ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮದ ಹುಣಶೆಟ್ಟಿಕೊಪ್ಪದ ಚಂದ್ರಕಾಂತ ನಾರಾಯಣ ತಿನೇಕರ ಎಂಬಾತನನ್ನು ಪೊಲೀಸರು ಓ.ಸಿ. ಮಟಕಾ ಜೂಗಾರ ಆಡಿಸುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದಾರೆ.
ಅಕ್ಟೋಬರ್ 15ರ ರಾತ್ರಿ ಬಸ್ ನಿಲ್ದಾಣದ ಬಳಿ ಚಂದ್ರಕಾಂತ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿ ಜನರಿಂದ ಹಣವನ್ನು ಪಂತವಾಗಿ ಪಡೆದು ಜೂಗಾರ ಆಡಿಸುತ್ತಿದ್ದನು. ಈ ಸಂದರ್ಭದಲ್ಲಿ ಪಿಎಸ್ಐ ಸಿದ್ದಪ್ಪ ಗುಡಿ ನೇತೃತ್ವದ ತಂಡ ದಾಳಿ ನಡೆಸಿ, 930 ರೂಪಾಯಿ ನಗದು ಹಣ ಮತ್ತು ಜೂಗಾರದ ಪರಿಕರಗಳನ್ನು ವಶಪಡಿಸಿಕೊಂಡಿದೆ.
ಚಂದ್ರಕಾಂತ ಜೂಗಾರದಿಂದ ಸಂಗ್ರಹವಾದ ಹಣ ಮತ್ತು ಅಂಕೆ-ಸಂಖ್ಯೆಗಳ ಚೀಟಿಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.