ಯಲ್ಲಾಪುರ : ಸೆಪ್ಟೆಂಬರ್ 11ರಂದು ಯಲ್ಲಾಪುರದ ತಾಲ್ಲೂಕು ಕ್ರೀಡಾಂಗಣ ನಡೆದ ಆನಗೋಡ ವಲಯಮಟ್ಟದ ಕ್ರೀಡಾಕೂಟದಲ್ಲಿ ಆನಗೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಭೂಮಿಕಾ ಗೌಡ (100ಮೀ ಓಟ ಪ್ರಥಮ, 200ಮೀ ಓಟ ಪ್ರಥಮ, ಉದ್ದ ಜಿಗಿತ ಪ್ರಥಮ, ರಿಲೇ ಪ್ರಥಮ ಹಾಗೂ ವೈಯಕ್ತಿಕ ವಿರಾಗ್ರಾಣಿ)
ಅಂಕಿತಾ ಭಟ್ಟ (600ಮೀ ಓಟ ಪ್ರಥಮ, ಎತ್ತರ ಜಿಗಿತ ಪ್ರಥಮ ಹಾಗೂ ರಿಲೇ ಪ್ರಥಮ)
ಶ್ರೇಯಾ ರಮಕಾಂತ್ ನಾಯ್ಕ (ಯೋಗ ದ್ವಿತೀಯ ಹಾಗೂ ರಿಲೇ ಪ್ರಥಮ)
ಸಂಜನಾ ಗೌಡ ( 200ಮೀ ಓಟ ದ್ವಿತೀಯ ಹಾಗೂ ರಿಲೇ ಪ್ರಥಮ)
ಆಕಾಶ್ ನಾಗೇಂದ್ರ ಭಟ್ಟ (ಯೋಗ ಚತುರ್ಥ)
ಬಾಲಕಿಯರ ವಾಲಿಬಾಲ್ ಪ್ರಥಮ, ಬಾಲಕರ ವಾಲಿಬಾಲ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಒಟ್ಟೂ 9 ಪ್ರಥಮ, 2 ದ್ವಿತೀಯ ಹಾಗೂ ಒಂದು ಚತುರ್ಥ ಸ್ಥಾನ ಹಾಗೂ ಹೆಣ್ಣು ಮಕ್ಕಳ ವೈಯಕ್ತಿಕ ವಿರಾಗ್ರಣಿ
ಗುಂಪು ಆಟದಲ್ಲಿ ಒಂದು ಪ್ರಥಮ ಮತ್ತು ಒಂದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಇವರಿಗೆ ಶಾಲೆಯ ಎಸ್.ಡಿ.ಎಂ. ಸಿ ಅಧ್ಯಕ್ಷ ನಾಗೇಂದ್ರಭಟ್ಟ ಹಾಗೂ ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕಿ ಸವೀತಾ ಹೆಗಡೆ ಶಿಕ್ಷಕರಾದ ಪ್ರತಿಭಾ ನಾಯ್ಕ, ಮಾರುತಿ ಆಚಾರಿ, ಸೌಮ್ಯಶ್ರೀ ಹಾನಗಲ್ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.
.
.
.