ಯಲ್ಲಾಪುರ: ತಾಲೂಕಿನ ತೇಲಂಗಾರಿನಲ್ಲಿ ಮೈತ್ರಿ ಕಲಾಬಳಗ, ಮಾತೃ ಮಂಡಳಿ, ವನಸಿರಿ ಕಲಾಕೂಟಗಳ ಸಹಯೋಗದೊಂದಿಗೆ 2 ದಿನಗಳ ಶಾರದೋತ್ಸವಕ್ಕೆ ಅಕ್ಟೋಬರ್ 9 ರಂದು ಚಾಲನೆ ನೀಡಲಾಯಿತು. ಚಿತ್ರಕಲೆ, ರಂಗೋಲಿ, ಗುರಿ ಹೊಡೆಯುವುದು, ಚೆಸ್ ಸ್ಪರ್ಧೆಗಳೊಂದಿಗೆ ಉದ್ಘಾಟನೆ ಆರಂಭವಾಯಿತು. ಕೃಷ್ಣ ಭಟ್ಟ ಮುಂಡಗೆತಗ್ಗು ಶಾರದಾ ಸ್ಥಾಪನೆ ನೆರವೇರಿಸಿದರು.
ಮಧ್ಯಾಹ್ನ ಸೀಮಾ ಮಹಿಳೆಯರಿಂದ ಭಕ್ತಿಗೀತೆ, ಭಜನೆಗಳು ನಡೆದವು. ಮೈತ್ರಿ ಮಹಿಳಾ ತಾಳಮದ್ದಳೆ ಕೂಟದಿಂದ 'ಭೀಷ್ಮ ವಿಜಯ' ತಾಳಮದ್ದಳೆ ಪ್ರದರ್ಶನ ನಡೆಯಿತು. ವೆಂಕಟ್ರಮಣ ಭಟ್ಟ ಚಂದಗುಳಿ (ಭಾಗವತ), ನಾಗಪ್ಪ ಕೋಮಾರ (ಮದ್ದಲೆ) ಹಾಗೂ ಸಂಜಯ ಕೋಮಾರ (ಚಂಡೆ) ಹಿಮ್ಮೇಳದಲ್ಲಿ ಭಾಗವಹಿಸಿದರು. ಹೊಸ ಪ್ರತಿಭೆ ಗಣೇಶ ಗಾಂವ್ಕರ ಸೆಳೆಮನೆ ಕೂಡ ಮದ್ದಲೆ ನುಡಿಸಿದರು.
ನಾರಾಯಣ ಗಾಂವಕರ ಗೋಡೆಪಾಲ, ಟಿ.ವಿ.ಕೋಮಾರ, ಗಣಪತಿ ಕಂಚಿಪಾಲ, ಮಂಜುನಾಥ ಮೂಲೆಮನೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.