ಯಲ್ಲಾಪುರ: ಜಿಲ್ಲಾ ಪಂಚಾಯತ್, ಜಿಲ್ಲಾ ವಯಸ್ಕ ಶಿಕ್ಷಣ ಕಾರ್ಯಾಲಯ, ಡಯಟ್ ಕುಮಟಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಯಲ್ಲಾಪುರ ಪಟ್ಟಣದ ನೂತನನಗರ ಜಡ್ಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಮಾತನಾಡಿ, ಸಾಕ್ಷರತಾ ಕೇಂದ್ರಗಳಲ್ಲಿ ಕಲಿತ ಅಕ್ಷರ, ಓದು, ಬರಹ ಮತ್ತು ಲೆಕ್ಕಾಚಾರಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಯಶಸ್ವಿಯಾಗಲೆಂದು ನವಸಾಕ್ಷರರಿಗೆ ಕಿವಿ ಮಾತು ಹೇಳಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ನರ್ಮದಾ ನಾಯ್ಕ, “ವಯಸ್ಕರಾದ ನೀವು ಈ ವಯಸ್ಸಿನಲ್ಲಿಯೂ ಓದು, ಬರಹ ಮತ್ತು ಲೆಕ್ಕಾಚಾರಗಳನ್ನು ಕಲಿತಿರುವುದು ಪ್ರಶಂಸೆನೀಯ. ನಿಮ್ಮ ಕಲಿಕಾ ಉತ್ಸಾಹಕ್ಕೆ ಅಭಿನಂದನೆಗಳು” ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಪಾಟೀಲ್, ಪಟ್ಟಣ ಪಂಚಾಯತದ ಉಪಾಧ್ಯಕ್ಷ ಅಮಿತ ಅಂಗಡಿ, ಸಿ.ಆರ್.ಪಿ ಎಸ್ ವಿ ವೆರ್ಣೇಕರ್ ಅವರು ಮಾತನಾಡಿದರು.
ಸಾಕ್ಷರತಾ ಬೋಧಕಿಯರಾದ ಸುಧಾ ಬಾವಿ, ವೀಣಾ ಜಡರಾಮ ಕುಂಡಿ, ಮೀನಾಜ ಶೇಖ್ ಮತ್ತು ನಸರಿನ ಬಾನು ಶೇಖ್ ಅವರನ್ನು ಸನ್ಮಾನಿಸಿ, ನವಸಾಕ್ಷರರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಬೋಧಕಿಯರಾದ ಸುಧಾ ಪ್ರಾರ್ಥಿಸಿದರು. ಬಿ.ಆರ್.ಸಿ ಸಮನ್ವಯಾಧಿಕಾರಿ ಸಂತೋಷಕುಮಾರ ಜಿಗಳೂರ ಸ್ವಾಗತಿಸಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ದಿಲೀಪ ದೊಡ್ಮನಿ ಪ್ರಾಸ್ತಾವಿಕಗೈದರು. ಬಿ.ಐ.ಇ.ಆರ್.ಟಿ, ಎಂ ಎ ಬಾಗೇವಾಡಿ ಮತ್ತು ಸಂಗಡಿಗರು ಸಾಕ್ಷರತಾ ಗೀತೆ ಹಾಡಿದರು. ಕೊನೆಗೆ ಸಿ.ಆರ್.ಪಿ ಚಂದ್ರಹಾಸ ನಾಯ್ಕ ವಂದಿಸಿದರು.
.
.
.