Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Wednesday, 24 July 2024

ಮಳೆಯ ಭಯಾನಕ ವಾತಾವರಣದ ನಂತರ ಗಾಳಿಯ ಅವಾಂತರಗಳ ಸೃಷ್ಟಿ, ಬಸ್ ನಿಲ್ದಾಣದಲ್ಲಿ ಹಾರಿ ಹೋದ ಶೀಟ್ ಗಳು

ಯಲ್ಲಾಪುರ ; ಯಲ್ಲಾಪುರ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ನಂತರ ಗಾಳಿ ಕೆಟ್ಟ ಪ್ರಭಾವ ಬೀರಿದ್ದು, ಮಳೆಯಲ್ಲಿ ಮುರಿದು ಬೀಳುವ ಮರಗಳು, ಹಾರಿಹೋಗದ ತಗಡುಗಳು ಇದೀಗ ಗಂಭೀರ ಸ್ಥಿತಿ ನಿರ್ಮಾಣವಾಗಿದೆ.
  ಜಿಲ್ಲೆಗೆ ಹೋಲಿಸದರೇ, ಯಲ್ಲಾಪುರ ತಾಲೂಕಿನಲ್ಲಿ ಮಳೆ ಅಷ್ಟೇನೂ ಅವಾಂತರ ಸೃಷ್ಟಿಸಿದೆ ಇದ್ದರು, ಕಳೆದ ಎರಡು ದಿನಗಳಿಂದ ಬೀಸುವ ಭಾರಿ ಗಾಳಿಯಿಂದಾಗಿ ಬಹಳಷ್ಟು ಅವಾಂತರಗಳು ಸೃಷ್ಟಿಯಾಗಿದೆ. ಓರ್ವ ವ್ಯಕ್ತಿಯ ಜೀವ ಕೂಡ ಹೋಗಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಅಳವಡಿಸಲಾದ ತಗಡುಗಳು ಗಾಳಿಯಿಂದಾಗಿ ಹಾರಿ ಹೋಗಿದ್ದು ಸದೃಢವಾದ ಬೇಸ್ ಇರುವ ತಗಡುಗಳ ಹಾರಿ ಹೋಗಿದ್ದ ಪರಿಣಾಮ ಇನ್ನಿತರ ಜಾಗಗಳಲ್ಲಿ ಎಷ್ಟೊಂದು ಪರಿಣಾಮ ಬೀರಿರಬಹುದು ಎಂದು ಊಹಿಸಬಹುದಾಗಿದೆ. ಸುದೈವವಶಾತಃ ಈ ತಗಡುಗಳು ಪ್ರಯಾಣಿಕರ ಮೇಲೆ ಬೀಳದೆ ಇರುವ ಕಾರಣಕ್ಕೆ ಯಾವುದೇ ಅವಘಡ ಸಂಭವಿಸಿಲ್ಲ
   ಪಟ್ಟಣ ವ್ಯಾಪ್ತಿಯಲ್ಲಿ ಯಾರೂ ಕೂಡ ಚತ್ರಿ ಹಿಡಿದು ನಡೆದಾಡುವ ಪರಿಸ್ಥಿತಿಯಲ್ಲಿಲ್ಲ. ಯಾಕೆಂದರೆ ಚತ್ರಿ ಮಳೆಯ ನೀರು ತಡೆಯುವ ಬದಲು ಅದನ್ನು ದುರಸ್ತಿ ಮಾಡುವ ಕಡೆಗೆ ನೆನೆಸಿಕೊಂಡು ಓಡಾಡುವ ಮಾಲಿಕರಿಗೆ ಸಮಸ್ಯೆಯಾಗಿದೆ.  
 ಇದೀಗ ಸಾಮಾನ್ಯವಾಗಿ ಮಳೆ ಸುರಿಯುತ್ತಿದ್ದರು ಪ್ರಕೃತಿ ಗಾಳಿಯ ಮೂಲಕ ತಾಲೂಕಿನಲ್ಲಿ ವಿಪರ್ಯಾಸ ಪರಿಣಾಮಗಳನ್ನು ತೋರಿಸುತ್ತಿದೆ. 

