ಯಲ್ಲಾಪುರ: ಚಂದಗುಳಿ ಗ್ರಾಮದ ಶ್ರೀ ಸಿದ್ಧಿವಿನಾಯಕ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಪತ್ತಿನ ಸಹಕಾರಿ ಸಂಘ ನಿಯಮಿತದ ವಾರ್ಷಿಕ ಸರ್ವಸದಸ್ಯ ಸಭೆ ಮಂಗಳವಾರ ನಡೆಯಿತು. ಶಾಸಕರಾದ ಶಿವರಾಮ ಹೆಬ್ಬಾರ್ ಅವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ, ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಸ್.ಕೆ ಭಾಗ್ವತ್, ಉಪಾಧ್ಯಕ್ಷರಾದ ರಾಮಾ ಭಾಗ್ವತ್, ಗ್ರಾಮ ಪಂಚಾಯತ ಅಧ್ಯಕ್ಷರಾದ ಶಿಲ್ಪಾ ನಾಯ್ಕ, ಹಾಗೂ ಸ್ಥಳೀಯ ಮುಖಂಡರಾದ ಆರ್.ಎಸ್. ಭಟ್ ಉಪಸ್ಥಿತರಿದ್ದರು. ಸಹಕಾರಿ ಸಂಘದ ನಿರ್ದೇಶಕರು, ಸದಸ್ಯರು ಮತ್ತು ಗ್ರಾಹಕರು ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.
.
.