Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Saturday, 6 July 2024

ಯಲ್ಲಾಪುರದ ಶಿರಸಿ ರಸ್ತೆಯಲ್ಲಿ ಬುಡ ಸಮೇತ ಕಿತ್ತು ಬಿದ್ದ ಜಂಬೆ ಮರ

ಯಲ್ಲಾಪುರ ; ಪಟ್ಟಣ ವ್ಯಾಪ್ತಿಯ ಶಿರಸಿ ರಸ್ತೆಯ ಶಂಕರ ಭಟ್ ತಾರೀಮಕ್ಕಿ ಅವರ ಮನೆಯ ಎದುರು ಬೃಹತ್ ಗಾತ್ರದ ಜಂಬೆ ಮರ ಒಂದು ವಿದ್ಯುತ್ ತಂತಿ ಹಾಗೂ ರಸ್ತೆಯ ಮೇಲೆ ಉರುಳಿ ಬಿದ್ದಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ತಂತಿಯ ಮೇಲೆ ಜೋತು ಬಿದ್ದಿದೆ.
    ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಣ್ಣು ಕೆಸರಾಗಿ ಮಾರ್ಪಟ್ಟಿದೆ ಹೀಗಾಗಿ ಬೇರುಗಳನ್ನು ಗಟ್ಟಿಗೊಳಿಸದೆ ತಾಲೂಕಿನ ವಿವಿಧ ಭಾಗಗಳಲ್ಲಿ ಮರಗಳು ಬುಡ ಸಮೇತ ಕಿತ್ತು ಬಿಳುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲೂ ಹಲವು ಕಡೆ ಮರಗಳು ಕಿತ್ತು ಬಿದ್ದಿರುವ ವರದಿಯಾಗಿದೆ.
   ರಸ್ತೆ ಮೇಲೆ ಸಂಚರಿಸುವ ವಾಹನಗಳಿಗೆ ಅಪಾಯ ಒಡ್ಡುವ ಸ್ಥಿತಿಯಲ್ಲಿ ಜೋತು ಬಿದ್ದಿರುವ ಟೊಂಗೆಗಳ ಕಾರಣಕ್ಕೆಸ್ಥಳೀಯರು ಕೂಡಲೇ ಹೆಸ್ಕಾಂ ಹಾಗೂ ಅರಣ್ಯ ಇಲಾಖೆಯವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಲಾಲ್ ಕೃಷ್ಣ ಅಡ್ವಾಣಿ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಗಮನ ಕೊಡಬೇಡಿ

ಯಲ್ಲಾಪುರ : ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. 
    "ಶ್ರೀರಾಮ ಮಂದಿರಕ್ಕಾಗಿ ಸದಾ ಶ್ರಮಿಸಿದ ಗೌರವಾನ್ವಿತ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಜಗತ್ತಿನಲ್ಲಿ ಇಲ್ಲ" ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಲಾಲ್ ಕೃಷ್ಣ ಅಡ್ವಾಣಿ ಅವರು ಗುರುವಾರ ಸಂಜೆ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.  ಇತ್ತೀಚಿನ ದಿನಗಳಲ್ಲಿ, ಲಾಲ್ ಕೃಷ್ಣ ಅಡ್ವಾಣಿ ಅವರನ್ನು ತಪಾಸಣೆಗಾಗಿ ಎರಡು ಬಾರಿ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು, ಇದರಿಂದಾಗಿ ಅವರ ಆರೋಗ್ಯದ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಅವರ ನಿಧನದ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 
ಲಾಲ್ ಕೃಷ್ಣ ಅಡ್ವಾಣಿ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ, "ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರು ಆರೋಗ್ಯವಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ," ಎಂದು ಹೇಳಿದೆ.
  ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳು ಮುಂದುವರೆದಿದ್ದು, ಜನರು ಯಾವುದೇ ಸತ್ಯಗಳಿಲ್ಲದೆ ಅಡ್ವಾಣಿ ಅವರ ನಿಧನದ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ಯಾವುದೇ ಸುದ್ದಿಯನ್ನು ಓದುವ ಮೊದಲು ಪರಿಶೀಲಿಸುವುದು ಅವಶ್ಯವಾಗಿದೆ.
   ಸಾಮಾಜಿಕ ಜಾಲತಾಣಗಳಲ್ಲಿ ಜನರು ವದಂತಿಗಳನ್ನು ತಪ್ಪಿಸುವಂತೆ ಸಲಹೆ ನೀಡಿದ್ದು, ನಿಜವಾದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.