ರಾಜ ಕಾಲುವೆಯ ದುರಸ್ತಿ ಹಾಗೂ ಅಗತ್ಯತೆ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಪಪಂ ಸದಸ್ಯ ಕೆಸರಲಿ

ಯಲ್ಲಾಪುರ : ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ಮಳೆಯ ನೀರು ಸರಾಗಿವಾಗಿ ಸಾಗದೆ ರಾಜಕಲುವೆಯೂ ಸರಿಯಾಗಿ ಇಲ್ಲದೆ ಅರೆಬರೆಗೊಂಡ ಕಾಮಗಾರಿ ಮೂಲಕ ಗೋಪಾಲಕೃಷ್ಣ ಗಲ್ಲಿಯ ರೈತರ ಭೂಮಿಗೆ ನೀರು ನುಗ್ಗುತ್ತಿದೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಲಿಶಾ ಗಲ್ಲಿ ಪ.ಪಂ ಸದಸ್ಯ ಕೇಸರ್ ಸಯ್ಯದಲಿ ಬುಧವಾರ ಪ.ಪಂ ಮುಖ್ಯಾಧಿಗಳನ್ನು ಸ್ಥಳಕ್ಕೆ ಕರೆದು ಸಂಫೂರ್ಣ ವಿವರಣೆ ನೀಡಿದರು.
   ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಈಶ್ವರದಲ್ಲಿ ಗೋಪಾಲಕೃಷ್ಣ ಗಲ್ಲಿ, ಅಂಬೇಡ್ಕರ್ ನಗರ, ಇಸ್ಲಾಂ ಗಲ್ಲಿ, ಅಕ್ಬರ್ ಗಲ್ಲಿ ಸೇರಿದಂತೆ ಬಹುತೇಕ ಶೇ . 65 ರಷ್ಟು ನೀರನ್ನು ಇದೇ ಕಾಲುವೆಯ ಮೂಲಕ ತಣ್ಣೀರು ಹಳ್ಳಕ್ಕೆ ಹರಿದು ಹೋಗುತ್ತದೆ. ಈ ಮಧ್ಯೆ ಈ ಭಾಗದಲ್ಲಿ ಮನೆ ಮತ್ತು ಇನ್ನಿತರ ಕೆಲಸಗಳು ನಡೆದಿರುವುದರಿಂದ ನೀರಿನ ಹರಿವಿನ ಒತ್ತಡ ಹೆಚ್ಚಾಗಿದ್ದು, ಒತ್ತಡ ಸಹಿಸಲಾರದ ಇಷ್ಟೊಂದು ನೀರು, ಕೃಷಿಭೂಮಿಗೆ ನುಗ್ಗುತ್ತಿದೆ ಎಂದು ಅಧಿಕಾರಿಗಳಿಗೆ  ಕೆಸರ್ ಸಯ್ಯದಲಿ ತಿಳಿಸಿದರು.
   ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುನೀಲ ಗಾವಡೆ ಸೇರಿದಂತೆ, ಆರೋಗ್ಯ ನಿರೀಕ್ಷಕ ಗುರು ಗಡಗಿ ಇನ್ನಿತರ ಅಧಿಕಾರಿಗಳನ್ನು ರಾಜಕಾಲುವೆ ಹರಿದು ಹೋಗುವ ಪ್ರದೇಶಕ್ಕೆ ತೆರಳಿ ಅರೆಬರೆ ಕಾಮಗಾರಿಯಾದ ಗೋಪಾಲಕೃಷ್ಣ ಗಲ್ಲಿಯಲ್ಲಿ ಯಲ್ಲಾಪುರದ ಎಲ್ಲ ಭಾಗದ ನೀರು ಹರಿದು ಹೋಗುವ ರಾಜ ಕಾಲವೆಯಲ್ಲಿ ಆಗಿರುವ ಅನಾಹುತವನ್ನು ಪ್ರತ್ಯಕ್ಷವಾಗಿ ಗಮನಿಸಿದರು.
