Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Tuesday, 15 October 2024

ಕಟ್ಟಡ ಸುಂದರವಾಗಿದ್ದರೂ ಒಳಗಿರುವ ಮನಸ್ಥಿತಿ ಸುಂದರವಾಗಿಲ್ಲ ! ಯಲ್ಲಾಪುರ ಬಸ್ ನಿಲ್ದಾಣ: ಸೌಂದರ್ಯಕ್ಕೆ ಸರಿಸಾಟಿಯಾಗಿ ಸೇವಾ ಮನೋಭಾವ ಬೆಳೆಯಬೇಕು!

IMG-20241015-132442 
 ವರದಿ : ಜಗದೀಶ ನಾಯಕ 

 ಯಲ್ಲಾಪುರ: ಶಿವರಾಮ ಹೆಬ್ಬಾರ್ ಅವರು ಶಾಸಕರಾದ ನಂತರ ಯಲ್ಲಾಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಅದ್ಭುತವಾಗಿ ಸಾಗುತ್ತಿವೆ. ಯಲ್ಲಾಪುರ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಜೊತೆಗೆ ಮುಂಡಗೋಡ ಮತ್ತು ಬನವಾಸಿ ಭಾಗಗಳು ಕೂಡ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗುತ್ತಿವೆ. ಹಳೆಯ ಸರ್ಕಾರಿ ಕಟ್ಟಡಗಳನ್ನು ನವೀಕರಿಸಿ, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಪಟ್ಟಣ ಪಂಚಾಯತಿ, ತಹಶೀಲ್ದಾರ ಕಚೇರಿ, ಬಸ್ ನಿಲ್ದಾಣ, ಮತ್ತು ಕಾರ್ಮಿಕ ಇಲಾಖೆಯ ಕಟ್ಟಡಗಳು ಹೊಸ ರೂಪ ಪಡೆದು ಕಂಗೊಳಿಸುತ್ತಿವೆ. IMG-20241015-132431 ಆದರೆ, ಈ ನವೀನತೆಯ ಹೊರತಾಗಿಯೂ ಕೆಲವು ಅಧಿಕಾರಿಗಳಲ್ಲಿ ಸಾರ್ವಜನಿಕರ ಸೇವೆಯ ಮನೋಭಾವ ಇನ್ನೂ ಬೆಳೆದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ಹೊಸ ಕಟ್ಟಡಗಳು ಸಾರ್ವಜನಿಕರ ಪಾಲಿಗೆ ದೇವಸ್ಥಾನದಂತಿದ್ದರೆ, ಅಲ್ಲಿನ ಕೆಲವು ಅಧಿಕಾರಿಗಳು ಅರ್ಚಕರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲವು ಅಧಿಕಾರಿಗಳು ಹೊಸತನವನ್ನು ಅಳವಡಿಸಿಕೊಂಡರೂ, ಕೆಲವರು ಹಳೆಯ ಮನಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. IMG-20241015-132420 ಯಲ್ಲಾಪುರ ಬಸ್ ನಿಲ್ದಾಣದ ಕಂಟ್ರೋಲರ್ ಒಬ್ಬರ ವರ್ತನೆ ಇದಕ್ಕೆ ಉದಾಹರಣೆ. ಪ್ರಯಾಣಿಕರು ಬಸ್ಸಿನ ಮಾಹಿತಿ ಕೇಳಿದಾಗ ಅವರು ಉಡಾಪೆಯ ಉತ್ತರಗಳನ್ನು ನೀಡುತ್ತಾರೆ. ಬಸ್ಸಿನ ಆಗಮನ ಮತ್ತು ನಿರ್ಗಮನದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಲು ಅವರು ಹಿಂಜರಿಯುತ್ತಾರೆ. ಬಸ್ ಚಾಲಕರು ಮತ್ತು ನಿರ್ವಾಹಕರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾ, ಪ್ರಯಾಣಿಕರ ಪ್ರಶ್ನೆಗಳನ್ನು ನಿರ್ಲಕ್ಷಿಸುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. 
