಸ್ವ್ವದ್ಯೋಗ ಮಾಡುತ್ತಿರುವ ಗಿರಿಜಾ ಗುರುಪ್ರಸಾದ, ವಿಹಿಂಪ ನೂತನ ಅಧ್ಯಕ್ಷ ಗಜಾನನ ಭಟ್ಟ,  ಪೂರ್ಣಿಮಾ ಮಂಜುನಾಥ ಜನ್ನು ಮತ್ತು ಮಂಜುನಾಥ ಜನ್ನು ದಂಪತಿಗಳನ್ನು  ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
    ಸಭಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದೇವಿಗೆ ಸಮಿತಿಯಿಂದ ವಿಶೇಷ ಪೂಜೆ ಉಡಿ ಸಲ್ಲಿಸಲಾಯಿತು. ಸಂಚಾಲಕ ರಾಮುನಾಯ್ಕ ಅವರು ಪ್ರಾಸ್ತವಿಕ ಮಾತನಾಡಿದರು. ಶಶಿಕಲಾ ಅಂಬಿಗ ಅವರು ಪ್ರಾರ್ಥಿಸಿದರು. ಕಾರ್ಯದರ್ಶಿ ಶ್ಯಾಮಿಲಿ ಪಾಠಣಕರ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಾಕ್ಷಿ ಮುರ್ಕುಂಬಿ ಅವರು ಸ್ವಾಗತಿಸಿದರು, ಶೋಭಾ ಹುಲಮನಿ ಅವರು ವಂದಿಸಿದರು. ವೀಣಾ ಯಲ್ಲಾಪುರಕರ ಮತ್ತು ಆರತಿ ನಾಯ್ಕ ಅವರು ಸನ್ಮಾನಿತರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯೆ ಕಲ್ಪನಾ ನಾಯ್ಕ, ಪತ್ರಕರ್ತೆ ಪ್ರಭಾ ಜಯರಾಜ, ಇನ್ನಿತರರು ಇದ್ದರು.
    ಮಾತೃಮಂಡಳಿ ಸದಸ್ಯೆಯರು ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು ನೂರಕ್ಕೂ ಅಧಿಕ ಮಹಿಳೆಯರಿಗೆ ಅರಿಷಿಣ ಕುಂಕುಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವು ಅಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಸಮನ್ವಯಕ್ಕೆ ಸಾಕ್ಷಿಯಾಗಿತ್ತು.

ನಾಳೆ ರಾಷ್ಟ್ರಮೌಲ್ಯ ಮತ್ತು ಜಾಗೃತಿ - ಕೃತಿ ಬಿಡುಗಡೆ ಸಮಾರಂಭ

ಯಲ್ಲಾಪುರ : ಕನ್ನಡ ಸಾಹಿತ್ಯ ಪರಿಷತ್‌ ಯಲ್ಲಾಪುರ ಘಟಕವು ಆಗಸ್ಟ್ 15 ರಂದು 'ರಾಷ್ಟ್ರಮೌಲ್ಯ ಮತ್ತು ಜಾಗೃತಿ' ಕುರಿತ ಕೃತಿಯ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ. ಸಮಾರಂಭವು ಗಣಪತಿಗಲ್ಲಿಯ ವಿದ್ಯಾಗಮ ಕಲಾಮಂದಿರದಲ್ಲಿ ನಡೆಯಲಿದೆ.

   ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಕೃತಿಯನ್ನು ಬಿಡುಗಡೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅಧ್ಯಕ್ಷತೆ ವಹಿಸುವರು. ಕೃತಿಯ ಪರಿಚಯವನ್ನು ನಾಗೇಶ ವರದಿಗಾರ ಕೇಬಲ್ ನಾಗೇಶ ಮಾಡಲಿದ್ದಾರೆ.
  ಜಿಲ್ಲಾ ಪ್ರಾ ಶಾ ಶಿ ಸಂಘದ ಅಧ್ಯಕ್ಷ ನಾರಾಯಣ ಎಚ್ ನಾಯಕ, ಯಲ್ಲಾಪುರ ಪ್ರಾ ಶಾ ಶಿ ಸಂಘದ ಅಧ್ಯಕ್ಷ ಆರ್ ಆರ್ ಭಟ್ಟ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
   ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಗಣಪತಿಗಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುನಿಲ್ ಎನ್ ಯಲ್ಲಾಪುರಕರ ಗೌರವ ಉಪಸ್ಥಿತಿಯಲ್ಲಿರುವರು.
  ಎಂದು ಕೃತಿಯ ಲೇಖಕ ರಾಮಚಂದ್ರ ಐ. ನಾಯ್ಕ ತಿಳಿಸಿದ್ದಾರೆ.


