ಯಲ್ಲಾಪುರ: ತಾಲೂಕಿನ ಪ್ರಮುಖ ಜೀವವೈವಿಧ್ಯ ತಾಣಗಳಾದ ಹುತ್ಕಂಡದ ಸೀತಾ ಅಶೋಕವನ, ಸಹಸ್ರಳ್ಳಿಯ ಮುಂಡಿಗೆಕೆರೆ, ಕರಿಯವ್ವನಗುಂಡಿಯ ಪಾರಂಪರಿಕ ಬೀಟೆ ವೃಕ್ಷ ಮತ್ತು ದೇಹಳ್ಳಿ ಕಾಡಿನ ಅಪರೂಪದ ಮರದರಶಿಣ ಬಳ್ಳಿಯನ್ನು ಸಂರಕ್ಷಣೆ ಮಾಡುವುದು, ಅವುಗಳ ಮಹತ್ವವನ್ನು ಸಾರುವುದು, ಹಾಗೂ ಅವುಗಳ ಉಪಯೋಗವನ್ನು ವ್ಯಕ್ತಗೊಳಿಸುವ ಉದ್ದೇಶದಿಂದ ತಾಲೂಕಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ತಂಡ ಮಂಗಳವಾರ ಈ ಸ್ಥಳಗಳಿಗೆ ಭೇಟಿ ನೀಡಿತು.
ಚಂದಗುಳಿ ಪಂಚಾಯತ ಆವರಣದಲ್ಲಿ ನಡೆದ ಸಮಾಲೋಚನೆಗೆ ಜೀವವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಚಾಲನೆ ನೀಡಿದರು. ನಂತರ ಮಾತನಾಎಇದ ಅವರು, ರಾಜ್ಯದಲ್ಲೇ ಅಪರೂಪವಾದ ಮರದರಶಿಣ ಬಳ್ಳಿಯನ್ನು ಉಳಿಸುವ ಕುರಿತು ಯೋಜನೆ ರೂಪಿಸಬೇಕು. ಈಗಾಗಲೇ ಕೈಗಾ ನರೇಂದ್ರ ತಂತಿ ಮಾರ್ಗದಿಂದ ಹಲವು ಭಾಗಗಳು ನಾಶವಾಗಿವೆ. ಇನ್ನುಳಿದ ಭಾಗಗಳನ್ನು ಉಳಿಸಲು ಅರಣ್ಯ ಇಲಾಖೆ, ಗ್ರಾಮ ಪಂಚಾಯತ, ಸಮಿತಿ ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಮಾತನಾಡಿ, ಜೀವವೈವಿಧ್ಯ ಸಮಿತಿಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕಾಗಿದೆ. ಜೀವವೈವಿಧ್ಯ ಸಂಕುಲದ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಹಸ್ರಳ್ಳಿ ಕೆರೆ ಮೇಲಿನ ಒತ್ತುವರಿಯನ್ನು ತಡೆಗಟ್ಟುವ ಬಗ್ಗೆ ಸ್ಥಳೀಯರು ದೂರನ್ನು ನೀಡಿದರು. ಕೆರೆ ಸಂರಕ್ಷಣೆ, ಬೇಡ್ತಿ ನದಿ ತಟದಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿ ಮತ್ತು ಅಕ್ರಮ ಮರಳು ಸಾಗಣೆ ತಡೆಯುವ ಬಗ್ಗೆ ಅಧಿಕಾರಿಗಳು ಚರ್ಚಿಸಿದರು. ಅಲ್ಲಿಗೆ ಬರುವ ಅಪರೂಪದ ಪಕ್ಷಿಸಂಕುಲಗಳ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಲಾಯಿತು.
ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ ಮಾದರಿ ಜೀವವೈವಿಧ್ಯ ಸಮಿತಿಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ವಿವರ ನೀಡಿದರು.
ಈ ನಾಲ್ಕು ಜೀವವೈವಿಧ್ಯ ತಾಣಗಳಿಗೆ ಭೇಟಿ ನೀಡಿದ ತಂಡದಲ್ಲಿ.ಆರ್.ಹೆಗಡೆ ತೊಂಡೆಕೆರೆ, ಕೆ.ಎಸ್.ಭಟ್ಟ ಆನಗೋಡ, ಚಂದ್ಗುಳಿ ಪಂಚಾಯತ ಅಧ್ಯಕ್ಷೆ ಶಿಲ್ಪಾ ರವಿ ನಾಯ್ಕ, ಸದಸ್ಯರಾದ ಆರ್.ಎಸ್.ಭಟ್ಟ, ನೇತ್ರಾವತಿ ಹೆಗಡೆ, ಮದನೂರು ಪಂಚಾಯತ ಅಧ್ಯಕ್ಷ ರಾಜೇಶ ತಿನೇಕರ್, ಸದಸ್ಯ ಶಹಪೂರಕರ್, ದೆಹಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀಪತಿ ಮುದ್ದೆಪಾಲ್, ಉಪಾಧ್ಯಕ್ಷ ಮಂಜುನಾಥ ಗುಮ್ಮಾನಿ, ಸದಸ್ಯರುಗಳು, ಏಸಿಎಫ್ ಹಿಮವತಿ ಭಟ್ಟ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ದನವಾಡಕರ್, ಯಲ್ಲಾಪುರ ವಲಯ ಅರಣ್ಯಾಧಿಕಾರಿ ನರೇಶ ಜಿ.ವಿ, ಡಿ.ಆರ್.ಎಫ್ ಓ ಗಳಾದ ಅಶೋಕಹಳ್ಳಿ, ಪ್ರಭಾಕರ, ಅಲ್ತಾಪ್, ಶಿವಾನಂದ ಕಾರಟ್ಟಿ, ಪಿಡಿಓಗಳಾದ ರಾಜೇಶ ಶೇಟ್ ಚಂದ್ಗುಳಿ, ನಸ್ರೀನಾ, ನಾರಾಯಣ ಗೌಡ ಆನಗೋಡ, ಕಾರ್ಯದರ್ಶಿ ತುಕಾರಾಮ ನಾಯ್ಕ, ಬಿಷ್ಣಪ್ಪ ಚಲವಾದಿ ಮದನೂರು, ತಾ.ಪಂ ಯೋಜನಾಧಿಕಾರಿ ರಾಘವ, ವಿಷಯ ನಿರ್ವಾಹಕಿ ಮಮತಾ ಗೌಡ, ಕೃಷಿ ಇಲಾಖೆಯ ಎಂ.ಜಿ.ಭಟ್ಟ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಯಾಪ್ರದೇಶದಲ್ಲಿ ಗ್ರಾಮಸ್ಥರು, ಜೇನು ತಜ್ಞ ರಾಮಾ ಮರಾಠಿ ಸೇರದಂತೆ ನಾಟಿವೈದ್ಯರು ಮತ್ತಿತರರು ಪಾಲ್ಗೊಂಡಿದ್ದರು.
.