ವೀರಭದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನೆ
ಯಲ್ಲಾಪುರ: ತಾಲೂಕಿನ ಹೊನ್ನಗದ್ದೆಯ ವೀರಭದ್ರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದಂದು ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.
ದೂರದ ಊರುಗಳಿಂದ ಭಕ್ತರು ಬಂದು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಅರ್ಚಕ ರಾಮಚಂದ್ರ ಭಟ್ಟರು ಪೂಜಾ ಕಾರ್ಯಕ್ರಮ ನಡೆಸಿದರು. ಭಗವದ್ಗೀತೆ ಪಠಣ, ಶಂಕರಾಚಾರ್ಯರ ಸ್ತುತಿ, ದೇವಿ ಸ್ತುತಿ, ಶಿವಾರಾಧನೆ ಶ್ಲೋಕ, ದಾಸಸಾಹಿತ್ಯದ ಕೀರ್ತನೆಗಳನ್ನು ಮಹಿಳೆಯರು ಪ್ರಸ್ತುತಪಡಿಸಿದರು.
ಭಜನಾ ಕಾರ್ಯಕ್ರಮದಲ್ಲಿ ಭಾರತಿ ಭಟ್ಟ, ದುಂಢಿ, ಮಹಾಲಕ್ಷ್ಮಿ ಗಾಂವ್ಕರ ಸಾಂಬೇಮನೆ, ಶಾರದಾ ಗಾಂವ್ಕರ, ಸೀತಾ ಭಟ್ಟ, ಮಂಗಲಾ ಹೆಗಡೆ, ನೇತ್ರಾವತಿ ಭಟ್ಟ, ಭಾಗೀರಥಿ ಭಟ್ಟ, ಲಕ್ಷ್ಮೀ ಭಟ್ಟ ಸೇರಿದಂತೆ ಇತರ ಸದಸ್ಯರು ಪಾಲ್ಗೊಂಡಿದ್ದರು. ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು.
ಹಿಲ್ಡಾ ಫರ್ನಾಂಡಿಸ್ ಅವರ ಬೀಳ್ಕೊಡುಗೆ
ಯಲ್ಲಾಪುರ: ಮದರ ತೇರೆಜಾ ಶಾಲೆಯ ಹಿಲ್ಡಾ ಫರ್ನಾಂಡಿಸ್ ಅವರು 21 ವರ್ಷಗಳ ಸೇವೆ ಮುಗಿಸಿ ನಿವೃತ್ತರಾದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಫಾದರ್ ಪೀಟರ್ ಕನೇರಿಯೋ, ಫಾದರ್ ರೊಯ್ಯಸ್ಟನ ಗೊನ್ಸಾಲ್ವಿಸ್, ಸಿಸ್ಟರ್‌ಗಳು ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಿಕ್ಷಕ ಲೀಲೇಶ್ ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಆಸಿಮ್ ಆಸಿಫ್ ಅಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಯಲ್ಲಾಪುರ: ಮದರ ತೇರೆಜಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಆಸಿಮ್ ಆಸಿಫ್ ಅಲಿ, ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢಶಾಲೆ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಆಸಿಮ್ ಶಾಲೆಗೆ ಕೀರ್ತಿ ತಂದಿದ್ದಾರೆ.