



ಸಹಕಾರ ಮಾನವೀಯತೆಯ ಸಂಕೇತ
ಹುಬ್ಬಳ್ಳಿ ಹಾನಗಲ್ ವಿರಕ್ತಮಠದ ಜಗದ್ಗುರು ಮೂರುಸಾವಿರಮಠ ಮಹಾಸಂಸ್ಥಾನದ ಪೂಜ್ಯ ನಿರಂಜನ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಮುಖ್ಯ ಅತಿಥಿಗಕಲಾಗಿ ಮಾತನಾಡಿ, ಸಹಕಾರ ತತ್ವವು ಮಾನವೀಯತೆಯ ಸಂಕೇತವಾಗಿದೆ. ಸಹಕಾರ ಇದ್ದಲ್ಲಿ ಸಹಬಾಳ್ವೆ ಮತ್ತು ಸಂತೋಷ ಇರುತ್ತದೆ ಎಂದು ತಿಳಿಸಿದರು.
ಈ ಸಹಕಾರ ಭಾವನೆಯಿಂದ ನಾವೆಲ್ಲರೂ ಜೀವನ ಮಾಡುವುದು ಶ್ರೇಷ್ಟವಾದುದಾಗಿದೆ ಎಂದು ಅವರು ಪ್ರತಿಪಾದಿಸಿದರು. ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಕಾರ ಭಾವನೆ ವ್ಯಾಪಕವಾಗಿ ಬೆಳೆದಿದೆ ಎಂದು ಶ್ರೀಗಳು, ಸಹಕಾರಿ ಕ್ಷೇತ್ರದ ಮೂಲಕ ಹಲವಾರು ಕ್ಷೇತ್ರಗಳು ಬೆಳೆದಿವೆ ಎಂದು ಸ್ಮರಿಸಿದರು. ಆದರೆ ಕೆಲವು ಸಹಕಾರಿ ಕ್ಷೇತ್ರಗಳು ಸಂಕಷ್ಟದಲ್ಲಿರುವುದನ್ನು ಗಮನಿಸಬಹುದಾಗಿದೆ ಎಂದೂ ಹೇಳಿದರು. ಪ್ರಾಮಾಣಿಕತೆ ಮತ್ತು ನಿಷ್ಕಲ್ಮಷತೆ ಇದ್ದರೆ ಮಾತ್ರ ಈ ಕ್ಷೇತ್ರ ಬೆಳೆಯಲು ಸಾಧ್ಯ ಎಂದು ಅವರು ಒತ್ತಿ ಹೇಳಿದರು.

ಈ ಭಾಗದಲ್ಲಿ ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿರುವ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಶಾಸಕ ಶಿವರಾಮ ಹೆಬ್ಬಾರ್ ಅವರ ಸಲಹೆಗಳನ್ನು ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯವರು ತಪ್ಪದೇ ಅನುಸರಿಸಬೇಕು ಎಂದು ಸ್ವಾಮಿಗಳು ಕರೆ ನೀಡಿದರು.
ಪ.ಪಂ ಉಪಾಧ್ಯಕ್ಷ ಅಮೀತ ಅಂಗಡಿ, ಸಾಮಾಜಿಕ ಕಾರ್ಯಕರ್ತ ಶಿವಲಿಂಗಯ್ಯ ಅಲ್ಲಯ್ಯಮಠ, ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ, ಉದ್ಯಮಿ ರಾಜೇಂದ್ರ ಬದ್ದಿ, ಉದ್ಯಮಿ ಮಹೇಶ ಗೌಳಿ, ವೆಂಕಟ್ರಮಣ ಮಠದ ಅಧ್ಯಕ್ಷ ವಿನಾಯಕ ಪೈ, ಪ.ಪಂ ಸದಸ್ಯ ಸೋಮೇಶ್ವರ ನಾಯ್ಕ, ಎಲ್ಎಸ್ಎಂಪಿ ಸೋಸೈಟಿಯ ಟಿ ಅರ್ ಹೆಗಡೆ, ಶ್ರೀಧರ ಶೆಟ್ಟಿ, ಪುಷ್ಪಾವತಿ ಜೋಗಾರಶೆಟ್ಟಿ, ವ್ಯಾಪಾರಸ್ಥ ರಾಘವೇಂದ್ರ ಹೆಗಡೆ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಲಿನಿ ಭಟ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಉಪ ಪ್ರಧಾನ ವ್ಯವಸ್ಥಾಪಕ ಮಹಾದೇವ ಮಂಗಾವತೆ ಮಾತನಾಡಿದರು. ಶಾಲಿನಿ ಹಾಗೂ ಸೀಮಾ ಪ್ರಾರ್ಥನೆ ಸಲ್ಲಿಸಿದರು. ಸಿದ್ಧಾರ್ಥ ನಂದೊಳ್ಳಿಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
.
.