ಯಲ್ಲಾಪುರ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಯಲ್ಲಾಪುರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಭಟ್ಟ ಮೆಣಸುಪಾಲ, ಗಾಂಧೀಜಿಯವರು ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ ವ್ಯಕ್ತಿಯಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಬುಧವಾರ, ರಾಷ್ಟ್ರಪಿತ್ ಮಹಾತ್ಮಾ ಗಾಂಧಿಯವರ 154 ನೇ ಹಾಗೂ ಮಾಜಿ ಪ್ರಧಾನ್ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀ ಯವರ 120 ನೇ ಜಯಂತಿ ಅನ್ವಯ, ಗ್ರಾಮದೇವಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿ ಅಂಬೇಡ್ಕರ್ ವ್ರತ್ತ ದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡ ದೇಶದ ಪ್ರಧಾನಿಯಾಗಿ ಅಪೂರ್ವ ವ್ಯಕ್ತಿತ್ವ ಪ್ರದರ್ಶಿಸಿದ್ದರು. ಈ ಇಬ್ಬರ ಆದರ್ಶಗಳು ನಮಗೆಲ್ಲರಿಗೂ ಪ್ರೇರಣೆಯಾಗಿದೆ ಎಂದರು.100 ವರ್ಷಗಳ ಹಿಂದೆ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವು ಸ್ಮರಣೀಯವಾಗಿದೆ ಎಂದು ಅವರು ಸ್ಮರಿಸಿಕೊಂಡರು.
ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ಇಂತಹ ಮಹಾತ್ಮರ ದಿನಾಚರಣೆಯನ್ನು ಆಚರಿಸುವ ಉದ್ದೇಶ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದೇ ಆಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಟಿ.ಸಿ.ಗಾಂವ್ಕರ, ಡಿ.ಎನ್.ಗಾಂವ್ಕರ, ಪ್ರೇಮಾನಂದ ನಾಯ್ಕ, ಪ್ರಶಾಂತ ಸಭಾಹಿತ, ಡಾ.ರವಿ ಭಟ್ಟ, ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ವಿವಿಧ ಸೆಲ್ಲುಗಳ ಅಧ್ಯಕ್ಷರು,ಹಾಗೂ ಸದಸ್ಯರು ತಾಲೂಕಾ ಮಹಿಳಾ ಅಧ್ಯಕ್ಷರು, ಪಟ್ಟಣ ಪಂಚಾಯತ್ ಸದಸ್ಯರು, ಮತ್ತು ಎಲ್ಲಾ ಕಾರ್ಯಕತರು ಅಭಿಮಾನಿಗಳು,ಸಾರ್ವಜನಿಕರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆರ್.ಪಿ.ಹೆಗಡೆ ಸ್ವಾಗತಿಸಿ, ವಂದಿಸಿದರು.