ಯಲ್ಲಾಪುರ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ(ಕರಾಅಪವಿಗು) ಸಂಘದ ಯಲ್ಲಾಪುರ ತಾಲೂಕು ಸಮಿತಿ ದ್ವಿತೀಯ ವರ್ಷದ 'ಒಪನ್ ರಾಪಿಡ್ ಚೆಸ್ ಟೊರ್ನಾಮೆಂಟ್' ಅಕ್ಟೋಬರ್ 13ರಂದು ಬೆಳಿಗ್ಗೆ ಪಟ್ಟಣದ ಎಪಿಎಂಸಿ ಯಾರ್ಡ್ ರೈತ ಸಭಾಭವನದಲ್ಲಿ ಹಮ್ಮಿಕೊಂಡಿದೆ ಎಂದು ಕರಾಅಪವಿಗು ಸಂಘದ ಯಲ್ಲಾಪುರ ಸಮಿತಿ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ತಿಳಿಸಿದರು.
ಅವರು, ಬುಧವಾರ ತಮ್ಮ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶಾಸಕ ಶಿವರಾಮ ಹೆಬ್ಬಾರ್ ಚೆಸ್ ಟೂರ್ನಮೆಂಟನ್ನು ಉದ್ಘಾಟಿಸಲಿದ್ದು, ಕರಾಅಪವಿಗು ಸಂಘದ ಯಲ್ಲಾಪುರ ಸಮಿತಿ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಾರಾಯಣ ಎಂ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಯಲ್ಲಾಪುರದ ಸ್ಪೋರ್ಟ್ಸ್ ಕ್ಲಬ್ಬಿನಲ್ಲಿಯ ಎರಡುವರೆ ಎಕರೆ ಜಮೀನನ್ನು ತಾಲೂಕ ಕ್ರೀಡಾಂಗಣಕ್ಕೆ ನೀಡಿದ ಅಂದಿನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿದ್ದ ಪ್ರಕಾಶ್ ಮಾಲಶೇಟ, ಕಾರ್ಯದರ್ಶಿಯಾಗಿದ್ದ ಸುರೇಶ ಪೈ, ಸಮಾಜ ಸೇವಕ ಶಿವರಾಮ ಹೆಗಡೆ, ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಅನು ಕಾಮತ್ ಇವರಿಗೆ ನಾಗರಿಕ ಸನ್ಮಾನ ಹಾಗೂ ಹೆಸ್ಕಾಂ ಕಾರ್ಯನಿರತ ಪವರ್ ಮ್ಯಾನ್‌ಗಳಿಗೆ ಮತ್ತು ವರ್ಗಾವಣೆಗೊಂಡ ಹೆಸ್ಕಾಂ ಅಧಿಕಾರಿಗಳಿಗೆ ವೃತ್ತಿ ಸನ್ಮಾನ ಮಾಡಲಾಗುವುದು ಎಂದು ಉದ್ಘಾಟನೆಯ ಬಗ್ಗೆ ಮಾಹಿತಿ ನೀಡಿದರು.
ಸಂಜೆ 4:30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರಾಅಪವಿಗು ಸಂಘದ ಯಲ್ಲಾಪುರ ಸಮಿತಿ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ವಹಿಸಲಿದ್ದಾರೆ. ಹೆಸ್ಕಾಂ ವೃತ್ತ ಅಧಿಕ್ಷಕ ಇಂಜಿನಿಯರ್ ದೀಪಕ ಕಾಮತ, ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಎಂ ಟಿ ಅಪ್ಪಣ್ಣನವರ, ಯಲ್ಲಾಪುರ ತಹಶೀಲ್ದಾರ್ ಎಲ್ಲಪ್ಪ ಗೋಣೆಣ್ಣನವರ, ಯಲ್ಲಾಪುರ ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿಧಾನಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ ಬಹುಮಾನ ವಿತರಿಸಲಿದ್ದು, ಬಹುಮಾನ ವಿಜೇತರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಬೆಂಗಳೂರಿನ ಕೇಂದ್ರ ಕಾರ್ಯಕಾರಿ ಸಮಿತಿ ಕರಾಅಪವಿಗು ಸಂಘದ ಸದಸ್ಯ ಸಿದ್ದಾರ್ಥ ನಾಯ್ಕ ಹಾಗೂ ಬೆಂಗಳೂರಿನ ಕೇಂದ್ರ ಕಾರ್ಯಕಾರಿ ಸಮಿತಿ ಕರಾಅಪವಿಗು ಸಂಘದ ನಾಮ ನಿರ್ದೇಶಕ ಸದಸ್ಯ ನಾಗರಾಜ ಕುನ್ನೂರು ಉಪಸ್ಥಿತರಿರುವರು ಎಂದು ಮದ್ಗುಣಿ ಮಾಹಿತಿ ನೀಡಿದರು. ಮಧ್ಯಾಹ್ನ 3.30 ರಿಂದ 4.30 ರವರೆಗೆ ಮನೋಜ ಪಾಟೀಲ್ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ, ಸಂಜೆ 5:30ಕ್ಕೆ ಮಜಾ ಟಾಕೀಸ್ ಪ್ರಖ್ಯಾತಿಯ ಎರಡು ಗಿನ್ನಿಸ್ ದಾಖಲೆ, ಒಂಬತ್ತು ವಿಶ್ವ ದಾಖಲೆ ಹೊಂದಿರುವ 'ಯೋಗರತ್ನ' ತನುಶ್ರೀ ಉಡುಪಿಯವರ ತನು ಯೋಗ ಭೂಮಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ವೀಕ್ಷಣೆ ಉಚಿತವಾಗಿದೆ ಎಂದು ವೇಣುಗೋಪಾಲ ಮದ್ಗುಣಿ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಕರಾಅಪವಿಗು ಸಂಘದ ಸದಸ್ಯ ಸಯ್ಯದ್ ಮಕ್ಸೂದ್ ಇದ್ದರು.
ಈ ಸಂಖ್ಯೆಗೆ ಫೋನ್ ಫೇ ಮಾಡಿ ಹೆಸರನ್ನು (ರಿಜಿಸ್ಟ್ರೇಷನ್) ಇವರಲ್ಲಿ ರೂ.200.00ದೊಂದಿಗೆ ನೊಂದಣಿ ಮಾಡಿಸಿರಿ.
-ಆನಂದ ಸ್ವಾಮಿ -8762480128,
ರಾಮಚಂದ್ರ ಭಟ್ಟ -9481360128,
ವೇಣುಗೋಪಾಲ ಮದ್ಗುಣಿ -9448408602