
ಪ್ರಾಥಮಿಕ ವಿಭಾಗ:
ಬಾಲಕರ ವಿಭಾಗದಲ್ಲಿ ಮುವಾಜ್ ಖಾನ್ 100ಮೀ ಓಟ, 200 ಮೀ ಓಟ, ಉದ್ದ ಜಿಗಿತ ಪ್ರಥಮ ಸ್ಥಾನವನ್ನು ಪಡೆದು ಬಾಲಕರ ವೈಯಕ್ತಿಕ ವೀರಾಗ್ರಣಿಯಾಗಿರುತ್ತಾನೆ. ಅರ್ಷ ಶೇಖ್ 200 ಮೀ ಓಟ ತೃತೀಯ ಸ್ಥಾನ, ಶಿವಪ್ಪಾ ಕೇಸಾಪುರ 400 ಮೀ ಓಟ ಪ್ರಥಮ, 600 ಮೀ ಓಟ ಪ್ರಥಮ, ವಿವೇಕ ಮರಾಠಿ 400 ಮೀ ಓಟ ದ್ವಿತೀಯ, 600 ಮೀ ಓಟ ದ್ವಿತೀಯ, ಬಾಲಕರ 4 x 100ಮೀ ರೀಲೇ ಪ್ರಥಮ, ಖೊಖೊ ಪ್ರಥಮ, ಶೇಟಲ್ ಬ್ಯಾಡ್ಮಿಂಟನ್ ಪ್ರಥಮ, ಟೆಬಲ್ ಟೆನ್ನಿಸ್ ಪ್ರಥಮ, ಥ್ರೊ ಬಾಲ್ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಪ್ರಜ್ಞಾ ಗಾಂವಕರ ಗುಂಡು ಎಸೆತ ದ್ವಿತೀಯ, ಅಮೃತಾ ಕಣ್ಮನೂರ 400ಮೀ ಓಟ ದ್ವಿತೀಯ 600ಮೀ, ಓಟ ದ್ವಿತೀಯ, ಬಾಲಕಿಯರ 4 x 100ಮೀ ರೀಲೇ ದ್ವಿತೀಯ, ಶೇಟಲ್ ಬ್ಯಾಡ್ಮಿಂಟನ್ ಪ್ರಥಮ, ಟೆಬಲ್ ಟೆನ್ನಿಸ್ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಪ್ರೌಢಶಾಲಾ ವಿಭಾಗ:

ಬಾಲಕಿಯರ ವಿಭಾಗದಲ್ಲಿ ಕೃಷ್ಣವೇಣಿ ನಾಯ್ಕ 100ಮೀ ಓಟ ಮತ್ತು 200ಮೀ ಓಟ ಪ್ರಥಮ, ಉದ್ದ ಜಿಗಿತ ತೃತೀಯ, ಪ್ರಗತಿ ಶೆಟ್ಟಿ 200ಮೀ ಓಟ ದ್ವಿತೀಯ, 400 ಮೀ ಮತ್ತು ತ್ರಿವಿದ ಜಿಗಿತ ಪ್ರಥಮ, ತೇಜಸ್ವಿನಿ ಯಾಮಕೆ 800 ಮೀ ಓಟ ಪ್ರಥಮ, 1500 ಮೀ ಓಟ ದ್ವಿತೀಯ, ನಿರೀಕ್ಷಾ ನಾಯಕ ಉದ್ದ ಜಿಗಿತ, ಚಕ್ರ ಎಸೆತ ಪ್ರಥಮ, ನಿಧಿ ಯಾಜಿ 1500ಮೀ ಓಟ ಪ್ರಥಮ, 3000ಮೀ ಓಟ ಪ್ರಥಮ, ಬಾಲಕಿಯರು 4 x 100ಮೀ ರೀಲೇ ಪ್ರಥಮ, 4 x 400ಮೀ ರೀಲೇ ಪ್ರಥಮ, ಖೊಖೊ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಪ್ರಥಮ. ಬಾಲಕರ ವಿಭಾಗ: ಸಂದೇಶ ಜೊರೆ 200 ಮೀ ಓಟ ದ್ವಿತೀಯ, ಸಾಯಿರಾಮ್ ಡೊಯಿಪುಡೆ 400ಮೀ ಓಟ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಜಿ. ಎಂ. ತಾಂಡುರಾಯನ್ ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ರವಿಕುಮಾರ ಶಾನಭಾಗ, ಕಾರ್ಯದರ್ಶಿಗಳಾದ ರಾಜೇಂದ್ರಪ್ರಸಾದ ಬಿ ಭಟ್ಟ ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು , ಪ್ರಾಂಶುಪಾಲರಾದ ಆನಂದ ಹೆಗಡೆ, ಮುಖ್ಯೋಪಾಧ್ಯಾಯರಾದ . ಶೈಲಜಾ ಮಾಪ್ಸೇಕರ ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.
.
.
.