ಯಲ್ಲಾಪುರದಲ್ಲಿ ಡೆಂಗ್ಯೂ ರೋಗದ ಮುಂಜಾಗ್ರತಾ ಕ್ರಮ: ಲಾರ್ವಾ ಉತ್ಪತ್ತಿ ತಾಣಗಳ ನಾಶ

ಯಲ್ಲಾಪುರ: ಆಗಸ್ಟ್ 14 ರಂದು ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಡೆಂಗ್ಯೂ ರೋಗದ ಮುಂಜಾಗ್ರತಾ ಕ್ರಮವಾಗಿ ಲಾರ್ವಾ ಉತ್ಪತ್ತಿ ತಾಣಗಳ ನಾಶ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು.  ಮನೆ ಮನೆಗೆ ತೆರಳಿ ಲಾರ್ವಾ ಉತ್ಪತ್ತಿ ತಾಣಗಳ ಪತ್ತೆ ಹಚ್ಚಿ ಲಾರ್ವಾ ನಾಶ ಮಾಡಲಾಯಿತು.
    ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಜನರಲ್ಲಿ ಡೆಂಗ್ಯೂ ಕುರಿತು ಅರಿವು ಮೂಡಿಸಿದರು. ಸಾರ್ವಜನಿಕರಿಗೆ ಡೆಂಗ್ಯೂ ರೋಗದ ಲಕ್ಷಣಗಳು, ತುರ್ತು ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ಕಾರ್ಯದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಡೆಂಗ್ಯೂ ನಿಯಂತ್ರಣದಲ್ಲಿ ಇದು ಅತ್ಯಂತ ಸಹಕಾರಿ ಆಗಲಿದೆ.
  ಈ ಕಾರ್ಯಕ್ರಮವು ಆರೋಗ್ಯ ಇಲಾಖೆಯ ಯೋಜನೆಯ ಭಾಗವಾಗಿ ನಡೆಯಿತು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಸಿಬ್ಬಂದಿಗಳಾದ ವಿರುಪಾಕ್ಷ ಶಿರೂರ, ಎನ್. ಎಲ್. ಕಳಸದ, ಪ್ರವೀಣ ಇನಾಮದಾರ, ಎಲ್ಲ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರು ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. 

ಉಮ್ಮಚಗಿಯಲ್ಲಿ ಹರ ಘರ ತಿರಂಗಾ

ಯಲ್ಲಾಪುರ : ತಾಲೂಕಿನ ಉಮ್ಮಚಗಿ ಭಾಗದಲ್ಲಿ ಬಿಜೆಪಿ ವತಿಯಿಂದ ಅ.13 ರಂದು ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ ಶ್ರೀಪಾದ ಹೆಗಡೆ ಸಂಕದಗುಂಡಿ, ಮಹಿಳಾ ಮೋರ್ಚಾ ಪ್ರಮುಖಿ ಸರಸ್ವತಿ ಪಟಗಾರ್, ಬೂತ್ ಅಧ್ಯಕ್ಷ ಮಣಿಕಂಠ ದೇವಾಡಿಗ, ಯುವಮೋರ್ಚಾ ಸದಸ್ಯರಾದ ಶ್ರೀಧರ್ ಪೂಜಾರಿ, ಶುಭಾಷ್ ಪಟಗಾರ್ ಮತ್ತು ಪಕ್ಷದ ವಿವಿಧ ಸ್ತರದ ಪ್ರಮುಖರು ಉಪಸ್ಥಿತರಿದ್ದರು.