   ಬಸ್ ನಿಲ್ದಾಣದಲ್ಲಿ ಬಸ್ಸುಗಳ ಆಗಮನ ಮತ್ತು ನಿರ್ಗಮನದ ಬಗ್ಗೆ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಯಾವುದೇ ಬಸ್ಸು ನಿಗದಿತ ಸಮಯಕ್ಕೆ ಬರುತ್ತದೆ ಅಥವಾ ಹೋಗುತ್ತದೆ ಎಂಬುದು ಖಚಿತವಾಗಿ ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಪ್ರಯಾಣಿಕರು ಬಸ್ಸಿನ ಬಗ್ಗೆ ಮಾಹಿತಿ ಕೇಳಿದಾಗ, ಸಕಾರಾತ್ಮಕ ಉತ್ತರದ ಬದಲು ನಕಾರಾತ್ಮಕ ಉತ್ತರಗಳು ಕಂಟ್ರೋಲರ್ ನಿಂದ ದೊರೆಯುತ್ತಿವೆ ಎಂದು ಆರೋಪಿಸಲಾಗಿದೆ. 
   ಬಸ್ ನಿಲ್ದಾಣದ ಸ್ವಚ್ಛತೆಯೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವಾಗ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ಬದಲು, ಅತಿ ಹೆಚ್ಚು ಪ್ರಯಾಣಿಕರು ಇರುವಾಗಲೇ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕಸದ ಡಬ್ಬದ ಕಸವನ್ನು ನೆಲಕ್ಕೆ ಸುರಿಯುವುದು, ನಂತರ ಅದನ್ನು ಸ್ವಚ್ಛಗೊಳಿಸದಿರುವುದು ಸಾಮಾನ್ಯವಾಗಿದೆ. ಪ್ರಯಾಣಿಕರಿಗೆ ಆಗುವ ಈ ಎಲ್ಲ ತೊಂದರೆಗಳನ್ನು ಗಮನಿಸಿ, ಸಮಸ್ಯೆಗಳನ್ನು ನಿವಾರಿಸಬೇಕಾದ ಕಂಟ್ರೋಲರ್ ತಮ್ಮ ಕ್ಯಾಬಿನ್ ನಿಂದ ಹೊರಗೆ ಬರುವುದಿಲ್ಲ ಎಂದು ಆರೋಪಿಸಲಾಗಿದೆ. 
 ಸರ್ಕಾರಿ ಕಟ್ಟಡಗಳು ಎಷ್ಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದರೂ, ಅಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸಾರ್ವಜನಿಕರ ಸೇವೆಗಾಗಿ ನಿರ್ಮಾಣವಾದ ಕಟ್ಟಡ ಮತ್ತು ಸಾರ್ವಜನಿಕರ ಸೇವಕರು ನಾವು ಎಂದು ಎಲ್ಲಿಯವರೆಗೆ ಭಾವಿಸುವುದಿಲ್ಲ7ವೋ ಅಲ್ಲಿಯವರೆಗೆ ಈ ಕಟ್ಟಡಗಳು ನಿಜವಾದ ಮೌಲ್ಯವನ್ನು ಉಳಿಸಿಕೊಳ್ಳುವುದಿಲ್ಲ. 
   ಯಲ್ಲಾಪುರದ ಒಬ್ಬ ವ್ಯಕ್ತಿ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆ ಮತ್ತು ಕಂಟ್ರೋಲರ್‌ರ ಸೇವಾ ಮನೋಭಾವದ ಕುರಿತು ವಿಡಿಯೋ ತುಣುಕುಗಳನ್ನು ಸಂಗ್ರಹಿಸಿ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ್ತು ಸಚಿವರಿಗೆ ಅಕ್ಟೋಬರ್ 15 ರಂದು ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮತ್ತು ಉಸ್ತುವಾರಿ ಸಚಿವರ ಗಮನಕ್ಕೂ ಈ ವಿಷಯವನ್ನು ತರಲಾಗುವುದು. ಬಸ್ ನಿಲ್ದಾಣದ ವ್ಯವಸ್ಥೆ ಸುಧಾರಿಸದಿದ್ದರೆ ನಿರಂತರವಾಗಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಚಿವರಿಗೆ ದೂರು ನೀಡುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ. 
  ಸೌಂದರ್ಯದ ಹಿಂದೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಸಾರ್ವಜನಿಕರ ಸೇವಕರು ಎಂಬ ಭಾವನೆಯನ್ನು ಅಧಿಕಾರಿಗಳು ಬೆಳೆಸಿಕೊಂಡಾಗ ಮಾತ್ರ ಈ ನವೀನ ಕಟ್ಟಡಗಳು ತಮ್ಮ ನಿಜವಾದ ಉದ್ದೇಶವನ್ನು ಪೂರೈಸಲು ಸಾಧ್ಯವಾಗುತ್ತದೆ ಎಂಬುದು ಸ್ಪಷ್ಟವಾಗಿದೆ.