


ಕಾರ್ಯಕ್ರಮದ ವಿವರಗಳು :
ಗಣೇಶೋತ್ಸವವು ಸೆಪ್ಟೆಂಬರ್ 7ರಿಂದ 11ರವರೆಗೆ ನಡೆಯುತ್ತಿದ್ದು, ಯಲ್ಲಾಪುರ ಅರಣ್ಯ ಇಲಾಖೆಯ ಆವರಣದಲ್ಲಿ ಪ್ರತಿದಿನವೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿವೆ. 7ರಂದು ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಉತ್ಸವ ಪ್ರಾರಂಭಗೊಂಡು, 8ರಂದು ಮಹಿಳೆಯರಿಗೆ ರಂಗೋಲಿ, ಸಂಗೀತ ಖುರ್ಚಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 9ರಂದು ಪುರುಷರು ಮತ್ತು ಮಹಿಳೆಯರಿಗೆ ಕೇರಮ್ ಮತ್ತು ಚೆಸ್ ಸ್ಪರ್ಧೆಗಳು ನಡೆಯಿತು.
ಇಂದು (10 ಸೆಪ್ಟೆಂಬರ್) ಮುಖ್ಯ ದಿನವಾಗಿದ್ದು, ಗಣಹೋಮ, ಕಲಶ ಪೂಜಾ, ಮತ್ತು ಅನ್ನಸಂತರ್ಪಣೆ ನಡೆದಿವೆ. ಸಾಯಂಕಾಲದ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿದೆ. 11 ರಂದು ಮಹಾಪೂಜೆ, ಫಲಾವಳಿ ಸವಾಲು, ಮತ್ತು ಮಂಗಲಮೂರ್ತಿ ವಿಸರ್ಜನೆ ಜರುಗಲಿವೆ.
ಈ ಕಾರ್ಯಕ್ರಮಗಳು ಯಲ್ಲಾಪುರ ಅರಣ್ಯ ಇಲಾಖೆಯ ಉಸ್ತುವಾರಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು, ಮುಸ್ಲಿಂ ಮತ್ತು ಹಿಂದೂ ಸಮುದಾಯದ ಸಕ್ರಿಯ ಸಹಭಾಗಿತ್ವವು ಮಹತ್ವದ ಅಂಶವಾಗಿದೆ. ಅಲ್ತಾಫ್ ಚೌಕಡಾಕ್ ಹಾಗೂ ಶಾನವಾಜ್ ಮುಲ್ತಾನಿ, ಮುಂತಾದವರು, ಈ ಕಾರ್ಯಕ್ರಮದ ಆಯೋಜನೆ, ಮೂರ್ತಿ ಪ್ರತಿಷ್ಠಾಪನೆ, ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾವೈಕ್ಯತೆ ಮತ್ತು ಧಾರ್ಮಿಕ ಸೌಹಾರ್ದತೆ :
ಅರಣ್ಯ ಇಲಾಖೆಯ ಈ ಆಚರಣೆಗಳು, ಕೇವಲ ಧಾರ್ಮಿಕ ಹಬ್ಬವಾಗಿಯೇ ಉಳಿಯದೆ, ವಿಭಿನ್ನ ಧರ್ಮದ ಜನರು ಒಂದೆಡೆ ಸೇರಿ, ಪರಸ್ಪರ ಸಹಾನುಭೂತಿಯಿಂದ ಮತ್ತು ಗೌರವದಿಂದ ನಡವಳಿಕೆಯಿಂದ ವರ್ತಿಸಬಹುದೆಂಬ ಉದಾಹರಣೆ ಕೊಟ್ಟಿವೆ. ಇಂತಹ ಕಾರ್ಯಕ್ರಮಗಳು, ಧರ್ಮಗಳ ಅಂತರವನ್ನು ಮೀರಿಸಿ, ಸಹಜೀವನದ, ಸಹಕಾರದ, ಮತ್ತು ಸೌಹಾರ್ದತೆಯ ಜಾಲವನ್ನು ಹೆಣೆಯುತ್ತವೆ.
ಭಕ್ತಾದಿಗಳ ಅಭಿಪ್ರಾಯ:&nbಜsp;
ಯಲ್ಲಾಪುರದ ಈ ಆಚರಣೆಗಳು ಕೇವಲ ಆಡಳಿತ ಕಚೇರಿ ಮಟ್ಟದಲ್ಲಿ ಮಾತ್ರವಲ್ಲ, ಸಾರ್ವಜನಿಕರು ಮತ್ತು ವಿವಿಧ ಧಾರ್ಮಿಕ ಸಮುದಾಯಗಳ ಗಮನ ಸೆಳೆಯುತ್ತಿವೆ. ಡಿಆರ್‌ಎಫ್ಓ ಗಸ್ತು ವನಪಾಲಕರಾದ ಅಲ್ತಾಫ್, ಶಾನವಾಜ್, ಮತ್ತು ಇತರರು ಮಾಡಿದ ಕಾರ್ಯಗಳು, ಮುಸ್ಲಿಂ ಮತ್ತು ಹಿಂದೂ ಸಮುದಾಯಗಳ ಭಾವೈಕ್ಯತೆಗೆ, ಸಹಜೀವನಕ್ಕೆ ಆದರ್ಶವಾಗಿವೆ.


.
.
.