Adv

news21 ‌ ‌YELLAPURNews prakatane --------- ‌ kumar Oct9to15 ‌ ‌ ‌ ‌ IMG-20241009-195526

Friday, 13 September 2024

ದೇವಿ ಮೈದಾನ ಗಣೇಶ ಮೂರ್ತಿಗೆ ಅಡಿಷನಲ್ ಎಸ್ ಪಿ ಎಂ ಜಗದೀಶರಿಂದ ಪೂಜೆ, ಅನ್ನ ಪ್ರಸಾದ ಸ್ವೀಕಾರ

IMG-20240913-173951 IMG-20240913-173730 ಯಲ್ಲಾಪುರ : ಪಟ್ಟಣದ ಶ್ರೀದೇವಿ ಮೈದಾನ ಗಜಾನನೋತ್ಸವ ಸಮಿತಿ, 42ನೇ ವರ್ಷದ ಗಜಾನನೋತ್ಸವ ವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದೆ. ಹತ್ತು ದಿನಗಳ ಕಾಲ ಗಣೇಶ ನನ್ನ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ ಈ ವರ್ಷ ಪ್ರತಿದಿನ ಅನ್ನ ಸಂತರ್ಪಣೆ ನಡೆಸಲಾಗಿದೆ. ಪ್ರತಿದಿನ 600 ರಿಂದ 1000 ವರೆಗೆ ಭಕ್ತರು ಆಗಮಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ. 
   ಯಲ್ಲಾಪುರದವರೇ ಆದ ಅಡಿಷನಲ್ ಎಸ್ ಪಿ ಎಂ ಜಗದೀಶ ಶುಕ್ರವಾರ ದೇವಿ ಮೈದಾನ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಆಗಮಿಸಿದ ಭಕ್ತರಿಗೆ ಅನ್ನಪ್ರಸಾದವನ್ನು ವಿತರಿಸಿದರು ಹಾಗೂ ಸ್ವೀಕರಿಸಿದರು. ರಾಜ್ಯದ ಯಾವುದೇ ಕಡೆ ಸೇವೆ ಸಲ್ಲಿಸುತ್ತಿರುವಾಗಲು ಕೂಡ ಎಂ ಜಗದೀಶ ಕುಟುಂಬದವರೊಂದಿಗೆ ಗಣೇಶ ಚತುರ್ಥಿ ಅಂದು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಎಸ್ಪಿ ಆಗಿರುವುದರಿಂದ ಯಲ್ಲಾಪುರಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದ್ದಾರೆ. 
    ಪ್ರತಿದಿನ ಗಣಹವನ, ಪ್ರತಿನಿತ್ಯ ಅನ್ನಸಂತರ್ಪಣೆ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡಿರುವ ಈ ಸಮಿತಿಯು ಯಲ್ಲಾಪುರದ ಇತಿಹಾಸದಲ್ಲಿಯೇ ಗಮನಾರ್ಹ ಸ್ಥಾನ ಪಡೆದಿದೆ. 
    ಪ್ರಸಕ್ತ 42ನೇ ಗಜಾನನೋತ್ಸವಕ್ಕೆ ಮುನ್ನಡೆಯುತ್ತಿರುವ ಪದಾಧಿಕಾರಿಗಳಾದ ಅಧ್ಯಕ್ಷ ಗಣೇಶ ಪತ್ತಾರ್, ಗೌರವಾಧ್ಯಕ್ಷ ಉಲ್ಲಾಸ ಪ್ರಭು, ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ, ಸಹ ಕಾರ್ಯದರ್ಶಿಗಳಾದ ಮಾರುತಿ ಎಂ ನಾಯ್ಕ, ರವಿ ಭಜಂತ್ರಿ, ಪ್ರಮುಖರಾದ ಪುಂಡಲೀಕ ಶೆಟ್ಟಿ, ವೆಂಕಟೇಶ್ ರಾಯ್ಕರ, ಗುರುರಾಜ್ ಕುರ್ಡೇಕರ, ಅಮಿತ್ ಉದಯ ರೇವಣಕರ, ವಿಜಯಶಂಕರ ಜಿ ನಾಯಕ, ಸಚಿನ ಶಾನಭಾಗ, ಪ್ರಶಾಂತ ದುರಂದರ, ಹನುಮಂತ ನೇರಲಗಿ, ಸೂರಜ ಶೆಟ್ಟಿ, ಪ್ರವೀಣ್ ಪಾಯದೆ, ಅಮೃತ ಬದ್ದಿ, ನಯನ ಇಂಗಳೆ, ವಿಶ್ವೇಶ್ವರ ಹೆಬ್ಬಾರ್ ಅಲೇಪಾಲ್, ಸುಬ್ರಾಯ ಶೆಟ್ಟಿ, ನಾಗೇಶ ರಾಯ್ಕರ, ರವಿ ಎಂ ಶೆಟ್ಟಿ, ಪ್ರೇಮಾನಂದ ಭಂಡಾರಿ, ಅರ್ಚಕರಾದ ದತ್ತಾತ್ರೇಯ ಭಟ್ ಸಬಾಹಿತಮನೆ, ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಇದ್ದರು. 
 ಕಾರ್ಯಕ್ರಮಗಳು : 
 ಇಂದು ಶುಕ್ರವಾರ ಸಂಜೆ, 6.30 ಕ್ಕೆ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಮಾಗೋಡ ಇವರಿಂದ ತಾಳಮದ್ದಲೆ- ಸುಧನ್ವಾರ್ಜುನ ನಡೆಯಲಿದೆ. ಸೆ.14 ಶನಿವಾರ ಸಂಜೆ 6.30 ಕ್ಕೆ, ಪ್ರಸಿದ್ಧ ಕಲಾವಿದರಿಂದ ಗಾನ ವೈಭವ, ಸೆ.15, ರವಿವಾರ ಸಂಜೆ 6.30 ಕ್ಕೆ ಛದ್ಮವೇಷ ಹಾಗೂ ಮುಕ್ತ ಅಭಿನಯ ಗೀತೆ ಸ್ಪರ್ಧೆ ಸ್ಪೋರ್ಟ್ಸ್ ಕ್ಲಬ್ ಯಲ್ಲಾಪುರ ಹಾಗೂ ದೇವಿ ಮೈದಾನ ಸಾರ್ವಜನಿಕ ಸಮಿತಿಯಿಂದ ಬಹುಮಾನ ವಿತರಣೆ, ಸೇ .16 ರಂದು ಭವ್ಯ ಮೆರವಣಿಗೆ ಮೂಲಕ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. 

 ಬೆಂಗಳೂರು ಪರ್ತಗಾಳಿ ಜೀವೋತ್ತಮ ಮಠಕ್ಕೆ ಶಾಸಕ ಹೆಬ್ಬಾರ್ ಭೇಟಿ IMG-20240913-173151 
ಯಲ್ಲಾಪುರ /ಬೆಂಗಳೂರು : ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ಶ್ರೀಕ್ಷೇತ್ರ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಬೆಂಗಳೂರಿನ ಬಸವನಗುಡಿಯ ಶಾಖಾ ಮಠಕ್ಕೆ ಭೇಟಿ ನೀಡಿದರು. 
   ಪವಿತ್ರ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಕ್ಷೇತ್ರ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರನ್ನು ಭೇಟಿಯಾಗಿ ದಿವ್ಯಾಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಕಮಲಾಕರ ನಾಯ್ಕ ಇತರರು ಇದ್ದರು. 
.
.
.