ಯಲ್ಲಾಪುರ : ಪಟ್ಟಣದ ಲಕ್ಷ್ಮೀನಾರಾಯಣ ವೆಂಕಟ್ರಮಣ ಮಠದಲ್ಲಿ ಮಂಗಳವಾರ ಅನಂತನೌಪಿ ಅಥವಾ ಅನಂತಮೂರ್ತಿ ವ್ರತವನ್ನು ಪ್ರತಿ ವರ್ಷದಂತೆ ಗೌಡ ಸಾರಸ್ವತ ಬ್ರಹ್ಮನ ಸಮಾಜದವರು ಇತರೆ ಸಮಾಜದವರೊಂದಿಗೆ ಸೇರಿಕೊಂಡು ವಿಜೃಂಭಣೆಯಿಂದ ಆಚರಿಸಿದರು.
ಹಿಂದೂ ಸಂಪ್ರದಾಯದಲ್ಲಿ ದೇವತೆಗಳ ಪೂಜೆ ಮತ್ತು ವ್ರತಗಳನ್ನು ಪವಿತ್ರ ಹಾಗೂ ಶ್ರದ್ಧೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಇಂತಹವದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವುದಾಗಿ ಕಾಣುವುದು "ಅನಂತನೋಪಿ" ಅಥವಾ "ಅನಂತಮೂರ್ತಿ ವ್ರತ". ಅನಂತನೋಪಿ ಎನ್ನುವುದು ಪ್ರಾಕೃತ ಭಾಷೆಯಲ್ಲಿ "ಅನಂತನೋಪಿ" ಎಂದರೆ ಪರಮಾತ್ಮನ ನಿರಂತರ ಸೇವೆ, ಶ್ರದ್ಧೆ, ಮತ್ತು ಭಕ್ತಿಯ ಸಂಕೇತವಾಗಿದೆ.
ಅನಂತನೋಪಿ ವ್ರತವು ಹಿಂದೂ ಧರ್ಮದ ಪುರಾಣಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಹಿಂದೂ ದೇವಾಲಯಗಳಲ್ಲಿ ವಿಶೇಷವಾಗಿ ಶ್ರೀ ವಿಷ್ಣು ದೇವನ ಆರಾಧನೆಗೆ ಈ ವ್ರತವನ್ನು ಆಚರಿಸಲಾಗುತ್ತದೆ. 'ಅನಂತ' ಎಂಬ ಶಬ್ದವು 'ಅಸೀಮ' ಅಥವಾ 'ಅಪಾರ' ಎಂದು ಅರ್ಥೈಸಬಹುದು, ಇದು ವಿಷ್ಣುವಿನ ಸಾಂಶೋಧಕ ಸ್ವರೂಪಕ್ಕೆ ಸೂಚನೆ. ಆಕಾಶ, ಭೂಮಿ, ಕಾಲ ಇವುಗಳ ಮಿತಿಯನ್ನು ಮೀರಿ, ಬುದ್ದಿಗೆ ಅತೀತನಾದ ಪ್ರಭುವಿಗೆ ಸಲ್ಲಿಸುವ ಪೂಜೆ ಇದಾಗಿದೆ.
ವೃತ ಅಥವಾ ಪೂಜೆಯನ್ನು ಪ್ರತಿ ವರ್ಷವೂ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು (ಅನಂತ ಚತುರ್ದಶಿ) ಆಚರಿಸಲಾಗುತ್ತದೆ. ಇದನ್ನು ವೈಷ್ಣವ ಸಂಪ್ರದಾಯದಲ್ಲಿ ಶ್ರೀಹರಿಯ ಅನಂತ ಶಕ್ತಿ ಮತ್ತು ಸದಾ ವಿಸ್ತಾರವಾಗಿರುವ ಸಹನೆ, ಸಹನಶೀಲತೆ ಹಾಗೂ ಕೃಪೆಗಾಗಿ ನಡೆಸಲಾಗುತ್ತದೆ.
