ಕಾರ್ಯಕ್ರಮ ಉದ್ಘಾಟಿಸಿದ ನಾರಾಯಣ ಭಟ್ ಅವರು, ಹಿಂದು ಮಹಿಳೆಯರು ಹಾಗೂ ಯುವತಿಯರು ಹಣೆಗೆ ತಿಲಕ ಇಡದಿರುವುದು ಅಥವಾ ಕುಂಕುಮ ಇಟ್ಟುಕೊಳ್ಳದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಭಾಗವಹಿಸಿದವರಿಗೆ ಹನುಮಾನ್ ಚಾಲೀಸಾ ಕಿರು ಪುಸ್ತಕವನ್ನು ನೀಡಲಾಯಿತು. ಸುಮಂಗಲಿಯರಿಗೆ ಅಂಜನಾದ್ರಿ ಇಂದ ತಂದ ಸಿಂಧೂರ ಲೇಪಿತ ಅಕ್ಷತೆ ಮತ್ತು ಅರಿಶಿನ ಕುಂಕುಮವನ್ನು ಮುತ್ತೈದೆಯರ ನೇತೃತ್ವದಲ್ಲಿ ವಿತರಿಸಲಾಯಿತು. ಹನುಮಾನ್ ಮಾಲಾಧಾರಿಗಳಾದ ನಾಗಾರ್ಜುನ, ಬದ್ಧಿ, ರವಿ ದೇವಾಡಿಗ, ಚಂದನ ನಾಯ್ಕ, ನಂದನ್ ನಾಯ್ಕ, ಸುದೀಪ ಮುಂತಾದವರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಮುಖ್ಯ ಅತಿಥಿಗಳಾಗಿ ಸ್ವಾತಿ ಮತ್ತು ಸುಧೀರ್ ಕೊಡ್ಕಣಿ ದಂಪತಿಗಳು ಆಗಮಿಸಿದ್ದರು. ಇತರ ಅತಿಥಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಯಲ್ಲಾಪುರ ತಾಲೂಕ ಅಧ್ಯಕ್ಷ ಗಜಾನನ ನಾಯ್ಕ, ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ಅನಂತ್ ಗಾಂವ್ಕರ್ ಕಂಚಿಪಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಖಜಾಂಜಿ ನಾಗರಾಜ್ ಮದ್ಗುಣಿ, ಉಲ್ಲಾಸ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಹನುಮಾನ್ ಚಾಲೀಸಾ ಪಠಣದೊಂದಿಗೆ ಸಮಾರಂಭವು ಆರಂಭವಾಯಿತು.