ಯಲ್ಲಾಪುರ : ಯಲ್ಲಾಪುರದ ಭೂ ನ್ಯಾಯ ಮಂಡಳಿಗೆ ನೂತನ ಸದಸ್ಯರಾಗಿರುವ ಜಗ್ಗು ರಾಮು ಹುಂಬೆ ಅವರನ್ನು ಅವರನ್ನು ರಾಜ್ಯ ಸರ್ಕಾರ ನೇಮಕಮಾಡಿದೆ. ಕಿರವತ್ತಿ, ಹೊಸಳ್ಳಿಯವರಾಗಿದ್ದಾರೆ. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಪಿಯುಸಿ/ಜೆಓಸಿ 2 ಮಟ್ಟದ ವ್ಯಾಸಂಗ ಮಾಡಿರುವ ಹುಂಬೆಯವರು, ಕಿರವತ್ತಿ ಗ್ರಾಮ ಪಂಚಾಯತ್‌ನ ಸದಸ್ಯರಾಗಿದ್ದು, ತಮ್ಮ ಸಮುದಾಯಕ್ಕಾಗಿ ಅನೇಕ ಶ್ರೇಯಸ್ಸಿನ ಕೆಲಸಗಳನ್ನು ನಿರ್ವಹಿಸಿದ್ದಾರೆ.
ಹುಂಬೆಯವರು ಕಿರವತ್ತಿ ಗ್ರಾಮದ ಪ್ರಗತಿ ದನಗರ ಗೌಳಿ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದು, ತಮ್ಮ ಗ್ರಾಮಸ್ಥರಿಗೆ ಅನೇಕ ರೀತಿಯ ಸಹಾಯವನ್ನು ಒದಗಿಸುತ್ತಿದ್ದಾರೆ. ಹೀಗೆ ಅವರು ತಮ್ಮ ಸಂಘಟನಾತ್ಮಕ ಕೌಶಲ್ಯವನ್ನು ಸಂಘದ ಅಭಿವೃದ್ದಿಗೆ ಬಳಸುತ್ತಿದ್ದಾರೆ. ಅಲ್ಲದೇ, ಟಿಎಲ್‌ಎಮ್ ಸರ್ಕಾರೇತರ ಮಹಿಳಾ ಸಂಘವನ್ನು ರಚಿಸುವ ಮೂಲಕ ಮಹಿಳೆಯರ ಸಬಲಿಕರಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ಹುಂಬೆಯವರು ಜಿ.ಪಂ ಮಾಜಿ ಸದಸ್ಯ ಹಾಗೂ ಕಿರವತ್ತಿ ಭಾಗದ ಪ್ರಮುಖ ಸಾಮಾಜಿಕ ಮುಖಂಡ ವಿಜಯ ಮಿರಾಶಿ, ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್, ಹಾಗೂ ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ್ ಅವರ ಪ್ರೇರಣೆಯಿಂದ ಭೂ ನ್ಯಾಯ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಸ್ಥಾನದಲ್ಲಿ ಅವರು ತಮ್ಮ ಬುದ್ದಿಮತ್ತೆ, ಶ್ರದ್ಧೆ, ಹಾಗೂ ನಿರಂತರ ಶ್ರಮದಿಂದ ಸಮಾಜದ ಹಿತದ್ರಷ್ಟಿಯಾಗಿದ್ದಾರೆ.
ಜಗ್ಗು ರಾಮು ಹುಂಬೆಯವರು ತಮ್ಮ ಹುದ್ದೆಯ ಮೂಲಕ ಭೂ ನ್ಯಾಯ ಮಂಡಳಿಯ ಕಾರ್ಯಗಳನ್ನು ಶ್ರೇಯಸ್ಸಿನಿಂದ ನಿಭಾಯಿಸಲು ಬದ್ಧರಾಗಿದ್ದಾರೆ. ಅವರ ಮುಂದಿನ ಗುರಿ, ಜನಸಾಮಾನ್ಯರ ಭೂ-ಸಂಬಂಧಿ ಸಮಸ್ಯೆಗಳ ಪರಿಹಾರ ಹಾಗೂ ನ್ಯಾಯಯುತ ನಿರ್ಣಯಗಳ ಮೂಲಕ ಜನರ ಶ್ರೇಯಸ್ಸು ಸಾಧಿಸುವದು. ಭೂ ನ್ಯಾಯ ಮಂಡಳಿಯ ನೂತನ ಸದಸ್ಯರಾಗಿ , ಜಗ್ಗು ರಾಮು ಹುಂಬೆಯವರು ತಮ್ಮ ಹುದ್ದೆಯ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲು ತಯಾರಾಗಿದ್ದಾರೆ. ಅವರ ಭವಿಷ್ಯ ಯೋಜನೆಗಳಲ್ಲಿ ಕೊಟ್ಟ ಕೆಲಸವನ್ನೂ ಸಮರ್ಪಕವಾಗಿ ನಿಭಾಯಿಸುವ ಗುರಿಯನ್ನು ಹೊಂದಿದ್ದಾರೆ.