ಯಲ್ಲಾಪುರ : ಕಳೆದ ಮೂರು ತಿಂಗಳಿಂದ ಯಲ್ಲಾಪುರದ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ್ ಭಟ್ ಅವರು ತಮ್ಮ ಮೂಲ ಸ್ಥಾನಕ್ಕೆ ನಿಯೋಜಿತಗೊಂಡು ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನದಲ್ಲಿ ಕಲಘಟಗಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಗೊನೆಣ್ಣವರ ಶುಕ್ರವಾರ ಅಶೋಕ ಭಟ್ಟವರಿಂದ ಯಲ್ಲಾಪುರ ತಹಶೀಲ್ದಾರ್ ಅಧಿಕಾರ ಪದಬಾರ ವಹಿಸಿಕೊಂಡರು. ಕಳೆದ ಮೂರು ತಿಂಗಳಿಂದ ಯಲ್ಲಾಪುರದ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಭಟ್ ಅವರು, ಕಂದಾಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಬಹಳಷ್ಟು ಆಡಳಿತ ಸುಧಾರಣೆಗಳನ್ನು ತಂದಿದ್ದರು. ಸಕ್ರಿಯವಾಗಿ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದ ಅವರಿಗೆ ಯಲ್ಲಾಪುರದ ಜನತೆ ಮೆಚ್ಚಿಕೊಂಡಿದ್ದರು. ಇದೀಗ ತಮ್ಮ ಮೂಲ ಸ್ಥಾನವಾದ ಕುಮಟಾ ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಹುದ್ದೆಗೆ ಪುನಃ ಮರಳಿದ್ದಾರೆ.
. ಕಲಘಟಗಿ ತಹಶೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿದ್ದ ಯಲ್ಲಪ್ಪ ಗೊನೆಣ್ಣವರ ಕಲಘಟಗಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಜನರಲ್ಲಿ ಅಪಾರವಾದ ವಿಶ್ವಾಸವನ್ನು ಗಳಿಸಿಕೊಂಡಿದ್ದರು ಎನ್ನುವುದು ತಿಳಿದುಬಂದಿದೆ.
. ಶುಕ್ರವಾರ ಸಂಜೆ ಸರಕಾರದ ಆದೇಶದಂತೆ ತಹಶೀಲ್ದಾರ ಯಲ್ಲಾಪುರ ಹುದ್ದೆಗೆ ಹೊಸದಾಗಿ ಪ್ರಭಾರ ವಹಿಸಿದ ಯಲ್ಲಪ್ಪ ಗೊನೆಣ್ಣವರರವರಿಗೆ, ನಿಕಟ ಪೂರ್ವ ತಹಶೀಲ್ದಾರ ಆದ ಅಶೋಕ್ ಭಟ್ ಸರ್ ರವರು ಅಧಿಕಾರ ಹಸ್ತಾಂತರ ಮಾಡಿದರು.