ಯಲ್ಲಾಪುರ: ಸಮಾಜದ ಎಲ್ಲಾ ವರ್ಗದ ಪ್ರತಿಭಾವಂತರಿಗೆ ಪುರಸ್ಕಾರ ನೀಡುವ ಮೂಲಕ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಸ್ಥೆ ಆದರ್ಶ ಪ್ರದರ್ಶಿಸಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಪ್ರಶಂಸಿಸಿದರು.
ಸೆ.1 ರಂದು ಟಿಎಂಎಸ್ ಸಭಾಭವನದಲ್ಲಿ ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ನಿವೃತ್ತ ನೌಕರರ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವಿಕೇಂದ್ರಿಕರಣ ಪಂಚಾಯತ ರಾಜ್ಯ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ್ ಅಶೋಕ್ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಆರ್. ಹೆಗಡೆ, ಆರಕ್ಷಕ ಉಪನಿರೀಕ್ಷಕ ನಿರಂಜನ ಹೆಗಡೆ ಮಾತನಾಡಿದರು,
ಟಿಎಂಎಸ್ ಅಧ್ಯಕ್ಷ ಎನ್. ಕೆ. ಭಟ್ ಅಗ್ಗಾಶಿಕುಂಬ್ರಿ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ, ನಿವೃತ್ತ ಅಧಿಕಾರಿ ವಿ. ಎಂ. ಭಟ್, ಪ್ರತಿಭಾವಂತ ವಿದ್ಯಾರ್ಥಿ ರವಿಕಿರಣ ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಆರ್ ಭಟ್ ಉಪಸ್ಥಿತರಿದ್ದರು.
ಹವ್ಯಕ ನೌಕರರ ಸಂಘದ ಅಧ್ಯಕ್ಷ ಡಿ. ಜಿ. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಮ್ಮಚಗಿ ಪಾಠಶಾಲಾ ವಿದ್ಯಾರ್ಥಿ ಗಣಪತಿ ಭಟ್ ವೇದಘೋಷ ಪಠಿಸಿದರು. ಸಮೃದ್ಧಿ ಭಾಗ್ವತ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೇ ಮುಕ್ತಾಶಂಕರ್ ಸ್ವಾಗತಿಸಿದರು. ಶಿಕ್ಷಕರಾದ ಸಣ್ಣಪ್ಪ ಭಾಗ್ವತ್, ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಧರ ಹೆಗಡೆ ವಂದಿಸಿದರು.