News: ✒️✒️ ಕಿರವತ್ತಿ ಡೆಂಘಿ ಜಾಗೃತಿ ಕಾರ್ಯಕ್ರಮ ಮತ್ತು ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆNews: ✒️✒️ ಕಿರವತ್ತಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಡೆಂಘಿ‌ ಜಾಗೃತಿ

ಯಲ್ಲಾಪುರ: ಶನಿವಾರ, ಕಿರವತ್ತಿ ಗ್ರಾಮ ಪಂಚಾಯತ ಸಭಾಭವನದಲ್ಲಿ ಡೆಂಘಿ ಜಾಗೃತಿ ಕಾರ್ಯಕ್ರಮ ಮತ್ತು ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
   ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ ಅವರು ಡೆಂಘಿ ರೋಗದ ಲಕ್ಷಣಗಳು, ರೋಗ ಹರಡುವಿಕೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ವಿವರವಾಗಿ ತಿಳಿಸಿದರು. ಪ್ರತಿ ಶುಕ್ರವಾರ ಈಡೀಸ್‌ ಲಾರ್ವಾ ಉತ್ಪತ್ತಿ ತಾಣಗಳ ನಾಶ ಚಟುವಟಿಕೆಗಳ ದಿನ ಎಂದು ಘೋಷಿಸಿ, ಈ ಚಟುವಟಿಕೆಯಲ್ಲಿ ಸಮುದಾಯದ ಸಕ್ರಿಯ ಭಾಗವಹಿಸುವಿಕೆಗೆ ಕರೆ ನೀಡಿದರು.
    ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯು. ಜೋಸೆಫ್‌ ಅವರು ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಏನು ಮಾಡಬೇಕು ಎಂಬುದರ ಕುರಿತು ಮಾಹಿತಿ ನೀಡಿದರು. ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ಸೊಳ್ಳೆ ಪರದೆಗಳ ಬಳಕೆ, ಮತ್ತು ಸರಿಯಾದ ಔಷಧಿಗಳ ಸೇವನೆಯ ಬಗ್ಗೆ ತಿಳಿಸಿದರು.
   ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.‌ ಟಿ. ಭಟ್ ಅವರು ಪ್ರಾಣಿಗಳಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ ನೀಡಿ, ರೋಗಗಳನ್ನು ತಡೆಗಟ್ಟಲು ಏನು ಮಾಡಬೇಕು ಎಂಬುದರ ಕುರಿತು ತಿಳಿಸಿದರು.
   ಪಿಡಿಓ ಅಣ್ಣಪ್ಪ ವಡ್ಡರ ಅವರು ಡೆಂಘಿ ಮತ್ತು ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಗ್ರಾಮ ಪಂಚಾಯತ, ಆರೋಗ್ಯ ಇಲಾಖೆ ಮತ್ತು ಸಮುದಾಯದ ಸಕ್ರಿಯ ಪಾತ್ರವಹಿಸುವಿಕೆಗೆ ಕರೆ ನೀಡಿದರು.
   ಗ್ರಾಮ ಪಂಚಾಯತ ಚುನಾಯಿತ ಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಗ್ರಾಮಸ್ಥರು, ಈ ಮಾಹಿತಿ ಕಾರ್ಯಕ್ರಮ, ಗ್ರಾಮಸ್ಥರಲ್ಲಿ ಡೆಂಘಿ ಮತ್ತು ಪ್ರಾಣಿಜನ್ಯ ರೋಗಗಳ ಕುರಿತು ಜಾಗೃತಿ ಮೂಡಿಸಲು ಸಹಾಯ ಮಾಡಿತು. 
ಯಲ್ಲಾಪುರ ; ಡೆಂಗಿ ಜಾಗೃತಿ ಕಾರ್ಯಕ್ರಮ ಹಾಗೂ ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ ಅಂಗವಾಗಿ ಸರಕಾರಿ ಪದವಿಪೂರ್ವ ಕಾಲೇಜು ಕಿರವತ್ತಿಯಲ್ಲಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡೆಂಗಿ ನಿಯಂತ್ರಣ ಕುರಿತು ಹಾಗೂ ಪ್ರಾಣಿಜನ್ಯ ರೋಗಗಳ ಕುರಿತಾಗಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.‌ ಟಿ. ಭಟ್ಟರವರು ಮಾಹಿತಿ ನೀಡಿದರು.‌ ಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಯು. ಜೋಸೆಫ್‌, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರದ್ಧಾ ಭಗತ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.

ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರರಾವ್ ಇನ್ನಿಲ್ಲ.

ಯಲ್ಲಾಪುರ : ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಬೆದರಿಕೆ ನಿವಾಸಿ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರರಾವ್ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
   ಅವರಿಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಧರರಾವ್ ಪತ್ನಿ ಮೂವರು ಪುತ್ರರು ಅಗಲಿದ್ದಾರೆ.1948ರ ಕಾಸರಗೋಡು ಜಿಲ್ಲೆಯ ಕುಂಬ್ಳೆ ಮಹಾಲಿಂಗ ಹಾಗೂ ಕಾವೇರಿ ದಂಪತಿಗಳ ಪುತ್ರನಾಗಿ ಜನಿಸಿದ ಅವರು, ಕೂಡ್ಲು, ಮೂಲ್ಕಿ, ಧರ್ಮಸ್ಥಳ ಮೇಳದಲ್ಲಿ ಅರವತ್ತಕ್ಕೂ ಹೆಚ್ಚು ವರ್ಷ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ, ಶ್ರೀಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸಂದರ್ಭ, ಎಡನೀರು ಮಠದ ಹಾಗೂ ವಿವಿಧ ಸಂಘಟನೆಗಳು ಗೌರವಿಸಿ ಸನ್ಮಾನಿಸಿದ್ದಾರೆ.
  ಅವರ ನಿಧನಕ್ಕೆ ಸಚಿವ ಎಚ್.ಕೆ.ಪಾಟೀಲ, ಶಾಸಕರಾದ ಶಿವರಾಮ ಹೆಬ್ಬಾರ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷರಾದ ಮಹೇಶ ಜೋಶಿ, ಕೇಂದ್ರ ಮಾರ್ಗದರ್ಶಿ ಸಮಿತಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಸದಸ್ಯರಾದ ವೇಣುಗೋಪಾಲ ಮದ್ಗುಣಿ, ಪಂಚಾಯತ ರಾಜ್ಯ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.

Pwd ಕಾರ್ಯನಿರ್ವಾಹಕ ಅಭಿಯಂತರ ಹಿತ್ಲಳ್ಲಿ ಗ್ರಾಮಸ್ಥರಿಂದ ಸನ್ಮಾನಪಿಐ ಹಾನಾಪುರ ಹಾಗೂ ಪಿಎಸ್ಐ ಸಿದ್ದು ಗುಡಿ ಸನ್ಮಾನ

