Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Thursday, 3 October 2024

ಸಾವಗದ್ದೆ: ಕಾಡು ಪ್ರಾಣಿ ಹತ್ಯೆ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಹುಡುಕಾಟ

IMG-20241003-181041 ಯಲ್ಲಾಪುರ : ಕಾಡು ಪ್ರಾಣಿ ಹತ್ಯೆ ಮಾಡಿ ಹೂತಿಟ್ಟಿರುವ ಅನುಮಾನವನ್ನು ಆಧರಿಸಿ, ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಒಂದು ವಾರದಿಂದ ಆನಗೋಡಿನ ವಿವಿಧ ಭಾಗಗಳಲ್ಲಿ ಶೋಧ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಈವರೆಗೆ ಕಾಡು ಪ್ರಾಣಿಯ ಕಳೆಬರಹ ಸಿಕ್ಕಿಲ್ಲ. ಶೋಧ ಕಾರ್ಯದಲ್ಲಿ ತಡಕಾಡಿದ ಅರಣ್ಯ ಸಿಬ್ಬಂದಿಗೆ ಕೆಲವು ಮಹತ್ವದ ಸಂಗತಿಗಳು ತಿಳಿದುಬಂದಿದ್ದು, ಆದರೆ ಆ ಮಾಹಿತಿಯನ್ನು ಅವರು ಯಾರಿಗೂ ಬಹಿರಂಗಪಡಿಸುತ್ತಿಲ್ಲ. ಪ್ರಾರಂಭದಲ್ಲಿ ಉತ್ಸಾಹದಿಂದ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ನಂತರ 'ಪ್ರಭಾವಿಗಳ ಉಸಾಬರಿ ನಮಗೇಕೆ?' ಎಂಬ ಪ್ರಶ್ನೆ ಕೇಳುತ್ತಾ ಮೌನವಾಗಿರುವ ಬಗ್ಗೆ ಮಾತುಗಳು ಕೇಳಿಬಂದಿವೆ. IMG-20241003-181032 ಸಾವಗದ್ದೆಯ ಭಾಸ್ಕರ ಭಟ್ಟ ಅವರು, 'ತನಗೆ ಆಗದವರು ಕಾಡು ಪ್ರಾಣಿ ಹತ್ಯೆ ಮಾಡಿ ತನ್ನ ಮನೆ ಅಂಚಿನಲ್ಲಿ ಹೂತಿರುವ ಅನುಮಾನವಿದೆ' ಎಂದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಮಂಗಳವಾರ ಅರಣ್ಯ ಸಿಬ್ಬಂದಿಗಳು ಸಾವಗದ್ದೆಗೂ ತೆರಳಿ ಶೋಧ ನಡೆಸಿದರು. ಆದರೆ, ಹೊಸದಾಗಿ ಕಂಡುಬಂದ ಮಣ್ಣಿನ ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಗೆದರೂ, ಕಾಡು ಪ್ರಾಣಿಯ ಕಳೆಬರಹ ಸಿಗಲಿಲ್ಲ. 'ಇಲ್ಲಿ ಏನೂ ನಡೆದಿಲ್ಲ' ಎಂದು ಭಾಸ್ಕರ ಭಟ್ಟರಿಂದ ಮುಚ್ಚಳಿಕೆ ಪಡೆದ ಅರಣ್ಯಾಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ. ಎನ್ನಲಾಗಿದೆ. 
  ಸಾವಗದ್ದೆಯಲ್ಲಿ, ಅರಣ್ಯ ಸಿಬ್ಬಂದಿ ಕಾಡು ಪ್ರಾಣಿ ಕಳೆಬರೆಯ ಹುಡುಕಾಟ ನಡೆಸುತ್ತಿದ್ದಾಗ, ಭಾಸ್ಕರ ಭಟ್ಟ ಅವರಿಗೆ ಜೀವ ಬೆದರಿಕೆ ಬಂದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದಾರೆ. 
