ಯಲ್ಲಾಪುರ : ಪಟ್ಟಣದ ನಾಯ್ಕನಕೆರೆಯ ದತ್ತ ಮಂದಿರದ ನೂತನ ಶಿಲಾಮಯ ದೇವಸ್ಥಾನಕ್ಕೆ ಅಡಿಪಾಯ ಮುಗಿದು , ಕಟ್ಟಡದ ಕೆತ್ತನೆಯ ಶಿಲಾನ್ಯಾಸವನ್ನು ಗುರುವಾರ ಗಣಪತಿ ಪೂಜೆಯ ಮೂಲಕ ನೆರವೇರಿಸಲಾಯಿತು.
ಸತಿಶ ಭಟ್ಟ ಗುಂಡ್ಯಾನಕೊಪ್ಪ ಇವರ ವೈದಿಕತ್ವದಲ್ಲಿ ಪೂಜೆ ನೆರವೇರಿಸಿ ಶಿಲಾಮಯ ಕಟ್ಟಡದ ಮೊದಲ ಕೆತ್ತನೆಯ ಕಲ್ಲನ್ನು ಇಡಲಾಯಿತು. ಈ ಸಂದರ್ಬದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪ್ರತಿನಿಧಿಗಳಾದ ಮಹೇಶ ಚಟ್ನಳ್ಳಿ, ಎಸ್.ವಿ.ಯಾಜಿ, ಸ್ತಳೀಯ ಪ್ರಮುಖರಾದ ಕೆ.ಟಿ.ಭಟ್ಟ, ಪ್ರಶಾಂತ ಹೆಗಡೆ, ಶಾಂತಾರಾಮ ಹೆಗಡೆ, ಹರಿಪ್ರಕಾಶ ಕೋಣೆಮನೆ, ಅರ್ಚಕ ಅಶೋಕ ಹೆಗಡೆ, ಸಿ.ಜಿ,.ಹೆಗಡೆ, ನಾಗರಾಜ ಮದ್ಗುಣಿ, ನರಸಿಂಹ ಗಾಂವ್ಕರ್, ನಾಗೇಶ ಯಲ್ಲಾಪುರಕರ್, ಅನಂತ ಬಾಂದೇಕರ್, ಸತೀಶ ದಾನಗೇರಿ ಮುಂತಾದವರಿದ್ದರು.
.
.
.