ಯಲ್ಲಾಪುರ: ನವರಾತ್ರಿ ಉತ್ಸವ-2024 ರ ಪ್ರಯುಕ್ತ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಗತ್‌ಸಿಂಗ್ ಅಟೋ ಚಾಲಕ ಮತ್ತು ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘ, ಲಾರಿ ಚಾಲಕರ ಸಂಘ, ಬಸವೇಶ್ವರ ಗೂಡ್ಸ್ ಲಕ್ಷಾ ಚಾಲಕ ಮತ್ತು ಮಾಲಕರ ಸಂಘ ಹಾಗೂ ಕನ್ನಡ ಪರ ಸಂಘಟನೆ ಯಲ್ಲಾಪುರ ಇವರ ನೇತೃತ್ವದಲ್ಲಿ ದಾನಿಗಳ ಸಹಾಯದಿಂದ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಅನ್ನಸಂತರ್ಪಣೆ ಕಾರ್ಯಕ್ರಮವು ಅಕ್ಟೋಬರ್ 4, 2024 ರ ಶುಕ್ರವಾರ ಮಧ್ಯಾಹ್ನ 12.30 ರಿಂದ 3.30 ರವರೆಗೆ ನಡೆಯಲಿದೆ. ಇದರ ಜೊತೆಗೆ, ರಾಜಸ್ಥಾನಿ ವಿಷ್ಣು ಸಮಾಜ ಯಲ್ಲಾಪುರದವರು, ಕನ್ನಡ ಪರ ಸಂಘಟನೆ ಯಲ್ಲಾಪುರ ಇವರ ಸಹಯೋಗದೊಂದಿಗೆ ಮತ್ತೊಂದು ಅನ್ನ ಸಂತರ್ಪಣಾ ಕಾರ್ಯಕ್ರಮ ಅಕ್ಟೋಬರ್ 8, 2024 ರ ಮಂಗಳವಾರ ಮಧ್ಯಾಹ್ನ 12.30 ರಿಂದ 3.30 ರವರೆಗೆ ನಡೆಯಲಿದೆ.
ಈ ಎರಡು ಅನ್ನಸಂತರ್ಪಣೆ ಕಾರ್ಯಕ್ರಮವು ಶ್ರೀ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ನಡೆಯಲಿದ್ದು, ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಅನ್ನ ಪ್ರಸಾದ ವಿತರಣೆಯ ಪ್ರಮುಖರಾದ ಸಂತೋಷ ನಾರಾಯಣ ನಾಯ್ಕ ರವೀಂದ್ರನಗರ ಕೋರಿದ್ದಾರೆ.