ಯಲ್ಲಾಪುರ : ಶಿರಸಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಅವರನ್ನು ಶಿರಸಿಯ ಅವರ ಕಚೇರಿಯಲ್ಲಿ, ಹಿತ್ಲಳ್ಳಿ ಗ್ರಾ.ಪಂ.ವ್ಯಾಪ್ತಿಯ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು. 
 ಕಾಮಗಾರಿ ಮಂಜೂರಾಗಿ, ಕಾರ್ಯಾದೇಶವಾಗಿದ್ದರೂ ಕೆಲಸ ನೆನೆಗುದಿಗೆ ಬಿದ್ದು, ಸಾರ್ವಜನಿಕರಿಗೆ ಅಪಾರ ತೊಂದರೆಯಾಗುತ್ತಿತ್ತು, ಗ್ರಾಮಸ್ಥರ ಹೋರಾಟದ ಫಲವಾಗಿ ಇತ್ತೀಚೆಗೆ ವ್ಯವಸ್ಥಿತವಾಗಿ ಪೂರ್ಣಗೊಂಡ ಮಂಚಿಕೇರಿಯ ಜೇನುಮುರಿ ಘಟ್ಟದಿಂದ ಯಡಳ್ಳಿ, ತೋಳಗೋಡು, ಹರಿಗದ್ದೆ ಮೂಲಕ ಹಿತ್ಲಳ್ಳಿಗೆ ಸಾಗುವ 11 ಕಿ.ಮೀ. ರಸ್ತೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತವಾಗಿ ಪೂರ್ಣಗೊಳಿಸಿಕೊಟ್ಟ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಅವರನ್ನು ಗೌರವಿಸಲಾಯಿತು.
ಪ್ರಮುಖರಾದ ವಿ.ಎಂ.ಹೆಗಡೆ, ನಾಗೇಂದ್ರ ಪತ್ರೇಕರ ಹುಲಿಮನೆ, ಗೋಪಾಲ ಹೆಗಡೆ ಜಾಗರಮನೆ, ಮಹಾಬಲೇಶ್ವರ ಗುಂಡಾನಜಡ್ಡಿ, ಪ್ರಶಾಂತ ಶಾಸ್ತ್ರಿ, ರತ್ನಾಕರ ಶೇಟ್, ಗಜಾನನ ಶಾಸ್ತ್ರಿ ತೋಳಗೋಡ, ಹಿತ್ಲಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಗೋಪಾಲ ಶಾಸ್ತ್ರಿ, ಮಂಜುನಾಥ ಶೇಟ್ ಪುರದಮನೆ, ಯಲ್ಲಾಪುರದ ಲೋಕೋಪಯೋಗಿ ಇಲಾಖೆಯ ನಿವೃತ್ತ ಎಇಇ ವಿ.ಎಂ.ಭಟ್ಟ ಮತ್ತಿತರರು ಉಪಸ್ಥಿತರಿದ್ದರು. 

ಯಲ್ಲಾಪುರ : ಯಲ್ಲಾಪುರ ಆರಕ್ಷಕ ಠಾಣೆಗೆ ನೂತನವಾಗಿ ಆಗಮಿಸಿ, ಅಧಿಕಾರ ವಹಿಸಿಕೊಂಡ ಸಿ.ಪಿ.ಐ. ರಮೇಶ ಹಾನಾಪುರ ಮತ್ತು ಪಿ.ಎಸ್.ಐ. ಸಿದ್ದು ಗುಡಿ ಅವರನ್ನು ತಾಲೂಕಿನ ಹಿತ್ಲಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಪಟ್ಟಣದ ಠಾಣೆಯಲ್ಲಿ ಜು.6 ರಂದು ಸನ್ಮಾನಿಸಿ, ಗೌರವಿಸಿದರು. 
   ಪ್ರಮುಖರಾದ ವಿ.ಎಂ.ಹೆಗಡೆ, ನಾಗೇಂದ್ರ ಪತ್ರೇಕರ ಹುಲಿಮನೆ, ಗೋಪಾಲ ಹೆಗಡೆ ಜಾಗರಮನೆ, ಮಹಾಬಲೇಶ್ವರ ಗುಂಡಾನಜಡ್ಡಿ, ಪ್ರಶಾಂತ ಶಾಸ್ತ್ರಿ, ರತ್ನಾಕರ ಶೇಟ್, ಗಜಾನನ ಶಾಸ್ತ್ರಿ ತೋಳಗೋಡ, ಹಿತ್ಲಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಗೋಪಾಲ ಶಾಸ್ತ್ರಿ, ಮಂಜುನಾಥ ಶೇಟ್ ಪುರದಮನೆ ಮತ್ತಿತರರು ಉಪಸ್ಥಿತರಿದ್ದರು. 