    ಕಳೆದ ಮೂರು ವರ್ಷದಿಂದ ರಾಜಕಾಲುವೆಯನ್ನು ಸದೃಢವಾಗಿ ಕಟ್ಟುವ ಕಾರ್ಯ ನಡೆದಿದ್ದರೂ ಕೂಡ, ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಹೀಗಾಗಿ ಈ ಬಾರಿ ಕೂಡ ಸ್ಥಳೀಯರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಈ ಬಗ್ಗೆ ಪಟ್ಟಣ ಪಂಚಾಯತಿ ಗಮನ ಹರಿಸುವಂತೆ ಕೆಸರಲಿ ವಿನಂತಿಸಿದರು.
  ಈ ಬಗ್ಗೆ ಮುಂದಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರ ಗಮನಕ್ಕೆ ತಂದು ಶಾಶ್ವತ ಯೋಜನೆಯನ್ನು ನಿರ್ಮಿಸಲಾಗುವುದು, ಈ ಕುರಿತು ಶಾಸಕರೊಂದಿಗೂ ಕೂಡ ಮಾತನಾಡಲಾಗುವುದು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುನೀಲ ಗಾವಡೆ ಭರವಸೆ ನೀಡಿದರು.
____
ಮಹಿಳಾ ಮಂಡಳ ಸಮೀಪದ ಕೊಳವೆ ಭಾವಿ ಹಾಳಾದ ಕೆಲವೇ ನಿಮಿಷದಲ್ಲಿ ವಲೀಶಾಗಲ್ಲಿ ವಾರ್ಡ್ ಸದಸ್ಯ ಕೇಸರಲಿ ಸಯ್ಯದರಿಂದ ದುರಸ್ತಿ. 
ಯಲ್ಲಾಪುರ ಪಟ್ಟಣ ಪಂಚಾಯಿತಿ ವಾರ್ಡ್ ನಂಬರ್ ಎರಡು ಬಲಿಷ್ಠ ಗಲ್ಲಿ ಸದಸ್ಯ ಕೇಸರಲ್ಲಿ ಸೈಯದ್ ತಮ್ಮ ವಾರ್ಡಿನ ಮಹಿಳಾ ಮಂಡಲ ಸಮೀಪದ ಕೊಡಬೇಕಾದ ಕೆಲವೇ ನಿಮಿಷದಲ್ಲಿ ಜನರ ಆಗ್ರಹಕ್ಕೆ ಸ್ಪಂದಿಸಿ ತಕ್ಷಣ ರಿಪೇರಿ ಮಾಡಿ ಜನರ ಸೇವೆಗೆ ನೀಡಿದ್ದಾರೆ. ಅಲ್ಲಿಯ ಜನ ಕೆಸರಲ್ಲಿ ಅವರ ಜನಪರ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಒಂದು ರಿಲೆ ರಿಪೇರಿ‌ ಮಾಡಲಾಗದೇ ಯಲ್ಲಾಪುರ ಜನರಿಗೆ ತೊಂದರೆ ಕೊಡುತ್ತಿರುವ ಹೆಸ್ಕಾಂ ಅಧಿಕಾರಿಗಳು/ ವರದಿ : ಜಗದೀಶ ನಾಯಕ

ಯಲ್ಲಾಪುರ : ಯಲ್ಲಾಪುರ ಪವರ್ ಸ್ಟೇಷನ್ ನಲ್ಲಿರುವ ಒಂದು ರಿಲೆ(ಎಲೆಕ್ಟ್ರಿಕಲ್ ಸ್ವಿಚ್ಛ್) ಯನ್ನು ದುರಸ್ತಿ ಮಾಡಲಾಗುತ್ತದೆ ಕಳೆದ ಹಲವು ದಿನಗಳಿಂದ ಜನರಿಗೆ ತೊಂದರೆ ನೀಡುತ್ತಿರುವ ಯಲ್ಲಾಪುರದ ಹೆಸ್ಕಾಂ ವಿಭಾಗದ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  ಕಿರವತ್ತಿಯಿಂದ ಯಲ್ಲಾಪುರ ಪವರ್ ಸ್ಟೇಷನ್ ಗೆ 33 ಕೆ ವಿ ವಿದ್ಯುತ್ ಪೂರೈಕೆಯಾಗುತ್ತಿದೆ, ಯಲ್ಲಾಪುರ ಪವರ್ ಸ್ಟೇಷನ್ ನಿಂದ 11 ಕೆ ವಿ ಯ ವಿದ್ಯುತ್ ತಾಲೂಕಿನ ಪಟ್ಟಣ, ಗ್ರಾಮೀಣ ಭಾಗಕ್ಕೂ ಪೂರೈಕೆಯಾಗುತ್ತಿದೆ. ಅಲ್ಲಿಯ ಟ್ರಾನ್ಸ್ಫಾರ್ಮರ್ ಗಳು 11 ಕೆ ವಿ ಯನ್ನು 230 ವೋಲ್ಟ್ ಆಗಿ ಪರಿವರ್ತಿಸಿ ಮನೆಗೆ ಅಥವಾ ಇನ್ನಿತರ ಉದ್ಯಮಗಳಿಗೆ 2 ಫೇಸ್ ಅಥವಾ 3 ಫೇಸ್ ಆಗಿ ಪೂರೈಸುತ್ತದೆ. 
   ಯಲ್ಲಾಪುರದಲ್ಲಿ ಕಾರ್ಯನಿರ್ವಹಿಸುವ ಕೆಳಹಂತದ ಸಿಬ್ಬಂದಿಗಳು ತಮ್ಮ ಜೀವವನ್ನು ಅಡವಿಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ, ಎಲೇಕ್ಟ್ರಿಕಲ್ ಬಿಇ ಡಿಪ್ಲೋಮಾ ಪದವಿ ಹೊಂದಿದ ಅಧಿಕಾರಿಗಳು ಮಾತ್ರ ಟೇಬಲ್ ಕುರ್ಚಿ ಬಿಟ್ಟು ಅಲುಗಾಡುತ್ತಿಲ್ಲ. ಯಲ್ಲಾಪುರ ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳಿಂದ ಪವರ್ ಸ್ಟೇಷನ್ ನಲ್ಲಿ ಒಂದು ರಿಲೇ(ಆಟೋಮೇಟಿಕ್ ಎಳೆಕ್ಟ್ರಿಕಲ್ ಸ್ವಿಚ್) ಸಮಸ್ಯೆಯಿಂದ ತೀವ್ರ ವಿದ್ಯುತ್ ವ್ಯತ್ಯಯವಾಗುತ್ತಿದೆ.  ಇದಕ್ಕೆ ಕಾರಣ ಗಾಳಿ ಮಳೆ ಎಂದು ಸಬೂಬಿ ಹೇಳಿ ಜನರನ್ನು ಮರಳು ಮಾಡಲಾಗುತ್ತಿದೆ.
    ಇದುವರೆಗೂ ಮಳೆ ಗಾಳಿಯಿಂದ ಬಿದ್ದ ಮರ ಟೊಂಗೆಗಳಿಂದ ವಿದ್ಯುತ್ ವ್ಯತ್ಯಯವಾಗುತ್ತಿತ್ತು ಎಂದು ಎಣಿಸಲಾಗಿತ್ತು, ಹಾಗೆ ವಿದ್ಯುತ್ ವ್ಯತ್ಯಯವಾದಾಗ ಕೆಳಹಂತದ ಹೆಸ್ಕಾಂ ಕೆಲಸಗಾರರು ಅತಿ ಶೀಘ್ರವಾಗಿ ದುರಸ್ತಿ ಮಾಡಿ ವಿದ್ಯುತ್ ಪೂರೈಸುವ ಕೆಲಸವನ್ನು ಮಾಡುತ್ತಿದ್ದರು. ಆದರೇ, ಇದೀಗ ಯಲ್ಲಾಪುರ ಪವರ್ ಸ್ಟೇಷನ್ನಲ್ಲಿ ಸಮಸ್ಯೆಯಾಗಿದ್ದು, ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ ಹಾಗೂ ಇದುವರೆಗೂ ತೆಗೆದುಕೊಳ್ಳದ ಮುಂಜಾಗ್ರತೆಗೆ ಕಾರಣವಾಗಿದೆ ಎನ್ನಲಾಗಿದೆ.
