Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Wednesday, 16 October 2024

ಉಮ್ಮಚಗಿಯಲ್ಲಿ ಅಕ್ಟೋಬರ್ 20ರಂದು ರಾಜ್ಯಮಟ್ಟದ ಮಕ್ಕಳಗೋಷ್ಟಿ

IMG-20241016-153456 ಯಲ್ಲಾಪುರ: ತಾಲೂಕಿನ ಉಮ್ಮಚಗಿಯಲ್ಲಿ ಅಕ್ಟೋಬರ್ 20 ರಂದು ರಾಜ್ಯಮಟ್ಟದ ಮಕ್ಕಳ ಗೋಷ್ಟಿಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಆಯೋಜಿಸಿದೆ. ಯಲ್ಲಾಪುರದ ಜೀವನಶೈಲಿ, ಸಂಸ್ಕೃತಿ ಮತ್ತು ಪರಂಪರೆಯನ್ನು ರಾಜ್ಯಾದ್ಯಂತ ಪಸರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಘುನಂದನ ಭಟ್ಟ ಹೇಳಿದರು. IMG-20241016-153434 ವ್ಯಾಸ ವಿರಚಿತ ಶ್ರೀಮದ್ಭಾಗವತವನ್ನು ಆಧರಿಸಿ 'ಮರಳಿ ಮಡಿಲಿಗೆ' ಎಂಬ ವಿಷಯದ ಕುರಿತು ನಡೆಯಲಿರುವ ಈ ಗೋಷ್ಟಿಯಲ್ಲಿ, ರಾಜ್ಯದ 19 ಜಿಲ್ಲೆಗಳ 30 ಮಕ್ಕಳು ಭಾಗವಹಿಸಲಿದ್ದಾರೆ. ಭಾರತೀಯ ಸಾಹಿತ್ಯದ ಹಿನ್ನೆಲೆಯಲ್ಲಿ, 10 ನೇ ತರಗತಿಯೊಳಗಿನ ಮಕ್ಕಳು ನಿರ್ದಿಷ್ಟ ವಿಷಯದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಉಮ್ಮಚಗಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಪರಿಸರ ಪೂರಕವಾಗಿರುವುದರಿಂದ ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. 
    ಎಂ.ಜಿ.ಭಟ್ಟ ಸಂಕದಗುಂಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಟಿ.ವಿ.ಹೆಗಡೆ ಬೆದೆಹಕ್ಲು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಾ.ಮಹೇಶ ಭಟ್ಟ ಇಡಗುಂದಿ ಸಮಾರೋಪದಲ್ಲಿ ಮಾತನಾಡಲಿದ್ದಾರೆ. ಸುಜಾತಾ ಹೆಗಡೆ, ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಶಂಕರ ಭಟ್ಟ ತಾರೀಮಕ್ಕಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.