ಹೋಲಿ ರೋಜರಿ ಪ್ರೌಢಶಾಲೆಯ ಪ್ರಧಾನ ಕಾರ್ಯದರ್ಶಿಯಾಗಿ ಅಮೃತಾ ಭೇಕಣಿ

ಯಲ್ಲಾಪುರ: ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಆಯ್ಕೆ ಶನಿವಾರ ನಡೆದು, 2024-25 ನೇ ಸಾಲಿನ ಶಾಲಾ ಪ್ರಧಾನ ಮಂತ್ರಿಯಾಗಿ ಅಮೃತಾ ಭೇಕಣಿ ಮತ್ತು ಉಪ ಪ್ರಧಾನಮಂತ್ರಿಯಾಗಿ ನಮೀತಾ ದೇವಳಿ ಆಯ್ಕೆಯಾದರು. ಪ್ರಧಾನ ಮಂತ್ರಿಯ ಹುದ್ದೆಗೆ ಐದು ಜನ ಸ್ಪರ್ಧಿಗಳು ಮತ್ತು ಉಪ ಪ್ರಧಾನಮಂತ್ರಿಯ ಹುದ್ದೆಗೆ ಎಂಟು ಜನ ಸ್ಪರ್ಧಿಸಿದ್ದರು. 
 
   ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯ ಫಾ. ರೆಮಂಡ್ ಫರ್ನಾಂಡಿಸ್ ಮತಗಟ್ಟೆ ಪ್ರಮುಖ ಅಧಿಕಾರಿಗಳಾಗಿ ಚಂದ್ರಶೇಖರ ಎಸ್.ಸಿ, ಮತ್ತು ಚುನಾವಣಾ ಅಧಿಕಾರಿಗಳಾಗಿ ಜಗದೀಶ ಭಟ್, ನೆಲ್ಸನ್ ಗೋನ್ಸಾಲ್ವಿಸ್, ಫ್ಲೇಂಕಿ ಫರ್ನಾಂಡಿಸ್, ಹಾಗೂ ಎಂ. ರಾಜಶೇಖರ ಕಾರ್ಯನಿರ್ವಹಿಸಿದರು.