   ಈ ಬಾರಿ ಯಲ್ಲಾಪುರದಲ್ಲಿ ಅತ್ಯಂತ ಹೆಚ್ಚು ಮಳೆಯಾಗಿಲ್ಲ ವಾಡಿಕೆಯಷ್ಟೇ ಮಳೆ ಹೆಚ್ಚು ಕಡಿಮೆ ಸುರಿದಿದೆ. ಗಾಳಿಯ ಪ್ರಮಾಣವು ಕಡಿಮೆಯಾಗಿದ್ದು, ಎರಡು ಮೂರು ದಿನಗಳಿಂದ ಗಾಳಿ ಬೀಸುತ್ತಿದೆ. ಹೀಗಾಗಿ ಯಾವುದೇ ಅವಘಡಗಳು ವಿದ್ಯುತ್ ತಂತೀಯ ಮೇಲೆ ಕಂಬದ ಮೇಲೆ ಸಂಭವಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಅದರಲ್ಲಿಯೂ ಕಿರುವತ್ತಿಯಿಂದ ಯಲ್ಲಾಪುರ ಸ್ಟೇಷನ್ ಗೆ ಪೂರೈಕೆ ಆಗುವ 33 ಕೆವಿ ವಿದ್ಯುತ್ ಪೂರೈಕೆ ಮಾರ್ಗ ಗಳ ಅಕ್ಕ ಪಕ್ಕದಲ್ಲಿ ಅರಣ್ಯ ಇಲಾಖೆ ಸೇರಿದಂತೆ ಖಾಸಗಿ ಯವರಿಗೂ ಸಹಿತ ಯಾವುದೇ ಮರ ಅಥವಾ ಇತರೆ ಗಿಡಗಳನ್ನು ಬೆಳೆಸುವ ಅಧಿಕಾರ ಇಲ್ಲ ಮುಂಜಾಗ್ರತೆ ವಹಿಸಬೇಕಾದ ಅಧಿಕಾರಿಗಳು ನಿರ್ಲಕ್ಷ ವಹಿಸಿ ತಮ್ಮದೇ ಸಿಬ್ಬಂದಿಗಳಿಗೆ ಮಳೆಗಾಲದಲ್ಲಿ ಹೆಚ್ಚುವರಿ ಕೆಲಸ ನೀಡುತ್ತಿದ್ದಾರೆ ಎನ್ನುವ ಆರೋಪ ಇದೆ.
