


ಸನ್ಮಾನಿತರಾದ ಶಿವರಾಮ ಹೆಗಡೆ ಪಾರದರ್ಶಕವಾಗಿ ಕೆಲಸ ಮಾಡಿದವರು, ಅನು ಕಾಮತ ಅವರು ಯಲ್ಲಾಪುರಕ್ಕೆ ಕೀರ್ತಿ ತಂದ ಅಂತರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು. ಪ್ರಕಾಶ ಮಾಲಶೇಟ್ ಅವರಿಗೆ ಬಲಗೈ ಆಗಿ ಸುರೇಶ ಪೈ ಕೆಲಸ ಮಾಡಿ ಯಲ್ಲಾಪುರ ಪಟ್ಟಣಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹೆಸ್ಕಾಂ ಲೈನ್‌ಮನ್‌ಗಳು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಾರೆ ಎಂದರು. ತಮ್ಮ ಹಾಗೂ ಮಾಲಶೇಟ್ ಶಾಲೆಯ ಸಹಪಾಠಿ ಲೈನ್‌ಮನ್ ಕರ್ತವ್ಯ ನಿರ್ವಹಣೆಯಲ್ಲಿ ವಿದ್ಯುತ್ ಅಘಾತದಲ್ಲಿ ಮೃತಪಟ್ಟಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಕಾಳಮ್ಮನಗರ ಮೈದಾನಕ್ಕೆ ಅವಕಾಶ ಸಿಕ್ಕರೆ ಪ್ರಕಾಶ ಮಾಲಶೇಟ್ ಅವರ ಹೆಸರು ಇಡುವುದಾಗಿ ತಿಳಿಸಿದರು.
ಕರಾಅಪವಿಗು ಸಂಘದ ಯಲ್ಲಾಪುರ ಘಟಕ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕ ಮಾತನಾಡಿ, ಅಭಿವೃದ್ಧಿ ಮಾಡುವ ಒಳ್ಳೆಯ ಶಾಸಕರು ನಮಗೆ ಸಿಕ್ಕಿದ್ದಾರೆ ಎಂದರು. ಆ ಕಾಲದಲ್ಲಿನ ಪ್ರಕಾಶ ಮಾಲಶೇಟ್ ಅವಧಿಯಲ್ಲಿ ಶಿವರಾಮ ಹೆಬ್ಬಾರ್ ಶಾಸಕರಾಗಿರಬೇಕಿತ್ತು, ಆಗ ಯಲ್ಲಾಪುರ ಇನ್ನಷ್ಟು ಪ್ರಗತಿ ಹೊಂದುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ, ಯಲ್ಲಾಪುರದ ಸ್ಪೋರ್ಟ್ಸ್ ಕ್ಲಬ್‌ನ ಪ್ರಕಾಶ್ ಮಾಲಶೇಟ, ಸುರೇಶ ಪೈ, ಸಾಮಾಜಿಕ ಕಾರ್ಯಕರ್ತ ಶಿವರಾಮ ಹೆಗಡೆ, ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಅನು ಕಾಮತ್ ಅವರಿಗೆ ನಾಗರಿಕ ಸನ್ಮಾನ ಹಾಗೂ ಹೆಸ್ಕಾಂ ಕಾರ್ಯನಿರತ ಪವರ್ ಮ್ಯಾನ್‌ಗಳು ಮತ್ತು ವರ್ಗಾವಣೆಗೊಂಡ ಹೆಸ್ಕಾಂ ಅಧಿಕಾರಿಗಳಿಗೆ ವೃತ್ತಿ ಸನ್ಮಾನ ನೀಡಲಾಯಿತು.




ಸನ್ಮಾನಿತರ ಪರವಾಗಿ ಪ್ರಕಾಶ ಮಾಲಶೇಟ್ ಮಾತನಾಡಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಶಿವರಾಮ ಹೆಬ್ಬಾರ್, ಪ್ರಮೋದ ಹೆಗಡೆ, ವಿಜಯ ಮಿರಾಶಿ ಹಾಗೂ ದಾಂಡೇಲಿ ಹೆಸ್ಕಾಂ ಅಧಿಕಾರಿ ಮಲ್ಯಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯ ಚದುರಂಗ ಕಾರ್ಯದರ್ಶಿ ನವೀನ ಶ್ರೀನಿವಾಸ ಹೆಗಡೆ, ಹೆಸ್ಕಾಂ ನೌಕರರ ಸಂಘದ ಶೇಖರಪ್ಪ ಯೆರಗೇರಿ, ಜಿ.ಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಅಂತರಾಷ್ಟ್ರೀಯ ಚೆಸ್ ಆಟಗಾರ ರಾಮಚಂದ್ರ ಭಟ್ ವೇದಿಕೆಯಲ್ಲಿದ್ದರು.
ಕು.ಸನ್ನಿದಿ ಭಾಗ್ವತ ಗುಂಡ್ಕಲ್ ಪ್ರಾರ್ಥಿಸಿದರು. ಶಿಕ್ಷಕ ಸಂಜೀವ ಹೊಸ್ಕೇರಿ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ಚೆಸ್ ಆಟದಲ್ಲಿ ಜಿಲ್ಲೆಯ ಬೇರೆ ಬೇರೆ ಭಾಗದ 158 ಮಕ್ಕಳು ಭಾಗವಹಿಸಿದ್ದರು.