ಅನುದಾನಿತ ಶಾಲೆ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಮನವಿ

ಯಲ್ಲಾಪುರ : ಅನುದಾನಿತ ಶಾಲೆ ಕಾಲೇಜುಗಳ ಸಿಬ್ಬಂದಿಗಳಿಗೆ ರಾಜ್ಯ ಸರಕಾರಕ್ಕೆ ಕೊಟ್ಟ ಮಾತು ಈಡೇರಿಸಲು ಒತ್ತಾಯಿಸಿ, ಪಿಂಚಣಿ ವಂಚಿತ ನೌಕರರ ಸಂಘದಿಂದ, ಪಿಂಚಣಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶನಿವಾರ ತಹಶೀಲದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
   ರಾಜ್ಯದ ಅನುದಾನಿತ ಶಾಲೆ ಕಾಲೇಜುಗಳಲ್ಲಿ 2006 ರ ಪೂರ್ವದಲ್ಲಿ ಮತ್ತು ನಂತರದಲ್ಲಿ ನೇಮಕಾತಿ ಹೊಂದಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ನೌಕರರು ಪಿಂಚಣಿ ಇಲ್ಲದೆ ದುಡಿಯುತ್ತಿದ್ದಾರೆ. ಈಗಾಗಲೇ ಸಮಾರು 3 ಸಾವಿರ ಜನ ನಿವೃತ್ತರಾಗಿ ಸರಕಾರದಿಂದ ಬಿಡಿಗಾಸಿನ ಪರಿಹಾರವಿಲ್ಲದೆ ಅತ್ಯಂತ ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ನಾನಾ ಕಾರಣಗಳಿಂದ ಅಕಾಲಿಕವಾಗಿ ನಿಧನರಾದ ಶಿಕ್ಷಕರ ಮತ್ತು ನೌಕರರ ಅವಲಂಬಿತ ಕುಟುಂಬ ವರ್ಗದವರು ಬೀದಿ ಪಾಲಾಗಿದ್ದಾರೆ. ಪಿಂಚಣಿ ಬೇಡಿಕೆ ಮತ್ತು ನಿಶ್ಚಿತ ಪಿಂಚಣಿ ಅನುಷ್ಠಾನ ಮತ್ತು ಅನುದಾನಿತ ನೌಕರರ ಸೇವಾ ನಿಯಂತ್ರಣ ಕಾಯಿದೆ 2014 ನ್ನು ರದ್ದುಗೊಳಿಸಲು ಆಗ್ರಹಿಸಿ ಸಂಘಟನೆಯಿಂದ ದಶಕಗಳಿಂದ ಹತ್ತು ಹಲವು ಹೋರಾಟಗಳನ್ನು ಮಾಡಿದ್ದೇವೆ. ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 141 ದಿನಗಳ ಐತಿಹಾಸಿಕ ಹೋರಾಟ ಮಾಡಲಾಯಿತು. ನಿವೃತ್ತಿ ಹೊಂದಿದ ಕೆಲ ಶಿಕ್ಷಕರು ಹೋರಾಟದ ಸಮಯದಲ್ಲಿ ತಮ್ಮ ಜೀವಗಳನ್ನು ಕೂಡ ಕಳೆದುಕೊಂಡಿದ್ದಾರೆ ಇಷ್ಟಾದರೂ ಯಾವ ಸರಕಾರಗಳು ಅನುದಾನಿತ ನೌಕರರ ಅಳಲು ಆಲಿಸುವ ಕೆಲಸ ಮಾಡಿಲ್ಲ ಇದಲ್ಲದೆ ಅನುದಾನಿತ ಶಾಲೆ ಕಾಲೇಜುಗಳ ಸಾವಿರಾರು ನೌಕರರು ಈ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ 07- 10-2022 ರಿಂದ 27-02-2023 ರವರೆಗೆ ಸುಧೀರ್ಘ 141 ದಿನಗಳ ಕಾಲ ಫ್ರೀಡಂ ಪಾರ್ಕಿನಲ್ಲಿ ಹೋರಾಟ ಮಾಡಿದಾಗ್ಯೂ ಬೇಡಿಕೆ ಈಡೇರದೆ ಇದ್ದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಾದಾಮಿ ತಾಲೂಕಿನ ಗುಳೇದಗುಡ್ಡದ ನಿವೃತ್ತ ಶಿಕ್ಷಕ ದಿ. ಸಿದ್ದಯ್ಯ ಹಿರೇಮಠ ಅವರ ಮನೆಗೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖುದ್ದು ತಾವೇ ತೆರಳಿ ಆ ಕುಟುಂಬಕ್ಕೆ ವೈಯುಕ್ತಿಕವಾಗಿ ಎರಡು ಲಕ್ಷ ಹಣ ನೀಡಿದ್ದಲ್ಲದೇ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನುದಾನ ರಹಿತ ಅವಧಿಯನ್ನು ಪರಿಗಣಿಸಿ ಪಿಂಚಣಿ ಸೌಲಭ್ಯ ನೀಡುವ ಭರವಸೆಯನ್ನೂ ನೀಡಿದ್ದರು.
   ಈಗ ಅವರದೆ ಪಕ್ಷ ಅಧಿಕಾರಿಕ್ಕೆ ಬಂದು ವರ್ಷ ಕಳೆದರೂ ನಮ್ಮ ಬೇಡಿಕೆ ಈಡೇರಿಸಲು ಮುಂದಾಗದಿರುವುದನ್ನು ಖಂಡಿಸಿ ತಹಶೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಗಡುವು ನೀಡಿ ಮನವಿ ಸಲ್ಲಿಸಿದರು.
 
