ಯಲ್ಲಾಪುರ : ಕಿರವತ್ತಿ ಸಮೀಪದ ಹೊಸಳ್ಳಿ ಗಾಂವಠಾಣ ಅಂಗನವಾಡಿ ಶಾಲೆ ಮೇಲೆ ಬೃಹತ್ ಮರ ಬಿದ್ದಿದೆ, ರವಿವಾರ ವಾಗಿರುವದರಿಂದ ಅಂಗನವಾಡಿಯಲ್ಲಿ ಯಾವುದೇ ಮಕ್ಕಳು ಇಲ್ಲದೇ ಇರುವುದು ದೊಡ್ಡ ಅನಾಹುತ ತಪ್ಪಿದೆ.
ಶಾಲೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಮರಗಳು ಅಂಗನವಾಡಿಗೆ ಅಪಾಯದ ಹಂತದಲ್ಲಿ ಇರುವುದನ್ನು ಗಮನಿಸಿದ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರು ಪಂಚಾಯತ್ ನೋಡಲ್ ಅಧಿಕಾರಿ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು.
ನೋಡಲ್ ಅಧಿಕಾರ ಮತ್ತು ವಿಲೇಜ್ ಅಕೌಂಟೆಂಟ್ ಜುಲೈ 23 ರಂದು ಸ್ಥಳಕ್ಕೆ ಭೇಟಿ ನೀಡುವ ಮೂಲಕ ಅರಣ್ಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದ್ದರು ಆದರೆ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳದೇ ಮಕ್ಕಳ ಜೀವನದ ಜೊತೆಗೆ ಚಲ್ಲಾಟವಾಡಿ ಕರ್ತವ್ಯ ಲೋಪ ಎಸಗಿರುವುದು ಸೃಷ್ಟವಾಗಿದೆ,
ಆಗಬಹುದಾದ ಅನಾಹುತ ತಪ್ಪಿದೆ ಎಂದು ಸ್ಥಳೀಯ ನಿವಾಸಿ ಬೈರು ಜೊರೆ ತಿಳಿಸಿದ್ದಾರೆ. ಅಪಾಯವನ್ನು ಗಮನಿಸಿಯೂ ಕೂಡ ನಿರ್ಲಕ್ಷವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ. ಕ್ರಮ ಕೈಗೊಳ್ಳದೆ ಇದ್ದರೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.