  ಇದೀಗ ಎಲ್ಲಾಪುರ ಸ್ಟೇಷನ್ನಲ್ಲಿ ಸ್ವಿಚ್ ತೊಂದರೆಯಾಗಿದ್ದು ಅದನ್ನು ದುರಸ್ತಿ ಮಾಡಬೇಕಾಗಿದ್ದ ಬಿಇ ಮತ್ತು ಡಿಪ್ಲೋಮಾ ಹೋಲ್ಡರ್ ಎಲೆಕ್ಟ್ರಿಕಲ್ ಇಂಜಿನಿಗಳು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಮೇ ತಿಂಗಳಲ್ಲಿ ಹೆಸ್ಕಾಂ ಇಲಾಖೆಗೆ ಸೂಚನೆ ನೀಡಿದ್ದ ಅರಣ್ಯ ಇಲಾಖೆ

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿ.ಪಂ ರಸ್ತೆಗಳು ಸೇರಿದಂತೆ ಹೆಸ್ಕಾಂ ವಿದ್ಯುತ್ ಲೈನ್ ಗಳಿಗೆ ಸಂಬಂಧಿಸಿದಂತೆ ಯಲ್ಲಾಪುರದ ಅರಣ್ಯ ಇಲಾಖೆ ಉಪ ವಿಭಾಗದವರು ಈಗಾಗಲೇ ಸಮಸ್ಯೆ ಸಂಭವಿಸಬಹುದಾದ ಮರಗಳ ಕಟಾವಿಗೆ ಮಾಹಿತಿ ಕೇಳಿ ನಿರ್ದೇಶನ ನೀಡಿದ್ದರು. ಅದು ಕೂಡ ಮೇ ತಿಂಗಳಲ್ಲಿ, ವಿದ್ಯುತ್ ತಂತಿ ಮೇಲೆ ಬೀಳಬಹುದಾದ ಮರಗಳು ಟೊಂಗೆಗಳು, ರಾಷ್ಟ್ರೀಯ ಹೆದ್ದಾರಿಗೆ, ರಾಜ್ಯ ಹೆದ್ದಾರಿಗೆ, ಜಿಲ್ಲಾ ಪಂಚಾಯತ್ ರಸ್ತೆಗಳಿಗೆ ಗ್ರಾಮೀಣ ರಸ್ತೆಗಳಿಗೆ ಅಡಚಣೆಯಾಗುವ ಮರಗಳ ಕುರಿತು ಮಾಹಿತಿ ಕೇಳಿ ಅವುಗಳ ಕಟಾವು ಬಗ್ಗೆ ಕೂಡ ಅರಣ್ಯ ಇಲಾಖೆ ಸಂಬಂಧಿಸಿದ ಪ್ರತಿ ಇಲಾಖೆಗೂ ಮುಂಜಾಗ್ರತೆ ವಹಿಸುವಂತೆ ಈ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕಟಿಂಗ್ ಮಾಡುವಂತೆ ಸೂಚಿಸಿದ್ದರೂ ಕೂಡ ಯಾವುದೇ ಇಲಾಖೆಗಳು ಸ್ಪಂದಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಸಾರ್ವಜನಿಕರಿಗೆ ತಲೆ ನೋವಾಗಿದೆ.
  ಅಧಿಕಾರಿಗಳ ನಿರ್ಲಕ್ಷಕ್ಕೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿ ಒಬ್ಬನ ಮೇಲೆ ಮರ ಬಿದ್ದು ಗಾಯಗೊಂಡಿದ್ದರೆ ಬುಧವಾರ ಮಂಚಿಕೇರಿ ಬಳಿ ಬರುವ ವ್ಯಕ್ತಿ ಸಾವನಪ್ಪಿದ್ದಾನೆ.