  ಮನವಿ ಸ್ವೀಕರಿಸಿದ ತಹಶೀಲ್ದಾರ ಅಶೋಕ ಭಟ್ಟ ಸರ್ಕಾರಕ್ಕೆ ರವಾನಿಸುವ ಭರವಸೆ ನೀಡಿದರು.
    ಈ ಸಂದರ್ಭದಲ್ಲಿ ಪಿಂಚಣಿ ವಂಚಿತ ನೌಕರರ ಸಂಘದ ಜಗದೀಶ ಯು ಭಟ್, ಎಂ ರಾಜಶೇಖರ, ನಾಗಭೂಷಣ ಹೆಗಡೆ ಸದಾನಂದ ಜೆ ನಾಯಕ್ ಚಂದ್ರಶೇಖರ ಎಸ್ ಸಿ, ಮುಕ್ತಾ ಶಂಕರ್, ಖೈರುನ್ ಶೇಖ, ಪ್ರೇಮಾ ಗಾಂವ್ಕರ, ಮಹೇಶ ನಾಯ್ಕ, ಶ್ಯಾಮಲಾ ಕೆರೆಗದ್ದೆ, ಪ್ರಸನ್ನ ಹೆಗಡೆ, ಮಮ್ತಾಜ್ ಎಂ ಶೇಖ, ನವೀನಾ ಎ ಗುನಗಾ, ಪ್ರದೀಪ‌ ಪಿ ನಾಯ್ಕ, ನೆಲ್ಸನ್ ಎಂ ಗೊನ್ಸಾಲ್ವೀಸ್ ಮುಂತಾದ ಶಿಕ್ಷಕರು ಸಿಬ್ಬಂದಿಗಳು ಇದ್ದರು.

