ಯಲ್ಲಾಪುರ : ಇತ್ತೀಚೆಗೆ ನಡೆದ ಯಲ್ಲಾಪುರ ತಾಲೂಕಾ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಒಟ್ಟು 17 ಪ್ರಥಮ, 16 ದ್ವಿತೀಯ ಮತ್ತು 10 ಕ್ರೀಡೆಗಳಲ್ಲಿ ತೃತೀಯ ಸ್ಥಾನಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಶಟಲ್ ಬ್ಯಾಡ್ಮಿಂಟನ್, ಟೆನಿಕಾಯ್ಟ್, ಚೆಸ್, ಯೋಗ, ಗುಡ್ಡಗಾಡು ಓಟ, 100 ಮೀ ಹರ್ಡಲ್ಸ್‍ಗಳಲ್ಲಿ ಪ್ರಥಮ ಸ್ಥಾನ, ಚಕ್ರ ಎಸೆತ, ಹ್ಯಾಮರ್, ವಾಲಿಬಾಲ್, ಥ್ರೋಬಾಲ್, ಖೊ-ಖೊ, 4*100ಮೀ ರಿಲೇ, 100, 1500ಮೀ ಓಟಗಳಲ್ಲಿ ದ್ವಿತೀಯ, 3000ಮೀ , ಲಾಂಗ್‍ಜಂಪ್, ಟ್ರಿಪ್ಪಲ್ ಜಂಪ್‍ಗಳಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ, 4100ಮೀ ರಿಲೇ, 4400 ರಿಲೇ, 100ಮೀ ಓಟ, ಲಾಂಗ್ ಜಂಪ್, ಯೋಗ, ಚೆಸ್, ಟೇಬಲ್ ಟೆನ್ನಿಸ್ ಮತ್ತು ಶಟಲ್ ಬ್ಯಾಡ್ಮಿಂಟನ್‍ಗಳಲ್ಲಿ ಪ್ರಥಮ ಸ್ಥಾನ , 1500ಮೀ ಓಟ, 100 ಮೀ ಹರ್ಡಲ್ಸ್, ಥ್ರೋಬಾಲ್, ಕಬ್ಬಡ್ಡಿ, ಖೊ-ಖೊ, ಟೆನ್ನಿಕಾಯ್ಟ್, ಬಾಲ್ ಬ್ಯಾಡ್ಮಿಂಟನ್‍ಗಳಲ್ಲಿ ದ್ವಿತೀಯ ಹಾಗೂ 100ಮೀ, 200ಮೀ, 3000ಮೀ ಓಟ, 5000ಮೀ ನಡಿಗೆ, 100ಮೀ ಹರ್ಡಲ್ಸ್, ಜಾವಲಿನ್‍ಗಳಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ರವಿಕುಮಾರ ಲಕ್ಷ್ಮಣ ಶಾನಭಾಗ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಬಿ ಭಟ್ಟ ಹಾಗೂ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು, ಕಾಲೇಜಿನ ಪ್ರಾಂಶುಪಾಲ ಆನಂದ ಹೆಗಡೆ ಮತ್ತು ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.