Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Thursday, 12 September 2024

ಕಟ್ಟಿಯವರಿಂದ ಹಾಸ್ಯ ಸಾಹಿತ್ಯದ ಮೂಲಕ ಜೀವನೋತ್ಸಾಹ : ಅರುಣಕುಮಾರ ಹಬ್ಬು

IMG-20240912-153336 ಯಲ್ಲಾಪುರ: ಹಾಸ್ಯ ಸಾಹಿತ್ಯದ ಮೂಲಕ ಜೀವನದಲ್ಲಿ ನಗುವಿನ ಮಹತ್ವವನ್ನು ತಿಳಿಸುತ್ತಿರುವ ಕೃತಿಕಾರ ಶ್ರೀರಂಗ ಕಟ್ಟಿ ಅವರು, ನಗುವು ಮಾಯವಾಗುತ್ತಿರುವ ಈ ಕಾಲದಲ್ಲಿ, ಮನದ ಬೇಸರವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಎಂದು ಸಾಹಿತಿ ಅರುಣಕುಮಾರ ಹಬ್ಬು ಹೇಳಿದರು. 
  ಅವರು ಗುರುವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತೃಭೂಮಿ ಸೇವಾ ಟ್ರಸ್ಟ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿ. ವೆಂಕಣ್ಣಾಚಾರ್ಯ ಕಟ್ಟಿ ಅವರ 'ಸಂದೇಶ ರಾಮಾಯಣ' ಮತ್ತು ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಅವರ 'ಬ್ಯಾಸರಕಿ ಬ್ಯಾಡೋ ನಗುವಾಗ' ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು."ಒತ್ತಡ ಮತ್ತು ಧಾವಂತದ ಸಂದರ್ಭದಲ್ಲಿ ನಗು ಅಪರೂಪವಾಗಿದೆ. ಬಿಗುವಿನ ಮೊಗದಲ್ಲಿ ನಗೆ ಅರಳಿಸುವ ಕೆಲಸ ಸಾಹಿತ್ಯದಿಂದ ಆಗಬೇಕು" ಎಂದು ಹೇಳಿದ ಅವರು, "ಮೊಬೈಲ್ ಕಾರಣದಿಂದ ಕುಟುಂಬಸ್ಥರಲ್ಲೇ ಪರಸ್ಪರ ಸಂವಹನ ಇಲ್ಲವಾಗಿದೆ. ಇದರಿಂದ ಏಕಾಂಗಿತನ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ, ಬದುಕಿನಲ್ಲಿ ಸಣ್ಣ ಖುಷಿಯನ್ನು ಅನುಭವಿಸುತ್ತ, ಆತ್ಮವಂಚನೆ ಇಲ್ಲದೇ ಲವಲವಿಕೆಗೆ ನಗುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಬೇಕು" ಎಂದು ಕರೆ ನೀಡಿದರು. IMG-20240912-142651 ವಿಶ್ರಾಂತ ಪ್ರಾಂಶುಪಾಲ ಮತ್ತು ಕೃತಿಕಾರ ಶ್ರೀರಂಗ ಕಟ್ಟಿ ಅವರು, "ಸಾಮಾಜಿಕ ಜಾಲತಾಣಗಳ ಮೂಲಕ ನಗೆ ಸಂದೇಶವನ್ನು ನಿರಂತರವಾಗಿ ಬಿತ್ತರಿಸಿದ್ದು, ಈಗ ಅದನ್ನು ಸೇರಿಸಿ 'ಬ್ಯಾಸರಕಿ ಬ್ಯಾಡೋ ನಗುವಾಗ' ಕೃತಿಯ ಮೂಲಕ ಓದುಗರಿಗೆ ನಗೆ ಹಂಚುವ ಪ್ರಯತ್ನ ಮಾಡಿದ್ದೇನೆ" ಎಂದು ತಿಳಿಸಿದರು. 
   ಸಾಹಿತಿ ವನರಾಗ ಶರ್ಮಾ ಅವರು ಅಧ್ಯಕ್ಷತೆ ವಹಿಸಿ, "ಸಾಹಿತ್ಯ ಓದುತ್ತ, ಬರೆಯುತ್ತ ಹೋದಂತೆ ಜೀವನದ ಧರ್ಮ, ಮರ್ಮ ಸಾರ್ಥಕತೆ ತಂದುಕೊಡಲು ಸಾಧ್ಯ. ಆ ನಿಟ್ಟಿನ ಪ್ರಯತ್ನ ಸಾಹಿತ್ಯಾಸಕ್ತರಿಂದ ಆಗಬೇಕು" ಎಂದು ಅಭಿಪ್ರಾಯಪಟ್ಟರು. IMG-20240912-142554 ಪ್ರಾಂಶುಪಾಲ ಡಾ. ಆರ್ ಡಿ ಜನಾರ್ಧನ ಅವರು, "ಮರದೆಲೆ ಚಿಗುರಿದ ಹಾಗೇ ಸಾಹಿತ್ಯ ಸುಲಲಿತವಾಗಿ ಸಹಜವಾಗಿ ಮೂಡಿ ಬರಬೇಕು" ಎಂದು ಹೇಳಿದರು. ಕಲಾವಿದ ಸತೀಶ ಯಲ್ಲಾಪುರ ಮತ್ತು ಪ್ರಾಂಶುಪಾಲ ದತ್ರಾತ್ರಯ ಗಾಂವ್ಕಾರ ಅವರು ಕೃತಿಗಳನ್ನು ಪರಿಚಯಿಸಿದರು. ಶರಾವತಿ ಶಿರ್ನಾಲಾ ಕಾವ್ಯ ಗಾಯನವನ್ನು ಮಾಡಿದರು. 
 ಕಸಾಪ ತಾಲೂಕಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಅವರು ಸ್ವಾಗತಿಸಿದರು. ವಿದ್ಯಾರ್ಥಿ ವೇದಾ ಭಟ್ಟ ಪ್ರಾರ್ಥಿಸಿದರು. ಪತ್ರಕರ್ತ ಸುಬ್ರಾಯ ಬಿದ್ರೆಮನೆ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಸವಿತಾ ನಾಯ್ಕ ಅವರು ವಂದಿಸಿದರು.