ಯೋಗದಲ್ಲಿ ಕುಂದರಗಿ ನವೀನ್ ನಾಯ್ಕ ತಾಲೂಕು ಮಟ್ಟಕ್ಕೆ 

ಯಲ್ಲಾಪುರ : ವಲಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತಾಲೂಕಿನ ಕುಂದರಗಿ ಸ.ಹಿ.ಪ್ರಾ.ಶಾಲೆಯ 7 ನೆಯ ತರಗತಿ ವಿದ್ಯಾರ್ಥಿ ನವೀನ್ ನಾಯ್ಕ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಪಾಲಕ-ಪೋಷಕರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

78ನೇ ಸ್ವಾತಂತ್ರ್ಯೋತ್ಸವ ವಾಕಥಾನ್: ಯಲ್ಲಾಪುರದಲ್ಲಿ ರಾಷ್ಟ್ರಾಭಿಮಾನ ಪ್ರದರ್ಶನ

ಯಲ್ಲಾಪುರ: 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಯಲ್ಲಾಪುರ ತಾಲೂಕ ಆಡಳಿತವು ಆಗಸ್ಟ್ 14ರ ಬೆಳಿಗ್ಗೆ ವಾಕಥಾನ್ ಜಾಥಾ ನಡೆಸಿತು. ಭಾರತ ಸ್ಕೌಟ್ಸ್ ಗೈಡ್ಸ್, ಭಾರತ ಸೇವಾದಳ, ಎನ್‌ಸಿಸಿ, ಪೊಲೀಸ್ ಇಲಾಖೆ, ಗೃಹರಕ್ಷಕ ದಳದ ಸದಸ್ಯರು, ತಾಲೂಕ ಆಡಳಿತದ ಹಿರಿಯ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ರಾಷ್ಟ್ರಧ್ವಜಗಳನ್ನು ಹಿಡಿದು ಪಟ್ಟಣದಲ್ಲಿ ಜಾಥಾ ನಡೆಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಹಸಿರು ನಿಶಾನೆ ತೋರಿಸಿ ಜಾಥಾಗೆ ಚಾಲನೆ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅವರು ಜಾಥಾದಲ್ಲಿ ಪಾಲ್ಗೊಂಡರು. ಅದಕ್ಕೂ ಮುನ್ನ ಮಾತನಾಡಿದ ಶಾಸಕರು, "ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಅವಿಸ್ಮರಣೀಯವಾಗಿದೆ. ಅವರ ತ್ಯಾಗದಿಂದಾಗಿ ನಾವು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ. ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ" ಎಂದು ಶಾಸಕ ಹೆಬ್ಬಾರ್ ಅವರು ಹೇಳಿದರು.


   ಜಾಥಾದಲ್ಲಿ ತಹಶೀಲ್ದಾರ್ ಅಶೋಕ್ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌ಆರ್ ಹೆಗಡೆ, ಗ್ರೇಡ್ 2 ತಹಶೀಲ್ದಾರ್ ಸಿಜಿ ನಾಯ್ಕ, ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಹಾನಪುರ್, ಪಿಎಸ್‌ಐ ಸಿದ್ದಪ್ಪ ಗುಡಿ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಬಂಟ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುನಿಲ್ ಗಾವಡೆ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್ ಧನವಾಡಕರ್, ತಾಲೂಕ ಪಂಚಾಯತ್ ವ್ಯವಸ್ಥಾಪಕ ರಾಮದಾಸ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಫಾತಿಮಾ ಜುಳ್ಕಿ, ಸಾಮಾಜಿಕ ಕಾರ್ಯಕರ್ತ ಡಾ. ರವಿ ಭಟ್ ಬರಗದ್ದೆ, ಸ್ಕೌಟ್ಸ್ ಗೈಡ್ಸ್ ಪ್ರಧಾನ ಕಾರ್ಯದರ್ಶಿ ಸುಧಾಕರ ನಾಯಕ, ಭಾರತ ಸೇವಾದಳದ ಸಂಘಟಕ ಸಂಜೀವ ಹೊಸ್ಕೇರಿ, ದೈಹಿಕ ಶಿಕ್ಷಣ ಪರೀವೀಕ್ಷಕ ಪ್ರಕಾಶ ತಾರಿಕೊಪ್ಪ ಮುಂತಾದವರು ಭಾಗವಹಿಸಿದರು.
   ವಿಶ್ವದರ್ಶನ ಶಿಕ್ಷಣ ಸಂಸ್ಥೆ, ಮುರಾರ್ಜಿ ವಸತಿ ಶಾಲೆ, ರೋಜರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸ್ಕೌಟ್ಸ್ ಗೈಡ್ಸ್, ಸೇವಾ ದಳ, ಎನ್‌ಸಿಸಿ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡರು. ಜಾಥಾ ಆಡಳಿತ ಸೌಧದಿಂದ ಆರಂಭವಾಗಿ, ರಾಷ್ಟ್ರೀಯ ಹೆದ್ದಾರಿ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬೆಲ್ ರಸ್ತೆ, ಸಬಗೇರಿ ವೃತ್ತಗಳನ್ನು ಸುತ್ತುವರೆದು ಆಡಳಿತ ಸೌಧದಲ್ಲಿ ಮುಕ್ತಾಯಗೊಂಡಿತು.


