ಯಲ್ಲಾಪುರ: ರಾಮಾಪುರ, ಕಾಜಲವಾಡದ ಛತ್ರಪತಿ ಯುವಕ ಮಂಡಳಿ ಆಯೋಜಿಸಿರುವ ಹನ್ನೆರಡನೇ ವರ್ಷದ ಶಾರದಾ ಉತ್ಸವವು ಅಕ್ಟೋಬರ್ 9ರಿಂದ 15ರವರೆಗೆ ಕಾಜಲವಾಡದ ಶಾರದಾ ಮೈದಾನದಲ್ಲಿ ನಡೆಯಲಿದೆ. ಏಳು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ದೇವತಾ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು, ಕ್ರೀಡೆ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ನಿತ್ಯ 7 ದಿನಗಳ ಕಾಲ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1:30ಕ್ಕೆ ಪೂಜೆ ಹಾಗೂ ರಾತ್ರಿ 9:30ಕ್ಕೆ ಮಹಾಪೂಜೆ ನಡೆಯಲಿದೆ. ಈ ವರ್ಷದ ಶಾರದಾ ಮೂರ್ತಿಗೆ ಶಿವಮೊಗ್ಗದ ತೃಪ್ತಿ ಎನ್. ದೇಣಿಗೆ ನೀಡಿದ್ದಾರೆ.
ಅಕ್ಟೋಬರ್ 9ರಂದು ಬುಧವಾರ ಬೆಳಿಗ್ಗೆ 11:30ಕ್ಕೆ ಶಾರದಾ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಅಕ್ಟೋಬರ್ 10ರಿಂದ 13ರವರೆಗೆ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ವಿಶೇಷ ಕ್ರೀಡಾ ಸ್ಪರ್ಧೆಗಳು ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 13 ಮತ್ತು 14ರಂದು ಸಾಯಂಕಾಲ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 15ರಂದು ಮಂಗಳವಾರ ಬೆಳಗ್ಗೆ 9:30ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಾಯಂಕಾಲ 5:30ಕ್ಕೆ ಮುಕ್ತಾಯ ಸಮಾರಂಭ, ಫಲಾವಳಿ ಮತ್ತು ಮೂರ್ತಿ ವಿಸರ್ಜನೆ ನೆರವೇರಲಿದೆ.
ಸತ್ಯನಾರಾಯಣ ಪೂಜೆ ಮಾಡಿಸಲು ಬಯಸುವವರು ಸಮಿತಿಯಲ್ಲಿ 301 ರೂ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಕಮಲಾಕರ ಪಾಟೀಲ್, ಸಂತೋಷ ಮರಾಠಿ, ಕಿಶನ್ ಪಾಟೀಲ್ ಮತ್ತು ಪ್ರಕಾಶ ದೇವಕರ ಅವರು ಈ ಉತ್ಸವದ ಯಶಸ್ಸಿಗಾಗಿ ತನು-ಮನ-ಧನದಿಂದ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
.