   ಮೂವರು ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಮಾಡಿ ಜೀವ ಬೆದರಿಕೆ ನೀಡಿರುತ್ತಾರೆ, ಅಲ್ಲದೇ ವ್ಯಕ್ತಯೋರ್ವ ನನ್ನ ಮೊಬೈಲ್‌ನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದು, ಇನ್ನೋರ್ವರು ಅರಣ್ಯ ಇಲಾಖೆಯ ಜೀಪಗೆ ಅಡ್ಡಲಾಗಿ ತಮ್ಮ ಕಾರನ್ನು ನಿಲ್ಲಿಸಿ, ನನಗೆ ಕೆಟ್ಟದಾಗಿ ಬೈದು ನಿಂದಿಸಿರುತ್ತಾರೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಎನ್ ಸಿ ಪ್ರಕರಣ ದಾಖಲಿಸಿ ಇಬ್ಬರು ಕಡೆಯವರಿಗೆ ಬುದ್ದಿ ಹೇಳಿ ಪ್ರಕರಣವನ್ನು ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. IMG-20241003-181021 ಬಿಸಗೋಡ- ಆನಗೋಡ ಜನರ ವದಂತಿಯ ಪ್ರಕಾರ, ಬೇರೆ ಕಡೆ ಶೋಧ ನಡೆಸಿದಾಗ, ಮಹತ್ವದ ಮಾಹಿತಿಯೊಂದು ಹೊರಬಂದಿದೆ. ಆದರೆ, ಈ ಗಂಭೀರ ವಿಷಯವನ್ನು ಸ್ಥಳೀಯವಾಗಿ ರಾಜಿ ಮಾಡಿಕೊಂಡಿರುವ ಬಗ್ಗೆ ಗುಸು ಗುಸು ಕೇಳಿಬಂದಿದೆ. ಸಣ್ಣಪುಟ್ಟ ವಿಷಯಗಳಿಗೆ ತೊಂದರೆ ನೀಡುವ ಆ ಭಾಗದ ಅರಣ್ಯ ಸಿಬ್ಬಂದಿ, ದೊಡ್ಡವರ ವಿಷಯ ಬಂದಾಗ ರಾಜಿಸೂತ್ರಕ್ಕೆ ಮಣಿಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಪ್ರಸ್ತುತ, ಕಾಡು ಪ್ರಾಣಿ ಹತ್ಯೆ ಪ್ರಕರಣವು ಪ್ರಭಾವಿಯೊಬ್ಬರ ಕೈವಾಡದ ಹಿನ್ನಲೆಯಲ್ಲಿ ನಡೆಯುತ್ತಿದೆ ಎಂಬ ಊಹಾಪೋಹಗಳು ದಟ್ಟವಾಗಿವೆ. 
‌‌‌    ಆನಗೋಡು-ಬಿಸಗೋಡು ಭಾಗದ ಅರಣ್ಯ ಸಿಬ್ಬಂದಿಗಳ ವಿರುದ್ಧ ಆ ಭಾಗದ ಜನರು ಮೊದಲೇ ಸಿಡಿದೆದ್ದು, ಅವರ ವರ್ಗಾವಣೆಗಾಗಿ ಒತ್ತಾಯಿಸಿದ್ದಾರೆ. ಈ ನಡುವೆ, 'ನನ್ನ ತಂಟೆಗೆ ನೀ ಬರಬೇಡ. ನಿನ್ನ ತಂಟೆಗೆ ನಾ ಬರುವುದಿಲ್ಲ' ಎಂದು ಪ್ರಭಾವಿಯೊಬ್ಬರ ರಾಜಿಸೂತ್ರದ ಹಿನ್ನಲೆ ಪ್ರಕರಣವನ್ನು ಕೈ ಬಿಡುತ್ತಿರುವ ಅನುಮಾನ ವ್ಯಕ್ತವಾಗಿದೆ. 
    ಈ ಘಟನೆಗಳು ಸ್ಥಳೀಯ ಸಮುದಾಯದಲ್ಲಿ ಆತಂಕವನ್ನು ಉಂಟುಮಾಡಿದ್ದು, ಕಾಡು ಪ್ರಾಣಿ ಹತ್ಯೆ ಪ್ರಕರಣದ ತನಿಖೆ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ.