ಯಲ್ಲಾಪುರ: ಸಾರ್ವಜನಿಕ ಗಜಾನನೋತ್ಸವ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದ ದಿ. ದರ್ಶನ್ ಬಿಡೀಕರ್ ಹಾಗೂ ದಿ. ಯೋಗೇಶ ಹಿರೇಮಠ ಅವರ ಸವಿನೆನಪಿಗಾಗಿ ಯಲ್ಲಾಪುರದ ತಿಲಕ್ ಚೌಕ್ ಗಜಾನೋತ್ಸವ ಸಮಿತಿಯಿಂದ ಶನಿವಾರ ಸಂಜೆ 'ರಸಮಂಜರಿ ಕಾರ್ಯಕ್ರಮ' ಆಯೋಜಿಸಲಾಗಿದೆ.
j ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ಭಾಗವಹಿಸಿ, ತಮ್ಮ ಸಂಗೀತದ ಮೂಲಕ ಅಗಲಿದ ಮಿತ್ರದ್ವಯರಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಾಲಕೃಷ್ಣ ನಾಯಕ, ಶಿರೀಷ ಪ್ರಭು, ಕೃಷ್ಣಾ ನಾಯರ್, ಸದಾನಂದ ಶಾನಭಾಗ, ಮಾಲತೇಶ ಗೌಳಿ, ದತ್ತಾ ಬದ್ದಿ, ಮಾಧವ ನಾಯಕ, ಸುಧಾಕರ ಪ್ರಭು, ಗುರು ನಾಯ್ಕ, ಗಜಾನನ ನಾಯಕ, ಸಚೀನ ಕೇಕರೆ, ರವಿರಾಜ ಪ್ರಭು, ರಜತ ಬದ್ದಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
.
.
.