ಯಲ್ಲಾಪುರ/ ಶಿರಸಿ : ಅರಣ್ಯ ಹಕ್ಕು ಕಾಯಿದೆಯಲ್ಲಿ ಅಸಮರ್ಪಕ ಜಿಪಿಎಸ್ ಸಂಬಂಧಿಸಿ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಸುಮಾರು 32 ಸಾವಿರಕ್ಕಿಂತ ಮಿಕ್ಕಿ ಅರಣ್ಯವಾಸಿಗಳ ಕುಟುಂಬಗಳಿಂದ ಜಿಪಿಎಸ್ ಮೇಲ್ಮನವಿ ಮಾಡುವ ಮೂಲಕ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಬೆಂಬಲವನ್ನ ಹೋರಾಟಗಾರರ ವೇದಿಕೆಯು ಬೆಂಬಲ ನೀಡಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಜಿಪಿಎಸ್ ಮೇಲ್ಮನವಿ ಪ್ರತಿಯನ್ನು ವಿತರಿಸಿ ಮಾತನಾಡುತ್ತ ಹೇಳಿದರು. ಉತ್ತರಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 87,757 ಅರ್ಜಿಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ ಪ್ರಥಮ ಹಂತದಲ್ಲಿ 67,333 ಕುಟುಂಬದ ಅರ್ಜಿಗಳು ತಿರಸ್ಕಾರವಾಗಿದೆ. ಜಿಪಿಎಸ್ ಆಗಿರುವಂತಹ ಪ್ರಕರಣಗಳಲ್ಲಿ ಕೊಟ್ಟಿಗೆ, ಸಾಗುವಳಿ ಕ್ಷೇತ್ರ, ಗೊಣವೆ, ಅಂಗಲ, ಮುಂತಾದ ಜೀವನ ಅವಶ್ಯ ಸಾಗುವಳಿ ಕ್ಷೇತ್ರ ಬಿಟ್ಟಿರುವದರಿಂದ ಮೇಲ್ಮನವಿ ಅಭಿಯಾನ ಜರುಗಿಸುವುದು ವೇದಿಕೆಯ ಕಾನೂನು ಹೋರಾಟವು ಮಾದರಿ ಹೋರಾಟವಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ರಾಜು ನರೇಬೈಲ್, ಇಬ್ರಾಹಿಂ ಗೌಡಳ್ಳಿ, ನಾಗರಾಜ ಸದಾಶಿವ ದೇವಸ್ಥಳಿ, ಎಮ್. ಆರ್. ನಾಯ್ಕ ಮಾತನಾಡಿದ್ದರು. ನೆಹರು ನಾಯ್ಕ, ಗಂಗೂಬಾಯಿ.ಆರ್.ರಜಪೂತ, ಮಲ್ಲೇಶ ಬಸವಂತಪ್ಪ ಬಾಳೇಹಳ್ಳಿ, ಚಂದ್ರಶೇಖರ ಶ್ರೀಕಾಂತ ಶಾನಭಾಗ, ಕಲ್ಪನಾ ಪಾವಸ್ಕರ್ ದೊಡ್ನಳ್ಳಿ, ರಮೇಶ ಮರಾಠಿ ಉಪಸ್ಥಿತರಿದ್ದರು.
ಬೆಂಗಳೂರ ಚಲೋ:
ನ. 7 ರಂದು ಬೆಂಗಳೂರಿನ ಪ್ರೀಡಮಂ ಪಾರ್ಕನಲ್ಲಿ ಜರುಗಲಿರುವ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಬೇಕೇಂದು ಅಧ್ಯಕ್ಷ ರವೀಂದ್ರ ನಾಯ್ಕ ಕರೆ ನೀಡಿದರು.