Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Wednesday, 16 October 2024

ದತ್ತ ಮಂದಿರದ ನಿಧಿಕುಂಭ ಸಮರ್ಪಣಾ ಕಾರ್ಯಕ್ರಮ

IMG-20241016-064925 ಯಲ್ಲಾಪುರ : ಶ್ರೀ ರಾಮಚಂದ್ರಾಪುರ ಮಠಕ್ಕೆ ಸೇರಿದ ಪಟ್ಟಣದ ನಾಯ್ಕನಕೆರೆಯಲ್ಲಿರುವ ಶ್ರೀ ದತ್ತ ಮಂದಿರದ ನೂತನ ಶಿಲಾಮಯ ದೇವಾಲಯಕ್ಕೆ ನಿಧಿಕುಂಭಕ್ಕೆ ನಿಧಿ ಸಮರ್ಪಣಾ ಕಾರ್ಯಕ್ರಮ ಅ. 17 ರಂದು ಸಂಜೆ ನಾಲ್ಕು ಗಂಟೆಗೆ ನೆರವೇರಲಿದೆ. IMG-20241016-064914 ಕಾರ್ಯಕ್ರಮದಲ್ಲಿ ವಿದ್ವಾನ್ ನಾಗೇಂದ್ರ ಭಟ್ಟ ಹಿತ್ಲಳ್ಳಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕ ಶಿವರಾಮ ಹೆಬ್ಬಾರ್, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಉಪಸ್ಥಿತರಿರಲಿದ್ದು, ದತ್ತ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ವಿ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಅಧ್ಯಕ್ಷತೆ ವಹಿಸಲಿದ್ದಾರೆ. 
    ದಿ. 18 ರಂದು ಬೆಳಿಗ್ಗೆ 8 ಗಂಟೆಗೆ ನಿಧಿಕುಂಭ ಸ್ಥಾಪನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ನಿಶ್ಚಲಾನಂದ ಸ್ವಾಮಿಗಳು ದಿವ್ಯ ಉಪಸ್ಥಿತಿ ಇರುತ್ತಿದ್ದು, ಅತಿಥಿಗಳಾಗಿ ಉದ್ಯಮಿ ದಿಲೀಪ್ ಭಟ್ಟ, ಹಾಗೂ ಡಿಸಿಎಫ್ ಹರ್ಷಭಾನು ಆಗಮಿಸಲಿದ್ದಾರೆ ಎಂದು ಶ್ರೀ ದತ್ತ ಮಂದಿರ ನಿರ್ಮಾಣ ಸಮಿತಿಯ ಪ್ರಕಟಣೆ ತಿಳಿಸಿದೆ.