Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Wednesday, 2 October 2024

ಹಿಂದೂ ರುದ್ರಭೂಮಿ ಸ್ವಚ್ಛತಾ ಅಭಿಯಾನ ಸಮಾರೋಪ

IMG-20241002-152810 ಯಲ್ಲಾಪುರ: ಹಿಂದೂ ಧರ್ಮೀಯರ ಪವಿತ್ರ ಸ್ಥಳವಾದ ರುದ್ರಭೂಮಿಯ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ವಿಶ್ವ ಹಿಂದು ಪರಿಷತ್ ಮತ್ತು ವಿವಿಧ ಹಿಂದೂ ಸಂಘಟನೆಗಳು ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 2ರವರೆಗೆ ಯಲ್ಲಾಪುರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿದ್ದವು. IMG-20241002-152802 ಈ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಭಾಗವಹಿಸಿ ಮಾತನಾಡುತ್ತಾ, ಪಟ್ಟಣದ ಬಿಸಗೋಡ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯ ಅಭಿವೃದ್ಧಿಯ ಜೊತೆಗೆ ಇನ್ನೆರಡು ರುದ್ರಭೂಮಿಗಳ ಅಭಿವೃದ್ಧಿಯ ಅಗತ್ಯವನ್ನು ಪ್ರತಿಪಾದಿಸಿದರು. ಭೂಮಿ ಪಡೆಯುವಲ್ಲಿನ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿ ಹಿಂದೂ ರುದ್ರಭೂಮಿಗಳಿಗಾಗಿ ಭೂಮಿಯನ್ನು ಮೀಸಲಿಡಬೇಕು ಹಾಗಾದಾಗ ಮಾತ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಈ ಕ್ರಮ ಅತ್ಯಗತ್ಯ ಎಂದು ಅವರು ಸ್ಪಷ್ಟಪಡಿಸಿದರು. ಹಿಂದೆ ತಮ್ಮ ಕುಟುಂಬದಿಂದ ಪಟ್ಟಣ ಪಂಚಾಯತಕ್ಕೆ ಶವಸಂಸ್ಕಾರಕ್ಕೆ ವಾಹನ ನೀಡಲಾಗಿತ್ತು, ಆದರೆ ಅದನ್ನು ಸರಿಯಾಗಿ ನಿರ್ವಹಿಸದಿರುವುದರಿಂದ ಅದು ಹಾಳಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಸ್ವಚ್ಛತಾ ಅಭಿಯಾನದ ಸಂಘಟಕರು ಮಾಡಿರುವ ಉತ್ತಮ ಕಾರ್ಯವನ್ನು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿ ಅನುದಾನದ ಮೂಲಕ ಸ್ಮಶಾನಕ್ಕೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. IMG-20241002-152752 ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಮಾತನಾಡಿ, ಶಿರಸಿಯ ಬಿಳ್ಕಿಬೈಲ್ ಸ್ಮಶಾನಕ್ಕೆ ಅನುದಾನ ನೀಡಿರುವುದನ್ನು ಪ್ರಸ್ತಾಪಿಸುತ್ತಾ, ಈ ಸ್ಮಶಾನದ ಅಭಿವೃದ್ಧಿಗೆ ಬೇಕಾಗುವ ಮೂಲಭೂತ ಸೌಕರ್ಯಗಳಿಗೆ ಅಗತ್ಯವಿರುವ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು. IMG-20241002-152740 ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಎಸ್ ಎನ್ ಭಟ್ಟ ಐಕಾನ್, ಯಲ್ಲಾಪುರ ವಿಎಚ್‌ಪಿ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು. ಇಂತಹ ಸಮಾಜೋಪಯೋಗಿ ಕಾರ್ಯಗಳು ಸಂಘಟನೆಗೆ ಸಮಾಜದಿಂದ ಗೌರವ ತಂದುಕೊಡುತ್ತದೆ ಎಂದು ಅಭಿಪ್ರಾಯಪಟ್ಟರು. 
  ಸ್ಮಶಾನದ ಅಗತ್ಯ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಸಾಮಾಜಿಕ ಕಾರ್ಯಕರ್ತ ರಾಮು ನಾಯ್ಕ ವಿವರಿಸಿದರು. IMG-20241002-152731 ಪಟ್ಟಣ ಪಂಚಾಯತ ಉಪಾಧ್ಯಕ್ಷ ಅಮಿತ ಅಂಗಡಿ, ಸದಸ್ಯರಾದ ಶ್ಯಾಮಲಿ ಪಾಟಣಕರ, ಕಲ್ಪನಾ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಉಲ್ಲಾಸ ಶಾನಭಾಗ, ನಿವೃತ್ತ ತಹಶೀಲ್ದಾರ ಡಿ ಜಿ ಹೆಗಡೆ, ಪ್ರಸಾದ ಹೆಗಡೆ, ಬಾಬಾಸಾಬ್ ಆಲನ್, ಶಂಕರ ಭಟ್ಟ ತಾರೀಮಕ್ಕಿ,  ರಜನಿ ಚಂದ್ರಶೇಖರ, ನಾರಾಯಣ ನಾಯಕ, ನವೀನ ನಾಯ್ಕ ಹಾಗೂ ಇತರ ಸಂಘಟನೆಯ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
   ವಿಎಚ್‌ಪಿ ಜಿಲ್ಲಾ ಕೋಶಾಧ್ಯಕ್ಷ ನಾಗರಾಜ ಮದ್ಗುಣಿ ಸ್ವಾಗತಿಸಿ ನಿರೂಪಿಸಿದರು. ವಿಶ್ವ ಹಿಂದು ಪರಿಷತ್ ತಾಲೂಕಾಧ್ಯಕ್ಷ ಗಜಾನನ ನಾಯ್ಕ ವಂದಿಸಿದರು.