ಗ್ರಾಮಸ್ಥರ ಸ್ವಯಂಪ್ರೇರಿತ ಪ್ರಯತ್ನದಿಂದ ದುರಸ್ತಿಯಾದ ಕುಸಿತಗೊಂಡ ರಸ್ತೆ

ಯಲ್ಲಾಪುರ : ವಜ್ರಳ್ಳಿ ಪಂಚಾಯತಿ ವ್ಯಾಪ್ತಿಯ ಈರಾಪುರದಿಂದ ಬಾಸಲ್ ಸೇರುವ ರಸ್ತೆಯು ಮಳೆಗಾಲದ ಪರಿಣಾಮವಾಗಿ ಸಂಪೂರ್ಣ ಕುಸಿದು ಬಿದ್ದಿತ್ತು. ರಸ್ತೆಯ ಹಾನಿಯ ನಂತರ,   ಸ್ವತಃ ತಮ್ಮ ಪ್ರಯತ್ನದಿಂದ ದುರಸ್ತಿ ಕಾರ್ಯಕ್ಕೆ ಮುಂದಾದರು.
   ಆಗಸ್ಟ್ 13ರ ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ಥಳೀಯರು ಕುಸಿದುಬಿದ್ದ ರಸ್ತೆಯ ದುರಸ್ತಿ ಕಾರ್ಯಕ್ಕೆ ಕೈಹಾಕಿದರು. ಗ್ರಾಮ ಪಂಚಾಯತ್ ಸದಸ್ಯರಾದ ತಿಮ್ಮಣ್ ಗಾಂವ್ಕರ್ ಚಿಟ್ಟೆಪಾಲ್ ಅವರು ಈ ಕಾರ್ಯಕ್ಕೆ ಎರಡು ಪೈಪ್ಗಳನ್ನು ಒದಗಿಸಿದರು‌. ಸ್ಲೀಯರಾದ ತಿಮ್ಮಣ್ಣ ಭಾಗ್ವತ್, ಸೂರಣ್ಣ, ವಿಠೋಬ ನಾಯ್ಕ, ತಿಮ್ಮಣ್ಣ ಗಾಂವ್ಕರ್ ಸೋನ್ಮನಿ, ಸುಬ್ಬಣ್ಣ ಭಾಗ್ವತ್ಮನೆ ಸೇರಿದಂತೆ ಅನೇಕರು ತಮ್ಮ ಶ್ರಮದಾನದಿಂದ ಈ ಕಾರ್ಯದಲ್ಲಿ ಭಾಗಿಯಾಗಿದರು.
  ಇವರ ತಂಡವೊಂದು, ದಿನಪೂರ್ತಿ ಶ್ರಮಿಸಿ, ಸಂಜೆಯ ಹೊತ್ತಿಗೆ ರಸ್ತೆಯನ್ನು ದುರಸ್ತಿ ಮಾಡಿ, ಸಂಚಾರಕ್ಕೆ ಬಳಸುವಂತೆ ಮಾಡಿದರು. ಈ ಕಾರ್ಯಕ್ಕೆ ಗ್ರಾಮಸ್ಥರು ಹೆಮ್ಮೆಯಿಂದ ಇತರರು ಸಹ ಖುಷಿಪಟ್ಟರು. 
  ಗ್ರಾಮಸ್ತರ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತ ವೆಂಕಟರಮಣ ಬೆಳ್ಳಿ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. “ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಒಟ್ಟಾಗಿ ಸಂಘಟಿತರಾಗಿ ಈ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ರೀತಿಯ ಕಾರ್ಯಗಳು ಮುಂದುವರಿಯಬೇಕು,” ಎಂದು ಬೆಳ್ಳಿ ಹೇಳಿದ್ದಾರೆ. 
   ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ಕೆ ಅಭಿನಂದನೆಗಳು ವ್ಯಕ್ತವಾಗಿದ್ದು, ಗ್ರಾಮಸ್ಥರ ಸೇವಾ ಮನೋಭಾವಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಯಲ್ಲಾಪುರದಲ್ಲಿ ಬಿಜೆಪಿ ಯುವ ಮೋರ್ಚಾ ಸಹಯೋಗದೊಂದಿಗೆ ಇಂದು ಸಂಜೆ ಪಂಜಿನ ಮೆರವಣಿಗೆ

