ಯಲ್ಲಾಪುರ: ಕಾಳಮ್ಮ ನಗರದ ಶ್ರೀ ಕಾಳಮ್ಮದೇವಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ.
ಅಕ್ಟೋಬರ್ 3ರಿಂದ 12ರವರೆಗೆ ನಡೆಯುವ ಈ ಉತ್ಸವದಲ್ಲಿ ಸಪ್ತಶತಿ ಚಂಡಿ ಪಾರಾಯಣವನ್ನು 10 ದಿನಗಳ ಕಾಲ ನಡೆಸಲಾಗುತ್ತದೆ. ಪ್ರತಿ ದಿನ ರಾತ್ರಿ 8 ಗಂಟೆಗೆ ಮಹಾಪೂಜೆ ನಡೆಯಲಿದ್ದು, ಭಕ್ತರು ದಿನನಿತ್ಯ ಅಲಂಕಾರ ಸೇವೆ ಮತ್ತು ಪೂಜೆಯಲ್ಲಿ ಪಾಲ್ಗೊಳ್ಳಬಹುದು.
ಉತ್ಸವದ ಅವಧಿಯಲ್ಲಿ ನಡೆಯುವ ಅಲಂಕಾರ ಪೂಜೆ ಮತ್ತು ಮಹಾಪೂಜೆಯಲ್ಲಿ ಸೇವೆ ಸಲ್ಲಿಸಲು ಬಯಸುವವರು ಹಾಗೂ ಚಂಡಿ ಪಾರಾಯಣ ಮಾಡಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಬೇಕೆಂದು ದೇವಾಲಯದ ಅಧ್ಯಕ್ಷ ಉದಯ ಎಸ್ ನಾಯ್ಕ ಕೋರಿದ್ದಾರೆ.
ಆಸಕ್ತರು 9448738287 ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.