Adv

news21 ‌ ‌YELLAPURNews prakatane --------- ‌ ‌patanakaroct10to17pydkumar Oct9to15 ‌ ‌ ‌ ‌ ‌ oct5to15-pyd ‌‌ ‌ Vishal-sep13to-unlimited ‌ ‌ ‌ ‌ IMG-20241009-195526

Thursday, 12 September 2024

ಶಿರೂರು ಗುಡ್ಡ ಕುಸಿತದ ಕುಟುಂಬಕ್ಕೆ ಉದ್ಯೋಗ ಭರವಸೆ ಈಡೇರಿಸಿದ ಸಚಿವರಿಗೆ ನಾಗರಿಕ ವೇದಿಕೆಯ ರಾಮು ನಾಯ್ಕರಿಂದ ಅಭಿನಂದನೆ

IMG-20240912-125233 ಯಲ್ಲಾಪುರ: ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡ ಜಗನ್ನಾಥ ನಾಯ್ಕ ಕುಟುಂಬಕ್ಕೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈಧ್ಯ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಸತೀಶ ಸೈಲ್‌ರವರು ಸಾಂತ್ವನದ ವೇಳೆ ನೀಡಿದ್ದ ಉದ್ಯೋಗ ಭರವಸೆಯನ್ನು ಈಡೇರಿಸಿದ್ದಾರೆ. ಈ ಕುರಿತು ನೆನಪಿಸಿಕೊಂಡ, ಯಲ್ಲಾಪುರದ ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ, "ಸಚಿವರು ತಮ್ಮ ಮಾತು ಉಳಿಸಿಕೊಂಡಿದ್ದು, ಸ್ವಾಗತಾರ್ಹ" ಸಚಿವರು ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. IMG-20240912-125222 ಶಿರೂರು ಗುಡ್ಡ ಕುಸಿತವು ಎರಡು ತಿಂಗಳ ಹಿಂದೆ ಸಂಭವಿಸಿದ್ದು, ಈ ದುರಂತದಲ್ಲಿ ಹಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದರು. ಜಗನ್ನಾಥ ನಾಯ್ಕ ಕುಟುಂಬವು ದುಃಖದಲ್ಲಿ ಮುಳುಗಿತ್ತು. ಅವರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು, ಜೀವನವನ್ನು ಮುಂದುವರೆಸುವ ದಾರಿ ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ, ದುರಂತದ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಂಕಾಳು ವೈಧ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಸತೀಶ ಸೈಲ್ ಯವರು, ಕುಟುಂಬದ ಇಬ್ಬರಿಗೆ ಉದ್ಯೋಗದ ಭರವಸೆ ನೀಡಿದ್ದರು. 
   ಜಗನ್ನಾಥ ನಾಯ್ಕರ ಪುತ್ರಿ ಕೃತಿಕಾ ಮತ್ತು ಪಲ್ಲವಿ ಅವರಿಗೆ ತಾತ್ಕಾಲಿಕವಾಗಿ ಕೈಗಾ ಅಣು ಶಕ್ತಿ ಸ್ಥಾವರ ಮತ್ತು ಕಾರವಾರ ಪ್ರವಾಸೋಧ್ಯಮ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿದ್ದು, ಇವು ಅವರಿಗೆ ಆರ್ಥಿಕ ಸಹಾಯದ ಜೊತೆಗೆ ಭವಿಷ್ಯದಲ್ಲಿ ಒಂದು ಚಿಕ್ಕ ಬೆಳಕು ಮೂಡಿಸಿವೆ. ದುರಂತದ ಪರಿಣಾಮವಾಗಿ ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದರೂ, ಈಗ ಅವರ ಜೀವನದಲ್ಲಿ ಹೊಸ ಬೆಳವಣಿಗೆಗಳು ಕಾಣಿಸುತ್ತಿವೆ. 
    ಈ ಬೆಳವಣಿಗೆ ಕುರಿತಂತೆ ರಾಮು ನಾಯ್ಕ ಮಾತನಾಡಿ, "ರಾಜಕಾರಣಿಗಳು ಹಲವಾರು ಬಾರಿ ದುರಂತಗಳ ಸಂದರ್ಭದಲ್ಲಿ ಭರವಸೆ ನೀಡುತ್ತಾರೆ. ಆದರೆ ಅವುಗಳನ್ನು ಈಡೇರಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಶಿರೂರು ಘಟನೆಯಲ್ಲಿ, ಸಚಿವರು ತಮ್ಮ ಮಾತನ್ನು ಬೇಗನೆ ಪೂರೈಸಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆ" ಎಂದಿದ್ದಾರೆ. 
    ಹೆಚ್.ಡಿ.ಕುಮಾರಸ್ವಾಮಿ, ಮಂಕಾಳು ವೈದ್ಯರು ಹಾಗೂ ಶಾಸಕ ಸತೀಶ ಸೈಲ್, ಜೆಡಿಎಸ್ ನಾಯಕ ಸೂರಜ ನಾಯ್ಕ ಸೋನಿ ಹಾಗೂ ಜಿಲ್ಲಾಡಳಿತದ ಸಹಕಾರದಿಂದ, ಈ ಕೆಲಸವನ್ನು ಸಾಧ್ಯ ಮಾಡಲಾಗಿದೆ ಎಂದು ನಾಗರಿಕ ವೇದಿಕೆಯ ಸಮನತಸ ವ್ಯಕ್ತಪಡಿಸಿದೆ. 
    ಶಿರೂರು ದುರಂತದಲ್ಲಿ ಇನ್ನೂ ಅನೇಕರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಲೇ ಇದೆ. ಈ ಕುರಿತು ರಾಮು ನಾಯ್ಕ, "ಮತ್ತೆ ಹಲವಾರು ಕುಟುಂಬಗಳು ತಮ್ಮ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿವೆ. ಈ ಕುಟುಂಬಗಳ ಬವಣೆಗಳನ್ನು ಸಮರ್ಪಕವಾಗಿ ಪರಿಹರಿಸಲು ಸರಕಾರವು ಇನ್ನಷ್ಟು ಗಮನಹರಿಸಬೇಕು" ಎಂದು ಆಗ್ರಹಿಸಿದ್ದಾರೆ.
.
.
.