ಯಲ್ಲಾಪುರ : ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಮದನೂರು ಪಂಚಾಯತ ವ್ಯಾಪ್ತಿಯ ಕರಡೊಳ್ಳಿ ಗ್ರಾಮದ ಗುರು ಹಿರಿಯರ ಮಾರ್ಗದರ್ಶನದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 26ರ ಶನಿವಾರ ರಂದು 60 ಕೆ.ಜಿ ವಿಭಾಗದ ಬಾಲಕರ ಕಬ್ಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಿದ್ದಾರೆ.
ಪ್ರಥಮ ಬಹುಮಾನ ನಗದು 10,000 ರೂ. (ಪ್ರಾಯೋಜಕರು ಸಮಾಜದ ಹಿರಿಯರು ಹಾಗೂ ಸಿವಿಲ್ ಗುತ್ತಿಗೆದಾರರಾದ ವಿಠ್ಠಲ್ ಜೆ ಪಾಂಡರಮಿಸೆ ) ದ್ವಿತೀಯ ಬಹುಮಾನ ನಗದು 7,000 ರೂ (ಪ್ರಾಯೋಜಕರು ಮದನೂರು ಗ್ರಾ ಪಂ ಅಧ್ಯಕ್ಷ ರಾಜೇಶ್ ತಿನೇಕರ), ತೃತೀಯ ಬಹುಮಾನ ನಗದು 5000 ರೂ. (ಪ್ರಾಯೋಜಕರು ಮದನೂರು ಗ್ರಾ ಪಂ ಉಪಾಧ್ಯಕ್ಷೆ ದೀಪಾ ಧೂಳು ಶಿಂಧೆ) ಚತುರ್ಥ ಬಹುಮಾನ ನಗದು 3000 (ಪ್ರಾಯೋಜಕರು ಶ್ರೀ ಗ್ರಾಮದೇವಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘ ನೀ. ಮದನೂರು ಅಧ್ಯಕ್ಷ ಮಹೇಶ ದೇಸಾಯಿ,)
ಟ್ರೋಫಿ ಪ್ರಾಯೋಜಕರು ಪ್ರಥಮ ಸುಬ್ರಾಯ್ ವಿ ಪೈ (ಸೀನಿಯರ್ ಮ್ಯಾನೇಜರ್ ಸೇಫ್ ಸ್ಟಾರ್ ಬ್ಯಾಂಕ ಯಲ್ಲಾಪುರ ಶಾಖೆ ), ದ್ವಿತೀಯ ವಿಟ್ಟು ಶೇಳಕೆ (ಸದಸ್ಯರು ಗ್ರಾ ಪಂ ಮದನೂರು) ತೃತೀಯ ಪ್ರಭಾ ನಾಯ್ಕ (ಸದಸ್ಯರು ಗ್ರಾ ಪಂ ಮದನೂರು) ಚತುರ್ಥ ನವಲು ಶ್ಯಾಮು ಜೋರೆ ಕ್ಯಾಟರಿಂಗ್ ಮಾಲಿಕರು ಕರಡೊಳ್ಳಿ).ಆಗಿದ್ದಾರೆ.
ಒಂದು ತಂಡದ ಆಟಗಾರರು ಒಂದೇ ಊರಿನವರಾಗಿರಬೇಕು, ಆಧಾರ್ ಕಾರ್ಡ್ ಕಡ್ಡಾಯ. ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಹೆಚ್ಚಿನ ತಂಡಗಳು ಭಾಗವಹಿಸಬೇಕು ಎಂದು ಕರಡೊಳ್ಳಿ ಗ್ರಾಮದ ಯುವ ಮುಖಂಡ ಲಕ್ಷ್ಮಣ ಕೋಕರೆ ತಿಳಿಸಿದ್ದಾರೆ.
ಸಂಪರ್ಕಿಸಿ : ಲಕ್ಷ್ಮಣ ಕೋಕರೆ (9880892983), ಶ್ಯಾಮ ಶಿಂಧೆ (7483197907),