Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Saturday, 7 September 2024

ಅರಬೈಲ್ ಗಣೇಶ ಮೂರ್ತಿಗೆ ಶಾಸಕರಿಂದ ವಿಶೇಷ ಪೂಜೆ : ಕ್ಷೇತ್ರದ ಒಳಿತಿಗಾಗಿ ಪ್ರಾರ್ಥನೆ

IMG-20240907-171926ಯಲ್ಲಾಪುರ: ಶಾಸಕರಾದ ಶಿವರಾಮ ಹೆಬ್ಬಾರ್ ಅವರು ಸೆಪ್ಟೆಂಬರ್ 7ರಂದು ಅರಬೈಲ್ ಗ್ರಾಮದಲ್ಲಿ ನಡೆದ ಗಣೇಶ ಚತುರ್ಥಿ ಉತ್ಸವದ ಅಂಗವಾಗಿ, ಸ್ಥಳೀಯ ಸಾರ್ವಜನಿಕ ಗಜಾನೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಿರುವ ಶ್ರೀ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಾಗೂ ಜನರ ಶ್ರೇಯೋಭಿವೃದ್ಧಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. 
     ಗಣೇಶ ಚತುರ್ಥಿ ಯಲ್ಲಾಪುರದ ಜನತೆಯ ಹೃದಯಕ್ಕೆ ಹತ್ತಿರವಾದ ಹಬ್ಬವಾಗಿದ್ದು, ಗ್ರಾಮೀಣ ಮಟ್ಟದಿಂದ ಪಟ್ಟಣವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷವೂ ಅರಬೈಲ್ ಗ್ರಾಮದ ಜನರು ಸಹಭಾಗಿಯಾಗಿ, ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಸಮಾಜದ ಪುಣ್ಯಾರ್ಥವಾಗಿ ಗಣೇಶನ ಪ್ರತಿಷ್ಠಾಪಿಸಿದ್ದಾರೆ. 
      ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಶಾಸಕರು ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಅವರೊಂದಿಗೆ ಮಾತನಾಡಿ, ವಿವಿಧ ಹಿನ್ನಲೆಗಳಲ್ಲಿ ನಡೆಯುತ್ತಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. IMG-20240907-171904 ಅರಬೈಲ್ ಗ್ರಾಮವು ಯಲ್ಲಾಪುರದ ಪ್ರಮುಖ ಗ್ರಾಮಗಳಲ್ಲಿ ಒಂದಾಗಿದ್ದು, ಶಾಸಕರ ನಿವಾಸವೂ ಇದೇ ಗ್ರಾಮದಲ್ಲಿದೆ. ಈ ಊರಿನಲ್ಲಿ ಪ್ರತಿವರ್ಷವೂ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ಗ್ರಾಮದ ಅಭಿವೃದ್ಧಿ, ಆರೋಗ್ಯ, ಸಮೃದ್ಧಿ ಕೋರಿ ಗಣೇಶ ಮೂರ್ತಿಯನ್ನು ಸಾರ್ವಜನಿಕ ಗಜಾನೋತ್ಸವ ಸಮಿತಿಯ ನೇತೃತ್ವದಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. IMG-20240907-171829 ಮುಂದೆ ಇದೇ ವೇದಿಜೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತಿಗೀತೆಗಳು ಹಾಗೂ ವಿವಿಧ ಕಲಾ ಪ್ರದರ್ಶನಗಳಿಂದ ಸ್ಥಳೀಯರಿಗೆ ಮನೋರಂಜನೆ ಹಮ್ಮಿಕೊಳ್ಳಾಲಾಗಿದೆ. ಶಿವರಾಮ ಹೆಬ್ಬಾರ್ ಪೂಜೆ ಸಲ್ಲಿಅಉವ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಹಿಳಾ ಸಂಘಗಳ ಪ್ರಮುಖರು, ಶಾಲೆಯ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಇದ್ದರು. .