ಅನಂತನೋಪಿ ಅಥವಾ ಅನಂತಮೂರ್ತಿ ವ್ರತದ ಆಚರಣೆ ದೇವಾಲಯ ಅಥವಾ ಮನೆಯ ಶುದ್ಧ ಸ್ಥಳದಲ್ಲಿ ವ್ರತಕ್ಕೆ ಸಿದ್ಧತೆ ಮಾಡುವುದು ಪೂಜಾ ವಿಧಾನದ ಪ್ರಮುಖ ಅಂಶಗಳಾಗಿವೆ. ಪೂಜಾ ವಿಧಿಯಲ್ಲಿ ಶ್ರೀಹರಿಯ ಪ್ರತಿಕೃತಿಯಾದ "ಅನಂತನೋಪಿ" ಅಥವಾ "ಅನಂತದಾರ" ಧಾರಣೆಯನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಇದು ಕೇವಲ ಆಧ್ಯಾತ್ಮಿಕ ಪೂಜೆ ಮಾತ್ರವಲ್ಲ, ಮಾನಸಿಕ ಮತ್ತು ದೈಹಿಕ ಶ್ರದ್ಧೆಗೂ ಸಂಬಂಧಿಸಿದಂತೆ ಕಾಣಬಲ್ಲದು. ವ್ರತದ ಪೂಜಾ ಸಮಯದಲ್ಲಿ ವಿವಿಧ ವೈಷ್ಣವ ಮಂತ್ರಗಳನ್ನು ಪಠಿಸುತ್ತಾರೆ. ಅನಂತನ ಶಕ್ತಿ, ಸಹನೆ ಮತ್ತು ಕೃಪೆಯ ಪ್ರಾರ್ಥನೆ ಮಾಡುತ್ತಾರೆ. ವ್ರತವನ್ನು ಪುರುಷರು, ಮಹಿಳೆಯರೂ ಸಹ ಭಕ್ತಿಯಿಂದ ಆಚರಿಸುತ್ತಾರೆ.
ಇಂತಹ ಪವಿತ್ರ ವ್ರತವನ್ನು ಆಚರಿಸುವುದರಿಂದ ಭಕ್ತರಿಗೆ ಆಧ್ಯಾತ್ಮಿಕ ಶ್ರೇಯಸ್ಸು ದೊರಕುವುದು ಎಂಬ ನಂಬಿಕೆ ಇದೆ. ಅನಂತನೋಪಿ ವ್ರತವು ದೇವರಲ್ಲಿರುವ ಸಂಪೂರ್ಣ ಶ್ರದ್ಧೆ, ಪಾಪ ಪತಿಹಾರ, ಭಕ್ತಿ, ಮತ್ತು ಶಾಂತಿಯ ಸಂಕೇತವಾಗಿದೆ. ಕಷ್ಟಗಳು, ಸಂಕಟಗಳು ಮತ್ತು ದುಃಖಗಳು ದೂರವಾಗುತ್ತದೆ ಎಂದು ನಂಬಿಕೆ ಹೊಂದಲಾಗಿದೆ.
ಗೌಡ ಸಾರಸ್ವತ ಬ್ರಹ್ಮಣ ಸಮಾಜದವರು ಯಾವ ಊರಿನಲ್ಲಿ ನೆಲೆಸಿ ಮಠ ಹೊಂದಿದ್ದಾರೆ, ಆ ಊರಿನ ಜನರೊಂದಿಗೆ ಸೇರಿ ಅನ್ನ ಸಂತರ್ಪಣೆ ಅನಂತಮೂರ್ತಿ ಪ್ರಸಾದ ವಿತರಣೆ ಮಾಡಲಾಗುತ್ತದೆ.
ಯಲ್ಲಾಪುರದಲ್ಲಿ ಗೌಡ ಸಾರಸ್ವತ ಬ್ರಹ್ಮಣ ಸಮಾಜದ ಅಧ್ಯಕ್ಷ ವಿನಾಯಕ ಪೈ ನೇತೃತ್ವದಲ್ಲಿ ಸದಸ್ಯರಾದ, ರವಿ ಶಾನಭಾಗ, ಶಿರೀಶ ಪ್ರಭು ಬಾಲಕೃಷ್ಣ ನಾಯಕ, ಮಾದವ ನಾಯಕ, ಉಲ್ಲಾಸ ಮಹಾಲೆ, ವೆಂಕಟೇಶ ಪೈ, ಆರ್ ವಿ ಪ್ರಭು, ಸದಾನಂದ ಶಾನಭಾಗ, ಉಲ್ಲಾಸ ಶಾನಬಾಗ, ರಾಜು ಬಾಳಗಿ, ನಂದನ ಬಾಳಗಿ, ನಾಗಾ ಪ್ರಭು, ಸಂತೋಷ ಶಾನಭಾಗ ಅನಂತನೋಪಿಯ ಅನ್ನ ಸಂತರ್ಪಣೆ ಪೂಜಾ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು,
ಆಚಾರ್ಯರಾದ ನಾರಾಯಣ ಪುರಾಣಿಕ ಪ್ರಮೋದ ಭಟ್ಟ ನೇತೃತ್ವದಲ್ಲಿ ಮಠದಲ್ಲಿ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಗಳು ನಡೆದವು.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಕರಾವಳಿ ಮೂಲ ನಿವಾಸಿಗಳು ನೌಕರರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ನೌಕರರು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಿದರು.