ಯಲ್ಲಾಪುರ : ತಾಲೂಕಿನ ಹುಣಶೇಟ್ಟಿಕೊಪ್ಪ ಡೊಮಗೆರಿ ಕ್ರಾಸ್ ಬಳಿ ಓಸಿ ಮಟ್ಕಾ ಜೂಗಾರ ಆಡಿಸುತ್ತಿದ್ದ ಹುಣಶೆಟ್ಟಿಕೊಪ್ಪ ನಿವಾಸಿ, ಕಿರಾಣಿ ಅಂಗಡಿ ವ್ಯಾಪಾರಿ ಸಂತೋಷ ಸಿ.ಎಮ್ ಮೋಹನದಾಸ(40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಅಕ್ಟೋಬರ್ 15 ರಾತ್ರಿ 8.00 ಗಂಟೆಗೆ ನಡೆದಿದೆ.
ಡೋಮಗೇರಿ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಂತೋಷ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಓ.ಸಿ, ಮಟಕಾ ಎಂಬ ಜುಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸುತ್ತಿದ್ದನು. ಜನರನ್ನು ಸೇರಿಸಿಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂತವಾಗಿ ಕಟ್ಟಿಸಿಕೊಂಡು ಓ.ಸಿ ಎಂಬ ಜುಗಾರಾಟ ಆಡಿಸುತ್ತಿದ್ದಾಗ ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದರು.
ದಾಳಿಯ ಸಂದರ್ಭದಲ್ಲಿ ಪೊಲೀಸರು ಸಂತೋಷನಿಂದ 780 ರೂಪಾಯಿ ನಗದು ಹಣ ಮತ್ತು ಓ.ಸಿ-ಮಟಕಾ ಅಂಕೆ-ಸಂಖ್ಯೆ ಬರೆದ ಪೇಪರ್, ಪೆನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸಂತೋಷನು ಓ.ಸಿ ಮಟಕಾ ಜೂಗಾರಾಟದಿಂದ ಸಂಗ್ರಹವಾದ ಹಣ ಹಾಗೂ ಅಂಕೆ ಸಂಖ್ಯೆ ಬರೆದ ಚೀಟಿಯನ್ನು ತಾನೇ ಇಟ್ಟುಕೊಳ್ಳುತ್ತಿದ್ದ ಬಗ್ಗೆ ದೂರು ಸಹ ದಾಖಲಾಗಿದೆ.