ಯಲ್ಲಾಪುರ: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ.2ರಂದು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪ್ರಭಾರ ಪ್ರಾಂಶುಪಾಲರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳಾದ ರೇಂಜರ್ಸ್ ಲೀಡರ್, ಎನ್.ಎಸ್.ಎಸ್. ಅಧಿಕಾರಿಗಳು ಸೇರಿ ಗಾಂಧೀಜಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಭಾರ ಪ್ರಾಂಶುಪಾಲ ಸವಿತಾ ನಾಯ್ಕ ಮಾತನಾಡಿ, ಅಹಿಂಸೆಯ ತತ್ವವು ಭಾರತದ ಸಮೃದ್ಧ ಪರಂಪರೆಯ ಭಾಗವಾಗಿದ್ದು, ಗಾಂಧೀಜಿಯವರು ಅದನ್ನು ದೇಶದ ಮುಂಚೂಣಿಗೆ ತಂದು ನಿಲ್ಲಿಸಿದಂತೆ ವಿದ್ಯಾರ್ಥಿಗಳು ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಐ.ಕ್ಯೂ.ಎ.ಸಿ ಸಂಚಾಲಕರಾದ ಶರತ್ ಕುಮಾರ್ ಕಾರ್ಯಕ್ರಮದ ನಂತರ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಸುರೇಖಾ ತಡವಲ, ಹಾಗೂ ರೇಂಜರ್ಸ್ ಲೀಡರ್ ಡಾ. ರುಬೀನಾಖಾತು ಉಪಸ್ಥಿತರಿದ್ದರು.
ಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಗೀತಾ ಸಿದ್ದಿ ಸ್ವಾಗತಿಸಿದರು. ಪುನೀತ್ ಗೌಡ ವಂದನೆ ಸಲ್ಲಿಸಿದರು, ಮತ್ತು ಕಾವ್ಯಶ್ರೀ ಮರಾಠಿ ಕಾರ್ಯಕ್ರಮ ನಿರ್ವಹಿಸಿದರು.
ಈ ವೇಳೆ ಎನ್.ಎಸ್.ಎಸ್ ಘಟಕ 1 ಮತ್ತು 2 ರ ಸ್ವಯಂ ಸೇವಕರಿಂದ ಕಾಲೇಜು ಆವರಣ ಮತ್ತು ತಾಲೂಕಿನ ಕ್ರೀಡಾಂಗಣದಲ್ಲಿ ಶ್ರಮದಾನ ನಡೆಸಲಾಯಿತು, ಇದರಿಂದ ಪರಿಸರದ ಶುದ್ಧತೆ ಮತ್ತು ಸ್ವಚ್ಛತೆಯ ಅಗತ್ಯವನ್ನೂ ಜನರಿಗೆ ಮನವರಿಕೆ ಮಾಡಿಸಲಾಯಿತು.