   ಅನಿಯಮಿತವಾದ ವಿದ್ಯುತ್ ಪೂರೈಕೆ, ರಸ್ತೆ ಮೇಲೆ ಮುರಿದು ಬೀಳುವ ಮರಗಳು ಕುರಿತು ಯಲ್ಲಾಪುರದಲ್ಲಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷದ ಕುರಿತು ಶಾಸಕ ಶಿವರಾಮ್ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಜಿಲ್ಲೆಯ ಹಿರಿಯ ಅಧಿಕಾರಿಗಳು ಕಾಳಜಿ ವಹಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ಮಂಚಿಕೇರಿಯಲ್ಲಿ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಯಲ್ಲಾಪುರ ; ತಾಲೂಕಿನ ಮಂಚಿಕೇರಿಯ ಹಾಸಣಗಿ ಪಂಚಾಯತಿ ವ್ಯಾಪ್ತಿಯ ಮಾಳಕೊಪ್ಪ ಶಾಲೆಯ ಎದುರಿಗೆ ಬುಧವಾರ ಬೆಳಿಗ್ಗೆ ರಭಸವಾಗಿ ಬಿಸಿದ ಗಾಳಿಗೆ ಮರವೊಂದು ಬೈಕ್ ಸವಾರನ ಮೇಲೆ ಬಿದ್ದು ಬೈಕ್  ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
   ಮೃತ ವ್ಯಕ್ತಿಯನ್ನು ವಿನಯ ಮಂಜುನಾಥ ಗಾಡೀಗ (27) ಎಂದು ಗುರುತಿಸಲಾಗಿದ್ದು ಕಬ್ಬಿನಗದ್ದೆ ನಿವಾಸಿಯಾಗಿದ್ದಾನೆ‌. ತಾಲೂಕಿನಾಧ್ಯಂತ ಸುರಿಯುತ್ತಿರುವ ಭಾರಿ ಮಳೆ ಕಡಿಮೆ ಆಗಿದ್ದರೂ ಕೂಡ ಆ ಗಾಳಿಯ ಪ್ರಮಾಣ ಇನ್ನೂ ಹೆಚ್ಚಾಗಿದೆ. ವಾರದಿಂದ ಸುರಿದ‌ ಭಾರಿ  ಮಳೆಗೆ ಮಣ್ಣು ದುರ್ಭಲವಾಗಿ ಮರಗಳು ಉರುಳಿ ಬೀಳುತ್ತಿವೆ. ಮಂಗಳವಾರ ಸಂಜೆ ಅರ್ಲಿಕೊಪ್ಪದಲ್ಲಿ ಬೈಕ್ ಸವಾರನ‌ ಮೇಲೆ ಮರದ ಟೊಂಗೆ ಬಿದ್ದು ಆತ ಗಾಯಗೊಂಡಿದ್ದ, ಬುಧವಾರ ಮಾಳಕೊಪ್ಪ ಶಾಲೆಯ ಹತ್ತಿರ ಮರಬಿದ್ದು ಸವಾರ ಸ್ಥಳದಲ್ಲಿಯೇ ಮ್ರತನಾಗಿದ್ದಾನೆ.
  ಘಟನಾ ಸ್ಥಳಕ್ಕೆ ತಹಶೀಲ್ದಾರ ಅಶೋಕ ಭಟ್ಟ, ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ, ಪಿಎಸ್ಐ ಸಿದ್ದಪ್ಪ ಗುಡಿ, ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೈಕ್ ಮೇಲೆ ಮರ ಬಿದ್ದು ಮೃತಪಟ್ಟ ಕಬ್ಬಿನಗದ್ದೆ ನಿವಾಸಿ ವಿನಯ ಮಂಜುನಾಥ ಗಾಡೀಗ ಮೃತ ದೇಹ ಇಟ್ಟ ತಾಲೂಕ ಆಸ್ಪತ್ರೆಗೆ ಶಿರಸಿ ಉಪವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಭೇಟಿ ನೀಡಿ ಮೃತನ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರವನ್ನು ಶೀಘ್ರವಾಗಿ ನೀಡುವ ಭರವಸೆಯನ್ನು ನೀಡಿದರು.

ಬನವಾಸಿಯಲ್ಲಿ ಬೆಳೆಹಾನಿ: ಬಿಜೆಪಿ ನಾಯಕರ ಸಮೀಕ್ಷೆ

ಯಲ್ಲಾಪುರ : ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸೂಚನೆಯಂತೆ  ಬನವಾಸಿಯ ಭಾಶಿ ಗ್ರಾಮಪಂಚಾಯತ್ ವ್ಯಾಪ್ತಿಯ ಮೊಗವಳ್ಳಿ ಗ್ರಾಮದಲ್ಲಿ ವರದಾನದಿ ನೀರು  ರೈತರ ಹೊಲಗಳಿಗೆ ನುಗ್ಗಿ ನೆರೆ ಉಂಟಾದ ಬನವಾಸಿ ಪ್ರದೇಶಗಳಿಗೆ ಬಿಜಿಪಿಯ ಪ್ರಮುಖರು ಮತ್ತು ಕಾರ್ಯಕರ್ತರ ತಂಡ ಭೇಟಿ ನೀಡಿ ಸ್ಥಳೀಯರೊಂದಿಗೆ ನೆರೆ ಕುರಿತು ಮಾಹಿತಿ ಪಡೆದು,‌ಅಹವಾಲು ಸ್ವೀಕರಿಸಿ, ಚರ್ಚಿಸಿದರು.