ಯಲ್ಲಾಪುರ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯಲ್ಲಾಪುರ ಮಂಡಳ ಯುವ ಮೋರ್ಚಾ ಸಹಯೋಗದೊಂದಿಗೆ “ವಿಭಜನಾ-ವಿಭಿಷಣ ಸ್ಮೃತಿ ದಿವಸ” ಆಚರಣೆ ಅಂಗವಾಗಿ ಪಂಜಿನ ಮೆರವಣಿಗೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಆಗಸ್ಟ್ 14 ರಂದು, ಸಂಜೆ 6.00 ಗಂಟೆಗೆ ಯಲ್ಲಾಪುರದ ಪೊಲೀಸ್ ವಸತಿ ಗ್ರಹದ ಸಮೀಪದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಳ್ಳಲಿದೆ. 
   ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವೆಂಕಟ್ರಮಣ ಬೆಳ್ಳಿ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ. “ವಿಭಜನಾ-ವಿಭಿಷಣ ಸ್ಮೃತಿ ದಿವಸ” ಅಂಗವಾಗಿ, ದೇಶವಿಭಜನೆಯ ಸ್ಮರಣೆ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೊಂಡವರಿಗೆ ಗೌರವ ಸಲ್ಲಿಸುವ ಉದ್ದೇಶವನ್ನು ಹೊಂದಿ, ಈ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯು ಯಲ್ಲಾಪುರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು, ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಮೂಲಕ, ಯಲ್ಲಾಪುರದ ಜನತೆಗೆ ಸ್ವಾತಂತ್ರ್ಯ ದಿನದ ಮಹತ್ವವನ್ನು ನೆನಪಿಸುವ ಪ್ರಯತ್ನ ಮಾಡಲಾಗುತ್ತದೆ.
  ಕಾರ್ಯಕ್ರಮದ ಆಯೋಜಕರು ಸ್ಥಳೀಯ ಯುವಕರು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ, ಯುವ ಮೋರ್ಚಾ ಸದಸ್ಯರು ಸಹಕರಿಸುತ್ತಿದ್ದು, ಈ ಮೆರವಣಿಗೆಗೆ ಸಂಭ್ರಮದ ವಾತಾವರಣ ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದಾರೆ. 
   ಸರ್ವರಿಗೂ ಈ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಬಿಜೆಪಿ ಮಂಡಲ‌ ಅಧ್ಯಕ್ಷ ಪ್ರಸಾದ ಹೆಗಡೆ ತಿಳಿಸಿದ್ದಾರೆ. ಸ್ವಾತಂತ್ರ್ಯ ಸಮರದಲ್ಲಿ ಬಲಿದಾನಗೊಂಡ ಎಲ್ಲಾ ದೇಶಭಕ್ತರ ಸ್ಮರಣೆಯನ್ನು ಗೌರವದಿಂದ ಸ್ಮರಿಸುವ ಈ ದಿನವು ಕಾರ್ಯಕ್ರಮವು ಕೇವಲ ರಾಜಕೀಯ ನಿಟ್ಟಿನಲ್ಲೇ ಅಲ್ಲ, ದೇಶಪ್ರೇಮದ ಮನೋಭಾವನೆ ಹೆಚ್ಚಿಸಲು ಸಹಕಾರಿ ಎಂಬುದು ಆಯೋಜಕರ ಮಾತು.