ಆಸ್ತಿ, ಮನೆ ವಿಷಯಕ್ಕೆ ಮೈದುನನಿಂದ ಅತ್ತಿಗೆ ಮೇಲೆ ಹಲ್ಲೆ, ನಿಂದನೆ ಜೀವ ಬೆದರಿಕೆ

ಯಲ್ಲಾಪುರ: ಆಸ್ತಿ ಮನೆ ವಿಷಯಕ್ಕೆ ಸಂಬಂಧಿಸಿದಂತೆ ಮೈದುನನಿಂದ‌ ಅತ್ತಿಗೆಯ‌ ಮೇಲೆ, ಹಲ್ಲೆ, ನಿಂದನೇ ಹಾಗೂ ಜೀವ ಬೇಧರಿಕೆ ಹಾಕಿರುವ ಘಟನೆ ಶುಕ್ರವಾರ ಪಟ್ಟಣದ ಶಾರದಾಗಲ್ಲಿಯಲ್ಲಿ ನಡೆದಿದೆ.
   ಶಾರದಾಗಲ್ಲಿ ನಿವಾಸಿ ಪ್ರಶಾಂತ ನಾರಾಯಣ ಪಾಟಣಕರ (49) ತನ್ನ ಅತ್ತಿಗೆ ಮನೆಗೆ ತೆರಳಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾ ನಾರಾಯಣ ಗಡಕರ್ (40) ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
   ಪ್ರಶಾಂತನು, ರೇಣುಕಾ ಗಡಕರ ಅವರ ಗಂಡನ ತಮ್ಮನಾಗಿದ್ದು, ಈ ಆಸ್ತಿ ವಿಷಯದಲ್ಲಿ ಹಿಂದಿನಿಂದಲೂ ತಂಟೆ ತಕರಾರು ಮಾಡುತ್ತಿದ್ದ ಎನ್ನಲಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 03:30 ಗಂಟೆಗೆ. ರೇಣುಕಾ ಅವರು ತಮ್ಮ ಸಹೋದ್ಯೋಗಿ, ಹೆಲ್ತ್ ಇನ್ಸ್‌ಪೆಕ್ಟರ್ ಶ್ರದ್ದಾ ಮಂಜುನಾಥ ಹೆಗಡೆ ಅವರೊಂದಿಗೆ ಮನೆಯಲ್ಲಿ ಮಾತನಾಡುತ್ತಿದ್ದ ಸಂದರ್ಭ, ಪ್ರಶಾಂತನು ಅಪ್ರತೀಕ್ಷಿತವಾಗಿ ಪ್ರವೇಶಿಸಿ, "ನೀನು ಯಾಕೆ ಬಂದಿದ್ದೀಯಾ" ಎಂದು ಶ್ರದ್ದಾ ಅವರನ್ನು ಪ್ರಶ್ನಿಸಿದ್ದಾನೆ. 
ರೇಣುಕಾ ಅವರು, "ನಮ್ಮ ಇಲಾಖೆಯವರು ನಮ್ಮ ಇಲಾಖೆಯ ಬಗ್ಗೆ ಮಾತನಾಡಲು ಬಂದಿದ್ದಾರೆ," ಎಂದು ತಿಳಿಸಿದಾಗ, ಪ್ರಶಾಂತನು ಅವಾಚ್ಯ ಶಬ್ದಗಳಿಂದ ಬೈದು, ಮನೆಯ ಒಣಗಿಸಲು ಹಾಕಿದ ಬಟ್ಟೆಗಳನ್ನು ಎಳೆದು ಬಿಸಾಕಿ., ರೇಣುಕಾ ಅವರು "ಯಾಕೆ ಈ ರೀತಿ ಮಾಡುತ್ತಿದ್ದೀಯಾ" ಎಂದು ಪ್ರಶ್ನಿಸಿದಾಗ, ಪ್ರಶಾಂತನು ಮತ್ತಷ್ಟು ಅವಾಚ್ಯ ಶಬ್ದಗಳಿಂದ ಬೈದು, ರೇಣುಕಾ ಅವರ ಎಡ ಬುಜವನ್ನು ಹಿಡಿದು ಎಳೆದು, ಅವಮಾನಪಡಿಸಿದ್ದಾನೆ. ಗಾಬರಿಯಿಂದ ರೇಣುಕಾ ಅವರು ಕೂಗಾಡಿದಾಗ, ಪ್ರಶಾಂತ "ಇದು ನನ್ನ ಮನೆ. ನಿನಗೆ ಮತ್ತು ನಿನ್ನ ಗಂಡನಿಗೆ ಜೀವಂತ ಉಳಿಸುವುದಿಲ್ಲ" ಎಂದು ಜೀವ ಬೆದರಿಕೆ ಹಾಕಿ ಮನೆಯಿಂದ ಹೊರಗೆ ಹೋಗಿದ್ದಾನೆ. 
   ಈ ಘಟನೆಯ ಕುರಿತು ರೇಣುಕಾ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಪ್ರಶಾಂತನ ವಿರುದ್ಧ ದೂರು ನೀಡಿದ್ದಾರೆ. ಪಿಐ ರಮೇಶ್ ಹಾನಾಪುರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.