 ಕಳೆದವಾರ ಸುರಿದ ಭೀಕರ ಮಳೆಯಿಂದಾಗಿ ವರದಾ ನದಿ ತುಂಬಿ ಹರಿಯುತ್ತಿದ್ದು,ಬನವಾಸಿ ಭಾಗದ ಮೊಗವಳ್ಳಿ ಗ್ರಾಮ ಹಾಗೂ ಸುತ್ತಲಿನ ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತವಾಗಿತ್ತು ಮತ್ತು  ಹೊಲಗಳಲ್ಲೆಲ್ಲ ಇನ್ನೂ ನೀರು ತುಂಬಿಕೊಡಿದ್ದು, ಅಪಾರ ಪ್ರಮಾಣದ ಭತ್ತ,ಮತ್ತು ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿದೆ.
 ಅಲ್ಲಿಯ ಸಮಸ್ಯೆ, ಹಾನಿ ಮತ್ತು ಪರಿಹಾರೋಪಾಯಗಳ ಕುರಿತು ಸ್ಥಳೀಯರೊಂದಿಗೆ  ಚರ್ಚೆನಡೆಸಿದರು. ನಮ್ಮ ತಂಡವು ಸಂಸದರ ಸೂಚನೆಯ ಮೇರೆಗೆ ನೆರೆಯಿಂದಾದ ಹಾನಿ ಮತ್ತು ಸಮಸ್ಯೆ ಅರಿಯಲು ಬಂದಿದ್ದೇವೆ; ಸಂಸದರಿಗೆ ಈ ಬಗ್ಗೆ ಮಾಹಿತಿ ನೀಡಿ, ಸಂಸತ್ ಅಧಿವೇಶನ ಮುಗಿದ ಬಳಿಕ ಸಂಸದರು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ಪ್ರತೀವರ್ಷ ನೆರೆಯಿಂದಾಗುವ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಮಟ್ಟದಲ್ಲಿ ಪ್ರಯತ್ನ ಕೈಗೊಳ್ಳುವಂತೆ ಮಾಡಲಾಗುವುದು ಎಂದು ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ತಿಳಿಸಿದರು.
ಹಾಗೂ ಸರ್ಕಾರ ಕೂಡಲೇ ಇಲ್ಲಿಯ ಹಾನಿ ಪರೀಶೀಲನೆ ನಡೆಸಿ ಸೂಕ್ತ ಪರಿಹಾರೋಪಾಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಭೇಟಿ ನೀಡಿದ ತಂಡದಲ್ಲಿ
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ,ಪಕ್ಷದ ಪ್ರಮುಖರಾದ ಎಲ್.ಟಿ. ಪಾಟೀಲ್, ಉಮೇಶ್ ಭಾಗ್ವತ, ಉಷಾ ಹೆಗಡೆ, ಮಂಜುನಾಥ್ ಪಾಟೀಲ್, ಪ್ರೇಮ್ ಕುಮಾರ್, ಅರವಿಂದ ಶೆಟ್ಟಿ, ಮಂಜುನಾಥ ನಾಯ್ಕ, ಗಣೇಶ ಸಣ್ಣಲಿಂಗಣ್ಣನವರ್, ವಿಶ್ವನಾಥ್ ಹಾದಿಮನಿ, ರಾಘವೇಂದ್ರ ಭಟ್ ಹಾಸಣಗಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಶಕ್ತಿಕೇಂದ್ರ ಮತ್ತು ಬೂತ್ ಪ್ರಮುಖರು ಇದ್ದರು.