
ಉಮ್ಮಚಗಿ ಜನತಾ ಕಾಲೋನಿ ನಿವಾಸಿ ಕೂಲಿ ಕಾರ್ಮಿಕ ರಾಘವೇಂದ್ರ ಪಟಗಾರ ಈತ ಅ.10 ರಂದು ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ಓ.ಸಿ. ಮಟಕಾ ಜೂಗಾರ ಆಡಿಸುತ್ತಿದ್ದ. ಇವನು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿ ಜನರನ್ನು ಆಕರ್ಷಿಸಿ ಹಣವನ್ನು ಪಂತವಾಗಿ ಕಟ್ಟಿಸಿಕೊಳ್ಳುತ್ತಿದ್ದನು.
ಪಿಎಸ್ಐ ಶೆಡ್ಜಿ ಚವ್ಹಾಣ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ರಾಘವೇಂದ್ರನಿಂದ 480 ರೂಪಾಯಿ ನಗದು ಮತ್ತು ಮಟಕಾ ಜೂಗಾರದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಇನ್ನೋರ್ವ ಆರೋಪಿ ಶಿರಸಿ ರಾಮನಗರದ ದಿನೇಶ ಸುಬ್ರಾಯ ನಾಯ್ಕನಿಗೆ ರಾಘವೇಂದ್ರ ಪಟಗಾರ ಹಣ ಮತ್ತು ಚೀಟಿಗಳನ್ನು ಒದಗಿಸುತ್ತಿದ್ದ ಎಂಬ ದೂರು ದಾಖಲಾಗಿದೆ.

ಯಲ್ಲಾಪುರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಸುಲೋಚನಾ ನಾಯ್ಕ, ಈ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.